ಕೀರ್ತನೆ 40:1-17

  • ಸರಿಸಾಟಿ ಇಲ್ಲದ ದೇವರಿಗೆ ಧನ್ಯವಾದ ಹೇಳಿ

    • ದೇವರ ಅದ್ಭುತಗಳನ್ನ ಎಣಿಸೋಕೆ ಆಗಲ್ಲ (5)

    • ದೇವರಿಗೆ ಬೇಕಾಗಿರೋದು ಬಲಿ ಅಲ್ಲ (6)

    • ‘ನಿನ್ನ ಇಷ್ಟವನ್ನ ಮಾಡೋದೇ ನನ್ನ ಆಸೆ’ (8)

ಗಾಯಕರ ನಿರ್ದೇಶಕನಿಗೆ ಸೂಚನೆ: ದಾವೀದನ ಮಧುರ ಗೀತೆ. 40  ನಾನು ಯೆಹೋವನಿಗಾಗಿ ತಾಳ್ಮೆಯಿಂದ ಕಾದೆ,*ನಾನು ಹೇಳೋದನ್ನ ಕೇಳಿಸ್ಕೊಳ್ಳೋಕೆ ಆತನು ಬಾಗಿದ,* ಸಹಾಯಕ್ಕಾಗಿ ನಾನಿಟ್ಟ ಮೊರೆಯನ್ನ ಕೇಳಿಸ್ಕೊಂಡ.+   ಹರಿಯೋ ಪ್ರವಾಹದ ನೀರಿಂದ ಆತನು ನನ್ನನ್ನ ಮೇಲಕ್ಕೆತ್ತಿದ,ಕೆಸರಿನ ಗುಂಡಿಯಿಂದ ಎಬ್ಬಿಸಿದ. ಕಡಿದಾದ ಬಂಡೆಗಳ ಮೇಲೆ ನನ್ನನ್ನ ನಿಲ್ಲಿಸಿ,ನನ್ನ ಪಾದಗಳನ್ನ ಸ್ಥಿರಮಾಡಿದ.   ಆಮೇಲೆ ಆತನು ನನ್ನ ಬಾಯಿಗೆ ಒಂದು ಹೊಸ ಹಾಡನ್ನ,+ನಮ್ಮ ದೇವರನ್ನ ಹೊಗಳೋ ಹಾಡನ್ನ ಹಾಕಿದ. ಇದನ್ನ ನೋಡಿ ಎಲ್ರೂ ಆಶ್ಚರ್ಯಪಡ್ತಾರೆ,ಯೆಹೋವನಲ್ಲಿ ಭರವಸೆ ಇಡ್ತಾರೆ.   ಯೆಹೋವನ ಮೇಲೆ ಭರವಸೆ ಇಡೋ ವ್ಯಕ್ತಿ ಖುಷಿಯಾಗಿ ಇರ್ತಾನೆ,ಪ್ರತಿಭಟಿಸೋ ಜನ್ರ ಹಿಂದೆ, ತಪ್ಪು ದಾರಿಯಲ್ಲಿ ನಡೆಯೋರ* ಹಿಂದೆ ಅವನು ಹೋಗಲ್ಲ.   ಯೆಹೋವನೇ, ನನ್ನ ದೇವರೇ ನೀನು ನಮಗಾಗಿ,ಎಷ್ಟೋ ಅದ್ಭುತಗಳನ್ನ ಮಾಡಿದ್ದೀಯ,ನಮ್ಮ ಬಗ್ಗೆ ತುಂಬ ಯೋಚಿಸ್ತೀಯ.+ ನಿನಗೆ ಸರಿಸಾಟಿ ಯಾರೂ ಇಲ್ಲ,+ನಾನು ಅದ್ರ ಬಗ್ಗೆ ಹೇಳೋಣ ಅಂದ್ರೆ, ಮಾತಾಡೋಣ ಅಂದ್ರೆ,ಅವಕ್ಕೆ ಲೆಕ್ಕಾನೇ ಇಲ್ಲ!+   ನೀನು ಬಲಿಯನ್ನಾಗಲಿ, ಅರ್ಪಣೆಯನ್ನಾಗಲಿ ಇಷ್ಟಪಡಲಿಲ್ಲ,+ನಾನು ಕೇಳಿಸ್ಕೊಳ್ಳೋ ತರ ನೀನು ನನ್ನ ಕಿವಿಗಳನ್ನ ತೆರೆದೆ.+ ನೀನು ಸರ್ವಾಂಗಹೋಮ ಬಲಿಯನ್ನಾಗಲಿ ಪಾಪಪರಿಹಾರಕ ಬಲಿಯನ್ನಾಗಲಿ ಕೇಳಲಿಲ್ಲ.+   ಆಮೇಲೆ ನಾನು ಹೀಗೆ ಹೇಳಿದೆ “ನೋಡು, ನಾನು ಬಂದಿದ್ದೀನಿ. ಸುರುಳಿಯಲ್ಲಿ* ನನ್ನ ಬಗ್ಗೆ ಇದೆ.+   ನನ್ನ ದೇವರೇ, ನಿನ್ನ ಇಷ್ಟವನ್ನ ಮಾಡೋದೇ ನನ್ನ ಆಸೆ,*+ನಿನ್ನ ನಿಯಮ ಪುಸ್ತಕ ನನ್ನ ಅಂತರಾಳದಲ್ಲಿದೆ.+   ಮಹಾ ಸಭೆಯಲ್ಲಿ ನಾನು ನಿನ್ನ ನೀತಿಯ ಸಿಹಿಸುದ್ದಿಯನ್ನ ಹೇಳ್ತೀನಿ.+ ನೋಡು! ಇದ್ರ ಬಗ್ಗೆ ಹೇಳದ ಹಾಗೆ ನಾನು ನನ್ನ ತುಟಿಗಳನ್ನ ಕಚ್ಚಿಕೊಂಡಿರಲ್ಲ,+ಯೆಹೋವನೇ, ಇದ್ರ ಬಗ್ಗೆ ನಿನಗೆ ಚೆನ್ನಾಗಿ ಗೊತ್ತು. 10  ನಾನು ನಿನ್ನ ನೀತಿಯನ್ನ ನನ್ನ ಹೃದಯದಲ್ಲಿ ಮುಚ್ಚಿಡಲ್ಲ. ನಿನ್ನ ನಂಬಿಗಸ್ತಿಕೆಯನ್ನ, ರಕ್ಷಣೆಯನ್ನ ಎಲ್ರಿಗೂ ಹೇಳ್ತೀನಿ. ಮಹಾ ಸಭೆಯಲ್ಲಿ ನಿನ್ನ ಶಾಶ್ವತ ಪ್ರೀತಿಯನ್ನ, ನಿನ್ನ ಸತ್ಯವನ್ನ ಬಚ್ಚಿಡಲ್ಲ.”+ 11  ಯೆಹೋವನೇ, ನನಗೆ ಕರುಣೆಯನ್ನ ತೋರಿಸದೆ ಇರಬೇಡ. ನಿನ್ನ ಶಾಶ್ವತ ಪ್ರೀತಿ ಮತ್ತು ನಿನ್ನ ಸತ್ಯ ಯಾವಾಗ್ಲೂ ನನ್ನನ್ನ ಕಾಪಾಡಲಿ.+ 12  ನನ್ನನ್ನ ಸುತ್ಕೊಂಡಿರೋ ಕಷ್ಟಗಳಿಗೆ ಲೆಕ್ಕಾನೇ ಇಲ್ಲ.+ ಎಷ್ಟು ತಪ್ಪುಗಳನ್ನ ಮಾಡಿದ್ದೀನಿ ಅಂದ್ರೆ ನಾನು ಎಲ್ಲಿ ಹೋಗಬೇಕು ಅಂತಾನೇ ಗೊತ್ತಾಗ್ತಿಲ್ಲ,+ಅವು ನನ್ನ ಕೂದಲಿಗಿಂತ ಜಾಸ್ತಿ ಇವೆ,ನಾನು ಧೈರ್ಯ ಕಳ್ಕೊಂಡಿದ್ದೀನಿ. 13  ಯೆಹೋವನೇ, ನನಗೆ ದಯೆ ತೋರಿಸು, ನನ್ನನ್ನ ಕಾಪಾಡು.+ ಯೆಹೋವನೇ, ಬೇಗ ಬಂದು ನನಗೆ ಸಹಾಯಮಾಡು.+ 14  ನನ್ನ ಪ್ರಾಣ ತೆಗೀಬೇಕು ಅಂತ ಇರೋ ಎಲ್ರಿಗೂನಾಚಿಕೆ, ಅವಮಾನ ಆಗಲಿ. ನನಗೆ ಕಷ್ಟ ಬಂದಾಗ ಖುಷಿಪಡೋರುಅವಮಾನದಿಂದ ವಾಪಸ್‌ ಹೋಗ್ಲಿ. 15  ಯಾರು ನನ್ನನ್ನ ನೋಡಿ “ನಿಂಗೆ ಹಂಗೆ ಆಗಬೇಕು!” ಅಂತಾರೋ,ಅವರಿಗಾಗೋ ಅವಮಾನದಿಂದ ಅವ್ರೇ ಭಯಪಡಲಿ. 16  ಆದ್ರೆ ಯಾರು ನಿನ್ನನ್ನ ಹುಡುಕ್ತಾರೋ,+ಅವರು ನಿನ್ನಲ್ಲಿ ಖುಷಿಪಡಲಿ, ನಿನ್ನಲ್ಲಿ ಉಲ್ಲಾಸಿಸಲಿ.+ ನಿನ್ನ ರಕ್ಷಣೆಯ ಕಾರ್ಯಗಳನ್ನ ಪ್ರೀತಿಸೋರು,“ಯೆಹೋವನಿಗೆ ಗೌರವ ಸಿಗಲಿ”+ ಅಂತ ಯಾವಾಗ್ಲೂ ಹೇಳಲಿ. 17  ಯೆಹೋವ ನನ್ನ ಕಡೆ ಗಮನ ಕೊಡಲಿ,ಯಾಕಂದ್ರೆ ನಾನು ನಿಸ್ಸಹಾಯಕ, ಬಡವ. ನನ್ನ ದೇವರೇ ತಡಮಾಡಬೇಡ,+ನೀನೇ ನನ್ನ ಸಹಾಯಕ, ನನ್ನ ರಕ್ಷಕ.+

ಪಾದಟಿಪ್ಪಣಿ

ಅಕ್ಷ. “ಮನಸಾರೆ ನಿರೀಕ್ಷಿಸಿದೆ.”
ಅಕ್ಷ. “ತನ್ನ ಕಿವಿಗಳನ್ನ ಬಗ್ಗಿಸಿದ.”
ಅಥವಾ “ಸುಳ್ಳುಗಾರರ.”
ಅಕ್ಷ. “ಗ್ರಂಥದ ಸುರುಳಿಯಲ್ಲಿ.”
ಅಥವಾ “ಸಂತೋಷ.”