ಕೀರ್ತನೆ 125:1-5

  • ಯೆಹೋವ ತನ್ನ ಜನ್ರನ್ನ ಕಾಪಾಡ್ತಾನೆ

    • “ಯೆರೂಸಲೇಮಿನ ಸುತ್ತ ಬೆಟ್ಟಗಳು ಇರೋ ಹಾಗೆ” (2)

    • “ಇಸ್ರಾಯೇಲಲ್ಲಿ ಶಾಂತಿ ಇರಲಿ” (5)

ಯಾತ್ರೆ ಗೀತೆ. 125  ಯೆಹೋವನಲ್ಲಿ ಭರವಸೆ ಇಡೋರು+ಯಾವತ್ತೂ ಕದಲದ, ಯಾವಾಗ್ಲೂ ಇರೋಚೀಯೋನ್‌ ಬೆಟ್ಟದ ತರ ಇದ್ದಾರೆ.+   ಯೆರೂಸಲೇಮಿನ ಸುತ್ತ ಬೆಟ್ಟಗಳು ಇರೋ ಹಾಗೆ,+ಇವತ್ತಿಂದ ಎಂದೆಂದಿಗೂಯೆಹೋವ ತನ್ನ ಜನ್ರ ಸುತ್ತ ಇರ್ತಾನೆ.+   ನೀತಿವಂತರ ದೇಶವನ್ನ ದುಷ್ಟ ರಾಜರು ಆಳ್ತಾನೇ ಇರಲ್ಲ.+ ಹಾಗಿದ್ರೆ ನೀತಿವಂತರು ತಪ್ಪು ದಾರಿ ಕಡೆ ತಿರುಗಿಬಿಡ್ತಾರೆ.+   ಯೆಹೋವನೇ, ಒಳ್ಳೆಯವರಿಗೆಪ್ರಾಮಾಣಿಕ ಹೃದಯ ಇರೋರಿಗೆ ಒಳ್ಳೇದನ್ನೇ ಮಾಡು.+   ಸೊಟ್ಟ ದಾರಿಗೆ ತಿರುಗೋ ಜನ್ರನ್ನಕೆಟ್ಟವರ ಜೊತೆ ಯೆಹೋವ ನಾಶಮಾಡಿಬಿಡ್ತಾನೆ.+ ಇಸ್ರಾಯೇಲಲ್ಲಿ ಶಾಂತಿ ನೆಮ್ಮದಿ ಇರಲಿ.

ಪಾದಟಿಪ್ಪಣಿ