ಕೀರ್ತನೆ 78:1-72

  • ದೇವರ ಕಾಳಜಿ ಮತ್ತು ಇಸ್ರಾಯೇಲ್ಯರಿಗೆ ಕಮ್ಮಿ ನಂಬಿಕೆ

    • ಮುಂದಿನ ಪೀಳಿಗೆಗೆ ಹೇಳಿ (2-8)

    • “ಅವರು ದೇವರಲ್ಲಿ ನಂಬಿಕೆ ಇಡಲಿಲ್ಲ” (22)

    • “ಸ್ವರ್ಗದ ಧಾನ್ಯ” (24)

    • “ಇಸ್ರಾಯೇಲಿನ ಪವಿತ್ರ ದೇವರನ್ನ ಸಂಕಟಪಡಿಸಿದ್ರು” (41)

    • ಈಜಿಪ್ಟಿಂದ ಮಾತು ಕೊಟ್ಟ ದೇಶಕ್ಕೆ (43-55)

    • “ದೇವರಿಗೆ ಸವಾಲು ಹಾಕ್ತಾನೇ ಇದ್ರು” (56)

ಮಸ್ಕಿಲ್‌.* ಆಸಾಫನ+ ಕೀರ್ತನೆ. 78  ನನ್ನ ಜನ್ರೇ, ನನ್ನ ಉಪದೇಶ* ಕೇಳಿಸ್ಕೊಳ್ಳಿ,ನನ್ನ ಬಾಯಿಂದ ಬರೋ ಮಾತುಗಳನ್ನ ಕೇಳಿಸ್ಕೊಳ್ಳಿ.  2  ನಾನು ಗಾದೆಗಳ ಮೂಲಕ ಮಾತಾಡ್ತೀನಿ,ಹಳೇ ಕಾಲದ ಒಗಟುಗಳನ್ನ ಹೇಳ್ತೀನಿ.+  3  ನಾವು ಕೇಳಿಸ್ಕೊಂಡ, ನಮಗೆ ಗೊತ್ತಿರೋ ವಿಷ್ಯಗಳನ್ನ,ನಮ್ಮ ಅಪ್ಪಂದಿರು ನಮಗೆ ಹೇಳಿಕೊಟ್ಟಿದ್ದನ್ನ,+  4  ನಾವು ನಮ್ಮ ಮಕ್ಕಳಿಗೆ ಹೇಳದೆ ಇರಲ್ಲ,ಹೊಗಳಲೇ ಬೇಕಾದ ಯೆಹೋವನ ಕೆಲಸಗಳನ್ನ ಮತ್ತು ಆತನ ಶಕ್ತಿಯನ್ನ,+ಆತನು ಮಾಡಿದ ಅದ್ಭುತಗಳನ್ನ+ನಾವು ಮುಂದೆ ಬರೋ ಪೀಳಿಗೆಗೆ ಹೇಳೇ ಹೇಳ್ತೀವಿ.+  5  ಆತನು ಯಾಕೋಬನಿಗೆ ಒಂದು ವಿಷ್ಯ ಜ್ಞಾಪಿಸಿದಇಸ್ರಾಯೇಲ್ಯರಿಗೆ ನಿಯಮ ಪುಸ್ತಕ ಕೊಟ್ಟ,ಈ ವಿಷ್ಯಗಳನ್ನ ನಿಮ್ಮ ಮಕ್ಕಳಿಗೆ ತಿಳಿಸಬೇಕು ಅಂತಆತನು ನಮ್ಮ ಪೂರ್ವಜರಿಗೆ ಆಜ್ಞೆ ಕೊಟ್ಟ.+  6  ಆಗಲೇ ಮುಂದೆ ಬರೋ ಪೀಳಿಗೆಗೆ,ಹುಟ್ಟೋ ಮಕ್ಕಳಿಗೆ ಅದ್ರ ಬಗ್ಗೆ ತಿಳ್ಕೊಳ್ಳೋಕೆ ಆಗುತ್ತೆ.+ ಅಷ್ಟೇ ಅಲ್ಲ ಅದನ್ನ ಅವ್ರ ಮಕ್ಕಳಿಗೂ ಹೇಳಿಕೊಡ್ತಾರೆ.+  7  ಆಗ ಅವರು ದೇವರ ಮೇಲೆ ಭರವಸೆ ಇಡ್ತಾರೆ,ದೇವರು ಮಾಡಿದ್ದನ್ನ ಮರೀದೆ+ಆತನ ಆಜ್ಞೆಗಳನ್ನ ಪಾಲಿಸ್ತಾರೆ.+  8  ಆಗ ಅವರು ತಮ್ಮ ಪೂರ್ವಜರ ತರ ಆಗಲ್ಲ,ಅವ್ರ ಪೂರ್ವಜರು ಮೊಂಡರೂ ದಂಗೆಕೋರರೂ ಆಗಿದ್ರು,+ಅವ್ರ ಹೃದಯ ಚಂಚಲವಾಗಿತ್ತು,+ಅವರು ದೇವರಿಗೆ ನಂಬಿಕೆ ದ್ರೋಹ ಮಾಡಿದ್ರು.  9  ಎಫ್ರಾಯೀಮ್ಯರ ಹತ್ರ ಬಿಲ್ಲುಗಳಿದ್ರೂ,ಯುದ್ಧದ ದಿನ ಓಡಿಹೋದ್ರು. 10  ಅವರು ದೇವರ ಒಪ್ಪಂದ ಪಾಲಿಸಲಿಲ್ಲ,+ಆತನ ನಿಯಮ ಪುಸ್ತಕದ ಪ್ರಕಾರ ನಡೆಯೋಕೆ ಒಪ್ಪಲಿಲ್ಲ.+ 11  ಅಷ್ಟೇ ಅಲ್ಲ ದೇವರು ಮಾಡಿದ್ದನ್ನ,ಆತನು ಅವ್ರಿಗೆ ತೋರಿಸಿದ ಅದ್ಭುತಗಳನ್ನ+ ಅವರು ಮರೆತುಬಿಟ್ರು.+ 12  ಈಜಿಪ್ಟಲ್ಲಿ, ಸೋನ್‌ ಪ್ರದೇಶದಲ್ಲಿ+ಆತನು ಅವ್ರ ಪೂರ್ವಜರ ಕಣ್ಮುಂದೆ ಆಶ್ಚರ್ಯ ಹುಟ್ಟಿಸೋ ಕೆಲಸಗಳನ್ನ ಮಾಡಿದ.+ 13  ಅವರು ನಡೆದು ಹೋಗೋ ಹಾಗೆ ಸಮುದ್ರವನ್ನ ಎರಡು ಭಾಗ ಮಾಡಿದ,ನೀರನ್ನ ಅಣೆಕಟ್ಟಿನ* ಹಾಗೆ ನಿಲ್ಲಿಸಿದ.+ 14  ಆತನು ಅವ್ರನ್ನ ಹಗಲೆಲ್ಲ ಮೋಡದಿಂದರಾತ್ರಿಯೆಲ್ಲ ಬೆಂಕಿಯ ಬೆಳಕಿಂದ ನಡೆಸಿದ.+ 15  ಕಾಡಲ್ಲಿ ಬಂಡೆಗಳನ್ನ ಒಡೆದು,ಸಮುದ್ರದಷ್ಟು ನೀರನ್ನ ಕೊಟ್ಟ. ಆ ನೀರನ್ನ ಕುಡಿದು ಅವ್ರಿಗೆ ತೃಪ್ತಿ ಆಯ್ತು.+ 16  ಕಡಿದಾದ ಬಂಡೆಯಿಂದ ಆತನು ಪ್ರವಾಹ ತಂದ,ನದಿ ನೀರು ಹರಿಯೋ ತರ ನೀರನ್ನ ಹರಿಸಿದ.+ 17  ಆದ್ರೆ ಅವರು ಕಾಡಲ್ಲಿ ಸರ್ವೋನ್ನತನ ವಿರುದ್ಧ ದಂಗೆ ಎದ್ದು,ಆತನ ವಿರುದ್ಧ ಪಾಪ ಮಾಡ್ತಾನೇ ಇದ್ರು.+ 18  ಅವರು ಆಸೆಪಟ್ಟ ಆಹಾರಕ್ಕಾಗಿ ಹಠಹಿಡಿದು,ತಮ್ಮ ಹೃದಯದಲ್ಲಿ ದೇವರಿಗೇ ಸವಾಲು ಹಾಕಿದ್ರು.*+ 19  “ಈ ಕಾಡಲ್ಲಿ ನಮಗೆ ಊಟ ಕೊಡೋಕೆ ದೇವರಿಂದ ಆಗುತ್ತಾ?” ಅಂತ ದೇವರ ವಿರುದ್ಧ ಮಾತಾಡಿದ್ರು.+ 20  ಆತನು ಬಂಡೆಯನ್ನ ಹೊಡೆದ,ಆಗ ನೀರು ಪ್ರವಾಹದ ತರ ಹರೀತು.+ ಹಾಗಿದ್ರೂ ಅವರು “ನಮಗೆ ಆತನು ರೊಟ್ಟಿ ಕೊಡೋಕೆ ಆಗುತ್ತಾ? ತನ್ನ ಜನ್ರಿಗೆ ಮಾಂಸ ಕೊಡೋಕೆ ಆಗುತ್ತಾ?” ಅಂತ ಕೇಳಿದ್ರು.+ 21  ಅವ್ರ ಮಾತನ್ನ ಯೆಹೋವ ಕೇಳಿಸ್ಕೊಂಡಾಗ ಆತನಿಗೆ ತುಂಬ ಕೋಪ ಬಂತು,+ಯಾಕೋಬನ ವಿರುದ್ಧ ಬೆಂಕಿ+ ಹೊತ್ತಿ ಉರೀತು,ಇಸ್ರಾಯೇಲಿನ ವಿರುದ್ಧ ಆತನ ರೋಷಾಗ್ನಿ ಭುಗಿಲೆದ್ದಿತು.+ 22  ಯಾಕಂದ್ರೆ ಅವರು ದೇವರ ಮೇಲೆ ನಂಬಿಕೆ ಇಡಲಿಲ್ಲ,+ಅವ್ರನ್ನ ರಕ್ಷಿಸೋಕೆ ಆತನಿಗೆ ಶಕ್ತಿ ಇದೆ ಅನ್ನೋ ಭರವಸೆ ಅವ್ರಿಗೆ ಇರಲಿಲ್ಲ. 23  ಹಾಗಾಗಿ ಆತನು ಆಕಾಶದ ಮೇಘಗಳಿಗೆ ಆಜ್ಞೆ ಕೊಟ್ಟ,ಗಗನದ ಬಾಗಿಲುಗಳನ್ನ ತೆರೆದ. 24  ಆತನು ಅವ್ರಿಗೆ ತಿನ್ನೋಕೆ ಮನ್ನ ಸುರಿಸ್ತಾ ಇದ್ದ,ಆತನು ಅವ್ರಿಗೆ ಸ್ವರ್ಗದ ಧಾನ್ಯವನ್ನ ಕೊಟ್ಟ.+ 25  ದೇವದೂತರ* ಆಹಾರವನ್ನ ಮನುಷ್ಯರು ತಿಂದ್ರು,+ತೃಪ್ತಿಯಾಗುವಷ್ಟು ಆಹಾರವನ್ನ ಆತನು ಅವ್ರಿಗೆ ಕೊಟ್ಟ.+ 26  ಆಕಾಶದಲ್ಲಿ ಪೂರ್ವದ ಗಾಳಿ ಎಬ್ಬಿಸಿ,ತನ್ನ ಶಕ್ತಿಯಿಂದ ದಕ್ಷಿಣ ಗಾಳಿಯನ್ನ ಬೀಸೋ ಹಾಗೆ ಮಾಡಿದ.+ 27  ಧೂಳಿನ ತರ ಮಾಂಸವನ್ನ ಅವ್ರ ಮೇಲೆ ಸುರಿಸಿದ,ಸಮುದ್ರ ತೀರದ ಮರಳಿನಷ್ಟು ಪಕ್ಷಿಗಳನ್ನ ಅವ್ರಿಗೆ ಕೊಟ್ಟ. 28  ಆತನು ಪಕ್ಷಿಗಳನ್ನ ತನ್ನ ಪಾಳೆಯದ ಮಧ್ಯದಲ್ಲಿ ಬೀಳೋ ಹಾಗೆ ಮಾಡಿದ,ಅವನ್ನ ತನ್ನ ಡೇರೆ ಸುತ್ತ ಬೀಳಿಸಿದ. 29  ಹೊಟ್ಟೆ ಬಿರಿಯೋ ತನಕ ಅವರು ತಿಂದ್ರು,ಅವರು ಬಯಸಿದ್ದನ್ನ ಅವ್ರಿಗೆ ಕೊಟ್ಟ.+ 30  ಆದ್ರೆ ಅವರು ತಮ್ಮ ಆಸೆಗೆ ಕಡಿವಾಣ ಹಾಕಲಿಲ್ಲ,ಅವ್ರ ಬಾಯಲ್ಲಿ ಇನ್ನೂ ಊಟ ಇರೋವಾಗ್ಲೇ, 31  ದೇವರ ಕೋಪ ಅವ್ರ ಮೇಲೆ ಹೊತ್ತಿ ಉರೀತು.+ ಆತನು ಅವ್ರ ಶಕ್ತಿಶಾಲಿ ಗಂಡಸರನ್ನ ಕೊಂದುಹಾಕಿದ,+ಇಸ್ರಾಯೇಲಿನ ಯುವಕರನ್ನ ನೆಲಕ್ಕೆ ಉರುಳಿಸಿದ. 32  ಇಷ್ಟಾದ್ರೂ ಅವರು ಸುಮ್ಮನಿರದೆ ಇನ್ನೂ ಪಾಪ ಮಾಡಿದ್ರು+ಆತನ ಅದ್ಭುತಗಳಲ್ಲಿ ನಂಬಿಕೆ ಇಡಲಿಲ್ಲ.+ 33  ಹಾಗಾಗಿ ಆತನು ಒಂದು ಉಸಿರಿನ ಹಾಗೆ ಅವ್ರ ದಿನಗಳನ್ನ,+ಕ್ಷಣಮಾತ್ರದಲ್ಲೇ ವಿಪತ್ತುಗಳಿಂದ ಅವ್ರ ಆಯಸ್ಸನ್ನ ಮುಗಿಸಿಬಿಟ್ಟ. 34  ಆತನು ಅವ್ರನ್ನ ಕೊಲ್ಲುತ್ತಿದ್ದಾಗೆಲ್ಲ ಅವರು ಆತನನ್ನ ಹುಡುಕ್ತಿದ್ರು,+ವಾಪಸ್‌ ಬಂದು ಆತನಿಗಾಗಿ ನೋಡ್ತಿದ್ರು. 35  ಯಾಕಂದ್ರೆ ದೇವರು ತಮ್ಮ ಬಂಡೆ ಅಂತ ಅವರು ನೆನಪಿಸ್ಕೊಳ್ತಿದ್ರು+ಸರ್ವೋನ್ನತ ದೇವರು ನಮ್ಮನ್ನ ಬಿಡಿಸ್ತಾನೆ* ಅಂತ ಜ್ಞಾಪಿಸಿಕೊಳ್ತಿದ್ರು.+ 36  ಆದ್ರೆ ಅವರು ತಮ್ಮ ಬಾಯಿಂದ ಆತನನ್ನ ವಂಚಿಸೋಕೆ ಪ್ರಯತ್ನಿಸಿದ್ರುತಮ್ಮ ನಾಲಿಗೆಯಿಂದ ಆತನಿಗೆ ಸುಳ್ಳು ಹೇಳಿದ್ರು. 37  ಆತನ ಕಡೆ ಅವ್ರ ಹೃದಯ ಸ್ಥಿರವಾಗಿ ಇರಲಿಲ್ಲ,+ಆತನ ಒಪ್ಪಂದಕ್ಕೆ ಅವರು ನಂಬಿಗಸ್ತರಾಗಿ ಇರಲಿಲ್ಲ.+ 38  ಆದ್ರೆ ಆತನು ಕರುಣಾಮಯಿ,+ಆತನು ಅವ್ರ ತಪ್ಪುಗಳನ್ನ ಕ್ಷಮಿಸುತ್ತಿದ್ದ, ಅವ್ರನ್ನ ನಾಶಮಾಡ್ತಿರಲಿಲ್ಲ.+ ಕಡುಕೋಪದಿಂದ ಕೆರಳೋ ಬದಲಿಗೆ,ತುಂಬ ಸಲ ಆತನು ತನ್ನ ಕೋಪವನ್ನ ಹಿಡಿದಿಡುತ್ತಿದ್ದ.+ 39  ಯಾಕಂದ್ರೆ ಅವರು ಬರೀ ಮನುಷ್ಯರು,+ಒಂದ್‌ ಸಲ ಬೀಸಿ ಹೋಗೋ ಗಾಳಿ ತರ ಇದ್ದಾರೆ* ಅಂತ ಆತನು ನೆನಪಿಸ್ಕೊಳ್ತಿದ್ದ. 40  ಕಾಡಲ್ಲಿ ಎಷ್ಟೋ ಸಲ ಅವರು ಆತನಿಗೆ ತಿರುಗಿಬಿದ್ರು,+ಮರುಭೂಮಿಯಲ್ಲಿ ಅದೆಷ್ಟೋ ಸಲ ಆತನನ್ನ ನೋಯಿಸಿದ್ರು!+ 41  ಪದೇಪದೇ ಅವರು ದೇವರನ್ನ ಪರೀಕ್ಷಿಸಿದ್ರು,+ಇಸ್ರಾಯೇಲ್ಯರ ಪವಿತ್ರ ದೇವರನ್ನ ಸಂಕಟಪಡಿಸಿದ್ರು. 42  ಅವರು ಆತನ ಶಕ್ತಿಯನ್ನ* ನೆನಪಿಸ್ಕೊಳ್ಳಲಿಲ್ಲ,ಶತ್ರುವಿನ ಕೈಯಿಂದ ಆತನು ಬಿಡಿಸಿದ ದಿನವನ್ನ ಮರೆತುಬಿಟ್ರು.+ 43  ಈಜಿಪ್ಟಲ್ಲಿ ಆತನು ತೋರಿಸಿದ ಗುರುತುಗಳನ್ನ,+ಸೋನ್‌ ಪ್ರದೇಶದಲ್ಲಿ ಆತನು ಮಾಡಿದ ಅದ್ಭುತಗಳನ್ನ ಅವರು ಮರೆತುಬಿಟ್ರು. 44  ಆತನು ನೈಲ್‌ ನದಿ ನೀರನ್ನ ರಕ್ತ ಮಾಡಿದ,+ಅವರು ನದಿ ನೀರನ್ನ ಕುಡಿಯೋಕೆ ಆಗದ ಹಾಗೆ ಮಾಡಿದ. 45  ಅವ್ರನ್ನ ನುಂಗಿಹಾಕೋಕೆ ರಕ್ತಹೀರೋ ನೊಣಗಳನ್ನ,+ಅವ್ರನ್ನ ನಾಶಮಾಡೋಕೆ ಕಪ್ಪೆಗಳನ್ನ ಕಳಿಸಿದ.+ 46  ಆತನು ಅವ್ರ ಬೆಳೆಯನ್ನ ಹೊಟ್ಟೆಬಾಕ ಮಿಡತೆಗಳಿಗೆ ಕೊಟ್ಟ,ಆತನು ಅವ್ರ ಕೈಕೆಲಸದ ಫಲವನ್ನ ಮಿಡತೆಗಳ ಪಾಲುಮಾಡಿದ.+ 47  ಆಲಿಕಲ್ಲಿನ ಮಳೆಯಿಂದ+ ಅವ್ರ ದ್ರಾಕ್ಷಿಬಳ್ಳಿಯನ್ನ,ಅವ್ರ ಅತ್ತಿ ಮರಗಳನ್ನ ನಾಶಮಾಡಿದ. 48  ಅವ್ರ ಮೃಗಗಳನ್ನ ಆಲಿಕಲ್ಲಿನ ಮಳೆಗೆ,+ಅವ್ರ ಪ್ರಾಣಿಗಳನ್ನ ಸಿಡಿಲಿಗೆ* ಬಲಿಕೊಟ್ಟ. 49  ಆತನು ಅವ್ರ ಮೇಲೆ ತನ್ನ ರೋಷಾಗ್ನಿಯನ್ನ ಸುರಿಸಿದ,ಕೋಪ, ಕ್ರೋಧ ಮತ್ತು ಸಂಕಟಗಳನ್ನ ತಂದ,ಅವ್ರ ಮೇಲೆ ವಿಪತ್ತು ತರೋಕೆ ದೇವದೂತರ ದಂಡನ್ನ ಕಳಿಸಿದ. 50  ಆತನು ತನ್ನ ಕೋಪ ತೋರಿಸೋಕೆ ದಾರಿಮಾಡ್ಕೊಂಡ. ಸಾವಿಂದ ಅವ್ರನ್ನ ಕಾಪಾಡಲಿಲ್ಲ,ಅಂಟುರೋಗಗಳಿಗೆ ಅವ್ರನ್ನ* ಒಪ್ಪಿಸಿಬಿಟ್ಟ. 51  ಕೊನೆಗೆ ಆತನು ಈಜಿಪ್ಟಿನವರ ಮೊದಲ ಗಂಡುಮಕ್ಕಳನ್ನ ಕೊಂದುಹಾಕಿದ,+ಹಾಮನ ಡೇರೆಯಲ್ಲಿ ಮೊದಲು ಹುಟ್ಟಿದವ್ರಿಗೆ ಅಂತ್ಯ ಹಾಡಿದ. 52  ಆಮೇಲೆ ಆತನು ಕುರಿಗಳ ತರ ಜನ್ರನ್ನ ಹೊರಗೆ ಕರ್ಕೊಂಡು ಬಂದ,+ಕಾಡಲ್ಲಿ ಕುರುಬ ದಾರಿ ತೋರಿಸೋ ತರ ಅವ್ರಿಗೆ ದಾರಿ ತೋರಿಸಿದ. 53  ಆತನು ಅವ್ರನ್ನ ಸುರಕ್ಷಿತವಾಗಿ ನಡೆಸಿದ,ಅವರು ಯಾವುದಕ್ಕೂ ಭಯಪಡಲಿಲ್ಲ,+ಸಮುದ್ರ ಅವ್ರ ಶತ್ರುಗಳನ್ನ ಮುಳುಗಿಸ್ತು.+ 54  ಆತನು ಅವ್ರನ್ನ ತನ್ನ ಪವಿತ್ರ ದೇಶಕ್ಕೆ ಕರ್ಕೊಂಡು ಬಂದ,+ಆತನ ಬಲಗೈಯಿಂದ ಸಂಪಾದಿಸಿದ ಬೆಟ್ಟ ಪ್ರದೇಶಕ್ಕೆ ಕರ್ಕೊಂಡು ಬಂದ.+ 55  ಆತನು ಜನಾಂಗಗಳನ್ನ ಅವ್ರ ಮುಂದಿಂದ ಓಡಿಸಿಬಿಟ್ಟ,+ಅಳತೆಯ ದಾರದಿಂದ ಅಳೆದು ಅವ್ರಿಗೆ ಆಸ್ತಿ ಹಂಚಿಕೊಟ್ಟ,+ಇಸ್ರಾಯೇಲ್‌ ಕುಲಗಳು ತಮ್ಮತಮ್ಮ ಮನೆಯಲ್ಲಿ ವಾಸಿಸೋ ತರ ಮಾಡಿದ.+ 56  ಆದ್ರೆ ಅವರು ಸರ್ವೋನ್ನತ ದೇವ್ರಿಗೆ ಸವಾಲು ಹಾಕ್ತಾನೇ* ಇದ್ರು, ಆತನ ವಿರುದ್ಧ ದಂಗೆ ಏಳ್ತಾನೇ ಇದ್ರು,+ಆತನು ಮತ್ತೆ ಮತ್ತೆ ಹೇಳ್ತಿದ್ದ ವಿಷ್ಯಗಳಿಗೆ ಗಮನ ಕೊಡಲೇ ಇಲ್ಲ.+ 57  ಅವರೂ ದೇವರಿಗೆ ಬೆನ್ನು ಹಾಕಿದ್ರು, ತಮ್ಮ ಪೂರ್ವಜರ ತರ ಮೋಸ ಮಾಡಿದ್ರು.+ ಬಿಗಿಯಾಗಿರದ ಬಿಲ್ಲಿನ ತರ ಭರವಸೆ ಇಡೋಕೆ ಯೋಗ್ಯತೆ ಕಳ್ಕೊಂಡ್ರು.+ 58  ಅವರದ್ದೇ ದೇವಸ್ಥಾನಗಳನ್ನ ಮಾಡ್ಕೊಂಡು ಆತನಿಗೆ ಕೋಪ ಬರಿಸ್ತಾನೇ ಇದ್ರು,+ತಮ್ಮ ಕೆತ್ತಿದ ಮೂರ್ತಿಗಳಿಂದ ಆತನನ್ನ ರೇಗಿಸಿದ್ರು.+ 59  ದೇವರು ಇದನ್ನೆಲ್ಲ ನೋಡಿ ಕೋಪ ಮಾಡ್ಕೊಂಡ,+ಆತನು ಇಸ್ರಾಯೇಲ್ಯರನ್ನ ಸಂಪೂರ್ಣವಾಗಿ ಬಿಟ್ಟುಬಿಟ್ಟ. 60  ಕೊನೆಗೆ ಆತನು ಶೀಲೋನ ಪವಿತ್ರ ಡೇರೆಯನ್ನ,+ಮನುಷ್ಯರ ಮಧ್ಯ ತಾನು ವಾಸವಿದ್ದ ಡೇರೆಯನ್ನ ತೊರೆದುಬಿಟ್ಟ.+ 61  ಆತನು ತನ್ನ ಶಕ್ತಿಯ ಗುರುತನ್ನ ಸೆರೆಯಾಗಿ ಹೋಗೋಕೆ,ತನ್ನ ವೈಭವವನ್ನ ಶತ್ರುವಿನ ಕೈವಶವಾಗೋಕೆ ಬಿಟ್ಟುಬಿಟ್ಟ.+ 62  ಆತನು ತನ್ನ ಜನ್ರನ್ನ ಕತ್ತಿಗಳಿಗೆ ಒಪ್ಪಿಸಿದ,+ತನ್ನ ಸ್ವತ್ತಿನ ಮೇಲೆ ಕೋಪಮಾಡ್ಕೊಂಡ. 63  ಆತನ ಯುವಕರನ್ನ ಬೆಂಕಿ ನುಂಗಿಹಾಕ್ತು,ಆತನ ಕನ್ಯೆಯರಿಗಾಗಿ ಮದ್ವೆ ಹಾಡು ಕೇಳಿಸಲಿಲ್ಲ.* 64  ಆತನ ಪುರೋಹಿತರು ಕತ್ತಿಯಿಂದ ಸತ್ರು,+ಅವರ ವಿಧವೆಯರು ಅವ್ರಿಗಾಗಿ ಅಳಲಿಲ್ಲ.+ 65  ಆಗ ಯೆಹೋವ ನಿದ್ದೆಯಿಂದ ಏಳೋ ವ್ಯಕ್ತಿ ತರ ಎದ್ದ,+ದ್ರಾಕ್ಷಾಮದ್ಯದ ಮತ್ತಿನಿಂದ ಹೊರಗೆ ಬಂದ ಬಲಿಷ್ಠ ವ್ಯಕ್ತಿ ತರ ಎದ್ದ.+ 66  ಆತನು ತನ್ನ ಶತ್ರುಗಳನ್ನ ಓಡಿಸಿಬಿಟ್ಟ,+ಅವ್ರಿಗೆ ಯಾವಾಗ್ಲೂ ಅವಮಾನ ಆಗೋ ತರ ಮಾಡಿದ. 67  ಆತನು ಯೋಸೇಫನ ಡೇರೆಯನ್ನ ತೊರೆದುಬಿಟ್ಟ,ಎಫ್ರಾಯೀಮ್‌ ಕುಲವನ್ನ ಆರಿಸ್ಕೊಳ್ಳಲಿಲ್ಲ. 68  ಆದ್ರೆ ಆತನು ಯೆಹೂದ ಕುಲವನ್ನ,+ತಾನು ಪ್ರೀತಿಸೋ ಚೀಯೋನ್‌ ಬೆಟ್ಟವನ್ನ ಆರಿಸ್ಕೊಂಡ.+ 69  ಆತನು ತನ್ನ ಆರಾಧನಾ ಸ್ಥಳವನ್ನು ಯಾವಾಗ್ಲೂ ಇರೋ ಆಕಾಶದ ತರ,+ಶಾಶ್ವತವಾಗಿರೋ ಭೂಮಿ ತರ ಮಾಡಿದ.+ 70  ಆತನು ತನ್ನ ಸೇವಕ ದಾವೀದನನ್ನ ಆರಿಸ್ಕೊಂಡ,+ಅವನನ್ನ ಕುರಿ ದೊಡ್ಡಿಯಿಂದ ತಗೊಂಡ.+ 71  ಹಾಲು ಕೊಡೋ ಕುರಿಗಳನ್ನ ನೋಡ್ಕೊಳ್ತಿದ್ದ ಆ ವ್ಯಕ್ತಿಯನ್ನ,ಯಾಕೋಬನ ಮೇಲೆ, ತನ್ನ ಜನ್ರ ಮೇಲೆ ಕುರುಬನಾಗಿ ಮಾಡಿದ,+ತನ್ನ ಆಸ್ತಿಯಾಗಿರೋ ಇಸ್ರಾಯೇಲ್ಯರ ಮೇಲೆ ಕುರುಬನಾಗಿ ಮಾಡಿದ.+ 72  ದಾವೀದ ಶುದ್ಧ ಹೃದಯದಿಂದ ಅವ್ರನ್ನ ನಡೆಸಿದ,+ತನ್ನ ಕುಶಲ ಕೈಗಳಿಂದ ಅವ್ರನ್ನ ಮಾರ್ಗದರ್ಶಿಸಿದ.+

ಪಾದಟಿಪ್ಪಣಿ

ಅಥವಾ “ನಿಯಮಗಳನ್ನ.”
ಅಥವಾ “ಗೋಡೆ.”
ಅಕ್ಷ. “ಪರೀಕ್ಷಿಸಿದ್ರು.”
ಅಕ್ಷ. “ಬಲಿಷ್ಠರ.”
ಅಥವಾ “ನಮ್ಮ ಪರವಾಗಿ ಸೇಡು ತೀರಿಸ್ತಾನೆ.”
ಬಹುಶಃ, “ಜೀವ ಒಂದುಸಲ ಹೋದ್ರೆ ಹೇಗೆ ಮತ್ತೆ ಬರಲ್ವೋ ಹಾಗಿದ್ದಾರೆ.”
ಅಕ್ಷ. “ಕೈ.”
ಬಹುಶಃ, “ಜ್ವರಕ್ಕೆ.”
ಅಕ್ಷ. “ಅವರ ಜೀವವನ್ನ.”
ಅಕ್ಷ. “ದೇವರನ್ನ ಪರೀಕ್ಷಿಸ್ತಾನೇ.”
ಅಕ್ಷ. “ಆತನ ಕನ್ಯೆಯರನ್ನ ಕೊಂಡಾಡಲಿಲ್ಲ.”