ಕೀರ್ತನೆ 115:1-18
115 ನಮ್ಮನ್ನಲ್ಲ, ಯೆಹೋವನೇ, ನಮ್ಮನ್ನಲ್ಲ,*ನಿನ್ನ ಹೆಸ್ರನ್ನ ಮಹಿಮೆಪಡಿಸು,+ಯಾಕಂದ್ರೆ ನೀನು ಶಾಶ್ವತ ಪ್ರೀತಿಯ ದೇವರು, ನಂಬಿಗಸ್ತ ದೇವರು.+
2 ಬೇರೆ ಜನಾಂಗಗಳು “ಅವ್ರ ದೇವರು ಎಲ್ಲಿದ್ದಾನೆ?” ಅಂತಕೇಳೋಕೆ ಯಾಕೆ ಆಸ್ಪದ ಕೊಡಬೇಕು?+
3 ನಮ್ಮ ದೇವರು ಸ್ವರ್ಗದಲ್ಲಿ ಇದ್ದಾನೆ,ತನಗೆ ಇಷ್ಟ ಆಗೋದನ್ನೆಲ್ಲ ಆತನು ಮಾಡ್ತಾನೆ.
4 ಅವ್ರ ಮೂರ್ತಿಗಳನ್ನ ಬೆಳ್ಳಿಬಂಗಾರದಿಂದ ಮಾಡಿದ್ದಾರೆ,ಅವನ್ನ ಮಾಡಿರೋದು ಅವ್ರ ಕೈಗಳೇ.+
5 ಅವಕ್ಕೆ ಬಾಯಿದ್ರೂ ಮಾತಾಡೋಕೆ ಆಗಲ್ಲ.+
ಕಣ್ಣಿದ್ರೂ ನೋಡೋಕೆ ಆಗಲ್ಲ,
6 ಕಿವಿ ಇದ್ರೂ ಕೇಳಿಸ್ಕೊಳ್ಳೋಕೆ ಆಗಲ್ಲ,ಮೂಗಿದ್ರೂ ಮೂಸಲ್ಲ.
7 ಕೈ ಇದ್ರೂ ಮುಟ್ಟಲ್ಲ,ಕಾಲಿದ್ರೂ ನಡಿಯಲ್ಲ.+
ಗಂಟಲಿಂದ ಒಂದು ಶಬ್ದನೂ ಹೊರಗೆ ಬರಲ್ಲ.+
8 ಅವನ್ನ ಮಾಡೋರೂ ಅವುಗಳ ಮೇಲೆ ಭರವಸೆ ಇಡೋರೂ ಅವುಗಳ ತರಾನೇ ಆಗ್ತಾರೆ.+
9 ಇಸ್ರಾಯೇಲೇ ಯೆಹೋವನ ಮೇಲೆ ಭರವಸೆ ಇಡು,+ಆತನು ನಿನ್ನ ಸಹಾಯಕ, ನಿನ್ನ ಗುರಾಣಿ.+
10 ಆರೋನನ ಮನೆತನವೇ+ ಯೆಹೋವನ ಮೇಲೆ ಭರವಸೆ ಇಡು,ಆತನು ನಿನ್ನ ಸಹಾಯಕ, ನಿನ್ನ ಗುರಾಣಿ.
11 ಯೆಹೋವನಿಗೆ ಭಯಪಡೋರೇ, ಯೆಹೋವನ ಮೇಲೆ ಭರವಸೆ ಇಡಿ+ಆತನು ನಿಮ್ಮ ಸಹಾಯಕ, ನಿಮ್ಮ ಗುರಾಣಿ.+
12 ಯೆಹೋವ ನಮ್ಮನ್ನ ನೆನಪಿಸ್ಕೊಳ್ತಾನೆ, ನಮ್ಮನ್ನ ಆಶೀರ್ವದಿಸ್ತಾನೆ,ಆತನು ಇಸ್ರಾಯೇಲ್ ಮನೆತನವನ್ನ ಆಶೀರ್ವದಿಸ್ತಾನೆ,+ಆತನು ಆರೋನನ ಮನೆತನವನ್ನ ಆಶೀರ್ವದಿಸ್ತಾನೆ.
13 ಯಾರು ಯೆಹೋವನಿಗೆ ಭಯಪಡ್ತಾರೋ ಅವ್ರನ್ನ ಆಶೀರ್ವದಿಸ್ತಾನೆ,ಚಿಕ್ಕವರನ್ನ, ದೊಡ್ಡವರನ್ನ, ಎಲ್ರನ್ನೂ ಆಶೀರ್ವದಿಸ್ತಾನೆ.
14 ಯೆಹೋವ ನಿಮ್ಮ ಸಂಖ್ಯೆಯನ್ನ ಹೆಚ್ಚಿಸ್ತಾನೆ,ನಿಮ್ಮನ್ನ ನಿಮ್ಮ ಮಕ್ಕಳನ್ನ ಅಭಿವೃದ್ಧಿ ಮಾಡ್ತಾನೆ.+
15 ಭೂಮಿ ಆಕಾಶವನ್ನ ನಿರ್ಮಿಸಿದ+ಯೆಹೋವ ನಿಮ್ಮನ್ನ ಆಶೀರ್ವದಿಸಲಿ.+
16 ಸ್ವರ್ಗ ಯೆಹೋವನಿಗೆ ಸೇರಿದ್ದು,+ಆದ್ರೆ ಭೂಮಿಯನ್ನ ಆತನು ಮನುಷ್ಯರಿಗೆ ಕೊಟ್ಟಿದ್ದಾನೆ.+
17 ಸತ್ತವರು ಯಾಹುವನ್ನ ಹೊಗಳಲ್ಲ,+ಸತ್ತು ಮೌನಸ್ಥಿತಿಗೆ* ಜಾರಿರೋರು ಆತನನ್ನ ಕೊಂಡಾಡಲ್ಲ.+
18 ಆದ್ರೆ ನಾವು ಯಾಹುವನ್ನ ಹೊಗಳ್ತೀವಿಇವತ್ತಿಂದ ಯಾವಾಗ್ಲೂ ಕೊಂಡಾಡ್ತೀವಿ.
ಯಾಹುವನ್ನ ಸ್ತುತಿಸಿ!*
ಪಾದಟಿಪ್ಪಣಿ
^ ಅಥವಾ “ಯೆಹೋವನೇ, ನಮ್ಮದೇನೂ ಇಲ್ಲ.”
^ ಅಕ್ಷ. “ನಿಶ್ಶಬ್ದಕ್ಕೆ.”
^ ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.