ಕೀರ್ತನೆ 21:1-13

  • ಯೆಹೋವನಲ್ಲಿ ಭರವಸೆ ಇಡೋ ರಾಜನಿಗೆ ಸಿಗೋ ಆಶೀರ್ವಾದ

    • ದೀರ್ಘ ಆಯಸ್ಸು ಸಿಗುತ್ತೆ (4)

    • ದೇವರ ಶತ್ರುಗಳು ಸೋಲ್ತಾರೆ (8-12)

ಗಾಯಕರ ನಿರ್ದೇಶಕನಿಗೆ ಸೂಚನೆ: ದಾವೀದನ ಮಧುರ ಗೀತೆ. 21  ಯೆಹೋವನೇ! ನಿನ್ನ ಶಕ್ತಿಯಿಂದ ರಾಜ ಖುಷಿಪಡ್ತಾನೆ,+ನಿನ್ನ ರಕ್ಷಣೆಯಿಂದ ತುಂಬ ಸಂತೋಷಪಡ್ತಾನೆ!+   ನೀನು ಅವನ ಮನಸ್ಸಲ್ಲಿರೋ ಬಯಕೆಯನ್ನ ನಿಜ ಮಾಡ್ತೀಯ,+ಅವನ ತುಟಿಗಳ ಕೋರಿಕೆಯನ್ನ ನೆರವೇರಿಸ್ತೀಯ. (ಸೆಲಾ)   ತುಂಬ ಆಶೀರ್ವಾದಗಳ ಜೊತೆ ನೀನು ಅವನನ್ನ ಭೇಟಿಮಾಡ್ತೀಯ,ಅವನ ತಲೆ ಮೇಲೆ ಅಪ್ಪಟ* ಚಿನ್ನದ ಕಿರೀಟ ಇಡ್ತೀಯ.+   ಅವನು ನಿನ್ನ ಹತ್ರ ಜೀವ ಕೇಳಿಕೊಂಡ, ನೀನು ಅದನ್ನ ಅವನಿಗೆ ಕೊಟ್ಟೆ,+ಅವನಿಗೆ ದೀರ್ಘ ಆಯುಷ್ಯವನ್ನ, ಶಾಶ್ವತ ಜೀವವನ್ನ ಕೊಟ್ಟೆ.   ಅವನನ್ನ ಬಿಡಿಸೋಕೆ ನೀನು ಮಾಡೋ ಕೆಲಸಗಳು ಅವನಿಗೆ ಗೌರವ ತರುತ್ತೆ,+ಘನತೆ, ವೈಭವವನ್ನ ನೀನು ಅವನಿಗೆ ಕೊಡ್ತೀಯ.   ಯಾವಾಗ್ಲೂ ಅವನಿಗೆ ಆಶೀರ್ವಾದ ಸಿಗೋ ತರ ಮಾಡ್ತೀಯ,+ನೀನು ಅವನ ಜೊತೆ ಇದ್ದು ಅವನಿಗೆ ಖುಷಿ ಕೊಡ್ತೀಯ.+   ಯಾಕಂದ್ರೆ ರಾಜ ಯೆಹೋವನಲ್ಲಿ ಭರವಸೆ ಇಟ್ಟಿದ್ದಾನೆ.+ ಸರ್ವೋನ್ನತನ ಶಾಶ್ವತ ಪ್ರೀತಿಯಿಂದಾಗಿ ಅವನು ಯಾವತ್ತೂ ಕದಲಲ್ಲ.+   ನಿನ್ನ ಶತ್ರುಗಳನ್ನೆಲ್ಲ ನಿನ್ನ ಕೈ ಹುಡುಕುತ್ತೆ,ನಿನ್ನನ್ನ ದ್ವೇಷಿಸೋರನ್ನ ನಿನ್ನ ಬಲಗೈ ಶೋಧಿಸುತ್ತೆ.   ನೀನು ಬರೋವಾಗ ಅವರು ಉರಿಯೋ ಕುಲುಮೆಯಲ್ಲಿ ನಾಶವಾಗೋ ವಸ್ತುಗಳ ತರ ನಾಶವಾಗ್ತಾರೆ. ಯೆಹೋವ ತನ್ನ ಕೋಪದಿಂದ ಅವರನ್ನ ನುಂಗಿಬಿಡ್ತಾನೆ. ಬೆಂಕಿ ಅವರನ್ನ ಸುಟ್ಟುಬಿಡುತ್ತೆ.+ 10  ಅವರ ವಂಶದವರನ್ನ* ನೀನು ಭೂಮಿಯಿಂದ ಅಳಿಸಿಹಾಕ್ತೀಯ. ಅವರ ಸಂತತಿಯನ್ನ ಮನುಷ್ಯರ ಮಧ್ಯದಿಂದ ತೆಗೆದುಹಾಕ್ತೀಯ. 11  ಯಾಕಂದ್ರೆ ಅವರು ನಿನಗೆ ಕೆಟ್ಟದ್ದನ್ನ ಮಾಡೋಕೆ ಬಯಸಿದ್ರು,+ನಿನ್ನ ವಿರುದ್ಧ ಸಂಚು ಮಾಡಿದ್ರು. ಆದ್ರೆ ಅವು ನಡೀಲಿಲ್ಲ.+ 12  ನೀನು ಅವರ ಕಡೆ* ಬಾಣವನ್ನ* ಗುರಿಯಿಟ್ಟು,ಅವರು ವಾಪಸ್‌ ಹೋಗೋ ತರ ಮಾಡ್ತೀಯ.+ 13  ಯೆಹೋವನೇ, ದಯವಿಟ್ಟು ನಿನ್ನ ಬಲ ತೋರಿಸು. ನಿನ್ನ ಶಕ್ತಿ ಬಗ್ಗೆ ನಾವು ಹಾಡಿ ಹೊಗಳ್ತೀವಿ.*

ಪಾದಟಿಪ್ಪಣಿ

ಅಥವಾ “ಪರಿಷ್ಕರಿಸಿದ.”
ಅಕ್ಷ. “ಫಲವನ್ನ.”
ಅಕ್ಷ. “ಅವರ ಮುಖಗಳಿಗೆ.”
ಅಕ್ಷ. “ಬಿಲ್ಲಿನ ತಂತಿಗಳು.”
ಅಕ್ಷ. “ಸಂಗೀತ ರಚಿಸ್ತೀವಿ.”