ಕೀರ್ತನೆ 42:1-11
ಗಾಯಕರ ನಿರ್ದೇಶಕನಿಗೆ ಸೂಚನೆ, ಕೋರಹನ+ ಮಕ್ಕಳ ಮಸ್ಕಿಲ್.*
42 ದೇವರೇ, ನೀರಿಗಾಗಿ ಹಾತೊರೆಯೋ ಜಿಂಕೆ ತರ,ನಾನು ನಿನಗಾಗಿ ಹಾತೊರೆಯುತ್ತೀನಿ.
2 ಒಬ್ಬ ವ್ಯಕ್ತಿ ನೀರಿಗಾಗಿ ಬಾಯಾರೋ ತರ, ನಾನು ದೇವರಿಗಾಗಿ, ಜೀವ ಇರೋ ದೇವರಿಗಾಗಿ ಬಾಯಾರಿದ್ದೀನಿ.+
ದೇವರ ಸನ್ನಿಧಿಗೆ ಹೋಗಿ ನಿಂತುಕೊಳ್ಳೋ ದಿನ ನನಗೆ ಯಾವಾಗ ಬರುತ್ತೋ?+
3 ಹಗಲೂರಾತ್ರಿ ನನ್ನ ಕಣ್ಣೀರೇ ನನ್ನ ಆಹಾರ,“ನಿನ್ನ ದೇವರು ಎಲ್ಲಿದ್ದಾನೆ?” ಅಂತ ಹೇಳಿ ಜನ್ರು ಇಡೀ ದಿನ ನನ್ನನ್ನ ಕೆಣಕ್ತಾರೆ.+
4 ನಾನು ಇದನ್ನೆಲ್ಲ ನೆನಪಿಸ್ಕೊತೀನಿ, ನಾನು ನನ್ನ ಹೃದಯದ ಭಾವನೆಗಳನ್ನ ನಿನ್ನ ಹತ್ರ ತೋಡ್ಕೊತೀನಿ,ಒಂದು ಕಾಲದಲ್ಲಿ ನಾನು ಜನ್ರ ಗುಂಪಲ್ಲಿ ನಡೀತಿದ್ದೆ,ಭಕ್ತಿಪೂರ್ವಕವಾಗಿ ಅವ್ರ ಮಧ್ಯ ನಡೀತಾ ದೇವರ ಆಲಯದ ಕಡೆ ಹೋಗ್ತಿದ್ದೆ.
ಆ ಜನ್ರ ಗುಂಪು ದೇವ್ರಿಗೆ ಧನ್ಯವಾದ ಹೇಳ್ತಾ,ಜೈಕಾರ ಹಾಕ್ತಾ ಹಬ್ಬ ಆಚರಿಸ್ತಿತ್ತು.+
5 ನನ್ನ ಮನವೇ, ಯಾಕೆ ಇಷ್ಟೊಂದು ಬೇಜಾರಾಗಿದ್ದೀಯಾ?+
ನಿನ್ನೊಳಗೆ ಯಾಕೆ ಇಂಥ ಬಿರುಗಾಳಿ ಎದ್ದಿದೆ?
ದೇವರಿಗಾಗಿ ಕಾದಿರು,+ಆತನು ನನ್ನ ಮಹಾ ಸಂರಕ್ಷಕನಾಗಿ ಇರೋದ್ರಿಂದನಾನು ಆತನನ್ನ ಹೊಗಳ್ತಾನೇ ಇರ್ತಿನಿ.+
6 ನನ್ನ ದೇವರೇ, ನಾನು ತುಂಬ ಕುಗ್ಗಿಹೋಗಿದ್ದೀನಿ.+
ಹಾಗಾಗಿ ಯೋರ್ದನ್ ಪ್ರದೇಶದಿಂದ, ಹೆರ್ಮೋನಿನ ತುದಿಯಿಂದ,ಮಿಸಾರ್ ಬೆಟ್ಟದಿಂದ ನಾನು ನಿನ್ನನ್ನ ನೆನಪಿಸ್ಕೊತೀನಿ.+
7 ನಿನ್ನ ಜಲಪಾತಗಳ ಶಬ್ದ ಕೇಳಿ,ಆಳವಾದ ಸಮುದ್ರ ಇನ್ನೊಂದು ಆಳವಾದ ಸಮುದ್ರವನ್ನ ಕರೀತು.
ಉಕ್ಕೇರೋ ನಿನ್ನ ಸಮುದ್ರದ ಅಲೆಗಳು ನನ್ನನ್ನ ಮುಳುಗಿಸಿಬಿಟ್ವು.+
8 ಹಗಲಲ್ಲಿ ಯೆಹೋವ ತನ್ನ ಶಾಶ್ವತ ಪ್ರೀತಿಯನ್ನ ನನ್ನ ಹತ್ರ ಕಳಿಸ್ತಾನೆ,ರಾತ್ರಿಯಲ್ಲಿ ಆತನ ಹಾಡು ನನ್ನ ತುಟಿ ಮೇಲಿರುತ್ತೆ,ನಾನು ನನಗೆ ಜೀವ ಕೊಟ್ಟ ದೇವರಿಗೆ ಪ್ರಾರ್ಥಿಸ್ತೀನಿ.+
9 ನಾನು ನನ್ನ ದೇವರಿಗೆ, ನನ್ನ ಕಡಿದಾದ ಬಂಡೆಗೆ,“ಯಾಕೆ ನೀನು ನನ್ನನ್ನ ಮರೆತುಬಿಟ್ಟಿದ್ದೀಯಾ?+
ನನ್ನ ಶತ್ರುವಿನ ದಬ್ಬಾಳಿಕೆಯಿಂದ ನಾನ್ಯಾಕೆ ದುಃಖದಿಂದ ತಿರುಗಾಡಬೇಕು?” ಅಂತ ಕೇಳ್ತೀನಿ.+
10 ಹಗೆತನದಿಂದ* ನನ್ನ ಪ್ರಾಣದ ಹಿಂದೆ ಬಿದ್ದಿರೋ ನನ್ನ ಶತ್ರುಗಳು,“ನಿನ್ನ ದೇವರು ಎಲ್ಲಿದ್ದಾನೆ?” ಅಂತ ಕೇಳ್ತಾ ಇಡೀ ದಿನ ಚುಚ್ಚಿಚುಚ್ಚಿ ಮಾತಾಡ್ತಾರೆ.+
11 ನನ್ನ ಮನವೇ, ಯಾಕೆ ಇಷ್ಟೊಂದು ಬೇಜಾರಾಗಿದ್ದೀಯಾ?
ನಿನ್ನೊಳಗೆ ಯಾಕೆ ಇಂಥ ಬಿರುಗಾಳಿ ಎದ್ದಿದೆ?
ದೇವರಿಗಾಗಿ ಕಾದಿರು,+ಆತನು ನನ್ನ ಮಹಾ ಸಂರಕ್ಷಕನಾಗಿ ಇರೋದ್ರಿಂದನಾನು ಆತನನ್ನ ಹೊಗಳ್ತಾನೇ ಇರ್ತಿನಿ.+