ಕೀರ್ತನೆ 64:1-10

  • ರಹಸ್ಯ ಆಕ್ರಮಣಗಳಿಂದ ಪಾರಾಗೋದು

    • “ದೇವರು ಅವರ ಮೇಲೆ ಬಾಣ ಬಿಡ್ತಾನೆ” (7)

ಗಾಯಕರ ನಿರ್ದೇಶಕನಿಗೆ ಸೂಚನೆ, ದಾವೀದನ ಮಧುರ ಗೀತೆ. 64  ದೇವರೇ, ನಾನು ಆತಂಕದಲ್ಲಿದ್ದೀನಿ, ದಯವಿಟ್ಟು ನನ್ನ ಮಾತನ್ನ ಕೇಳಿಸ್ಕೊ,+ಶತ್ರುಗಳ ಘೋರ ಆಕ್ರಮಣಗಳಿಂದ ನನ್ನ ಜೀವವನ್ನ ರಕ್ಷಿಸು.   ದುಷ್ಟನ ರಹಸ್ಯ ಸಂಚುಗಳಿಂದ ನನ್ನನ್ನ ಕಾಪಾಡು,+ತಪ್ಪು ಮಾಡೋರ ಗುಂಪಿಂದ ನನ್ನನ್ನ ರಕ್ಷಿಸು.   ಕತ್ತಿ ತರ ಅವರು ತಮ್ಮ ನಾಲಿಗೆನ ಚೂಪು ಮಾಡ್ತಾರೆ,ಚುಚ್ಚೋ ಮಾತುಗಳನ್ನ ಬಾಣಗಳ ತರ ಗುರಿ ಇಡ್ತಾರೆ,   ರಹಸ್ಯ ಜಾಗದಿಂದ ನಿರ್ದೋಷಿ ಮೇಲೆ ಆಕ್ರಮಣ ಮಾಡೋಕೆ ಹೀಗೆ ಮಾಡ್ತಾರೆ. ಯಾವ ಭಯನೂ ಇಲ್ಲದೇ ತಕ್ಷಣ ಅವನ ಮೇಲೆ ಬಾಣ ಬಿಡ್ತಾರೆ.   ಅವ್ರಿಗೆ ಅವ್ರ ಕೆಟ್ಟ ಉದ್ದೇಶಗಳು ನಿಜ ಆದ್ರೆ ಸಾಕು,ಅವ್ರ ಬಲೆಗಳನ್ನ ಹೇಗೆ ಬಚ್ಚಿಡಬೇಕು ಅಂತ ಅವರು ತಮ್ಮಲ್ಲೇ ಮಾತಾಡ್ಕೊಳ್ತಾರೆ. “ಈ ಬಲೆಗಳನ್ನ ಯಾರು ನೋಡ್ತಾರೆ?” ಅಂತ ಅವರು ಹೇಳ್ತಾರೆ.+   ತಪ್ಪು ಮಾಡೋಕೆ ಹೊಸಹೊಸ ದಾರಿ ಹುಡುಕ್ತಾರೆ,ಯಾರಿಗೂ ಗೊತ್ತಾಗದ ಹಾಗೆ ಬುದ್ಧಿವಂತಿಕೆಯಿಂದ ಉಪಾಯ ಮಾಡ್ತಾರೆ,+ಅವ್ರ ಹೃದಯದ ಆಳ ತಿಳ್ಕೊಳ್ಳೋಕೆ ಆಗಲ್ಲ.   ಆದ್ರೆ ದೇವರು ಅವ್ರ ಮೇಲೆ ಬಾಣಗಳನ್ನ ಬಿಡ್ತಾನೆ,+ತಕ್ಷಣ ಅವ್ರಿಗೆ ಗಾಯ ಆಗುತ್ತೆ.   ಅವರು ಬಿದ್ದುಹೋಗೋಕೆ ಅವ್ರ ಬಾಯೇ ಕಾರಣ ಆಗುತ್ತೆ,+ಅವ್ರನ್ನ ನೋಡೋರೆಲ್ಲ ತಲೆ ಆಡಿಸ್ತಾರೆ.   ಆಮೇಲೆ ಎಲ್ರೂ ಭಯಪಟ್ಟು,ದೇವರು ಮಾಡಿದ್ದನ್ನ ನೋಡಿ ಅದನ್ನ ಎಲ್ರಿಗೂ ಹೇಳ್ತಾರೆ,ಅವರು ಆತನ ಕೆಲಸಗಳ ಬಗ್ಗೆ ತಿಳ್ಕೊಂಡಿರ್ತಾರೆ.*+ 10  ನೀತಿವಂತ ಯೆಹೋವನಲ್ಲಿ ಉಲ್ಲಾಸಪಡ್ತಾನೆ, ಆತನಲ್ಲಿ ಆಶ್ರಯ ಪಡ್ಕೊಳ್ತಾನೆ,+ಪ್ರಾಮಾಣಿಕರೆಲ್ಲ ತಮ್ಮ ಹೃದಯದಲ್ಲಿ ಖುಷಿಪಡ್ತಾರೆ.*

ಪಾದಟಿಪ್ಪಣಿ

ಅಕ್ಷ. “ಒಳನೋಟ ಇರುತ್ತೆ.”
ಅಥವಾ “ಕೊಚ್ಚಿಕೊಳ್ತಾರೆ.”