ಕೀರ್ತನೆ 101:1-8
ದಾವೀದನ ಮಧುರ ಗೀತೆ.
101 ಯೆಹೋವನೇ, ನಾನು ನಿನಗಾಗಿ ಸ್ತುತಿಗೀತೆಗಳನ್ನ ಹಾಡ್ತೀನಿ.*
ಶಾಶ್ವತ ಪ್ರೀತಿ ಮತ್ತು ನ್ಯಾಯದ ಬಗ್ಗೆ ನಾನು ಹಾಡ್ತೀನಿ.
2 ನಾನು ತಿಳುವಳಿಕೆಯಿಂದ, ತಪ್ಪಿಲ್ಲದವನಾಗಿ ನಡ್ಕೊತೀನಿ.*
ನೀನು ಯಾವಾಗ ನನ್ನ ಹತ್ರ ಬರ್ತಿಯಾ?
ನಾನು ಮನೆ ಒಳಗೂ ಪ್ರಾಮಾಣಿಕ ಹೃದಯ+ ಕಾಪಾಡ್ಕೊತೀನಿ.
3 ಪ್ರಯೋಜನಕ್ಕೆ ಬಾರದ* ಯಾವದನ್ನೂ ನಾನು ಕಣ್ಮುಂದೆ ಇಟ್ಕೊಳ್ಳಲ್ಲ.
ಸರಿಯಾದ ದಾರಿಯನ್ನ ಬಿಟ್ಟು ಹೋಗಿರೋ ಜನ್ರ ಕೆಲಸಗಳನ್ನ ನಾನು ದ್ವೇಷಿಸ್ತೀನಿ.+
ನನಗೂ ಅವ್ರಿಗೂ ಯಾವ ಸಂಬಂಧನೂ ಇಲ್ಲ.
4 ನನ್ನ ಹತ್ರ ಮೋಸ ಮಾಡೋ ಹೃದಯ ಇಲ್ಲ.
ಕೆಟ್ಟದ್ದನ್ನ ನಾನು ಒಪ್ಕೊಳ್ಳಲ್ಲ.
5 ಯಾವನಾದ್ರೂ ಗುಟ್ಟಾಗಿ ಬೇರೆಯವನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ್ರೆ,+ನಾನು ಅವನನ್ನ ಮುಗಿಸಿಬಿಡ್ತೀನಿ.*
ಜಂಬದ ಕಣ್ಣು ಇರೋರನ್ನ, ಸೊಕ್ಕಿನ ಹೃದಯ ಇರೋರನ್ನನಾನು ಸಹಿಸ್ಕೊಳ್ಳಲ್ಲ.
6 ಭೂಮಿ ಮೇಲಿರೋ ನಂಬಿಗಸ್ತರು ನನ್ನ ಜೊತೆ ಇರೋಕೆ,ನಾನು ಅವ್ರಿಗಾಗಿ ಹುಡುಕ್ತಿನಿ.
ನಿಯತ್ತಾಗಿ* ನಡ್ಕೊಳ್ಳೋರು ನನ್ನ ಸೇವೆಮಾಡ್ತಾರೆ.
7 ಕಪಟಿಗಳಿಗೆ ನನ್ನ ಮನೆಯಲ್ಲಿ ಜಾಗ ಇಲ್ಲ,ಸುಳ್ಳುಗಾರರಿಗೆ ನನ್ನ ಸನ್ನಿಧಿಯಲ್ಲಿ* ನಿಲ್ಲೋಕೆ ಅವಕಾಶ ಇಲ್ಲ.
8 ದಿನಾ ಬೆಳಿಗ್ಗೆ ಭೂಮಿಯಲ್ಲಿರೋ ಕೆಟ್ಟವರನ್ನ ಮುಗಿಸಿಬಿಡ್ತೀನಿ,ತಪ್ಪುಮಾಡೋರನ್ನ ಯೆಹೋವನ ಪಟ್ಟಣದಿಂದ ನಿರ್ನಾಮ ಮಾಡಿಬಿಡ್ತೀನಿ.+
ಪಾದಟಿಪ್ಪಣಿ
^ ಅಥವಾ “ಸಂಗೀತ ರಚಿಸ್ತೀನಿ.”
^ ಅಥವಾ “ನಿಯತ್ತಿಂದ ಇರ್ತೀನಿ.”
^ ಅಥವಾ “ಕೆಲಸಕ್ಕೆ ಬಾರದ.”
^ ಅಕ್ಷ. “ಸದ್ದನ್ನ ಅಡಗಿಸ್ತೀನಿ.”
^ ಅಥವಾ “ನಿಷ್ಕಳಂಕರಾಗಿ.”
^ ಅಕ್ಷ. “ನನ್ನ ಕಣ್ಮುಂದೆ.”