ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಶ್ನೆ 3

ಬೈಬಲನ್ನ ಬರೆದವರು ಯಾರು?

“ಮೋಶೆ ಯೆಹೋವ ಹೇಳಿದ್ದನ್ನೆಲ್ಲ ಬರೆದಿಟ್ಟ.”

ವಿಮೋಚನಕಾಂಡ 24:4

“ದಾನಿಯೇಲ ತನ್ನ ಮಂಚದ ಮೇಲೆ ಮಲಗಿದ್ದಾಗ ಒಂದು ಕನಸನ್ನ, ಕೆಲವು ದರ್ಶನಗಳನ್ನ ನೋಡಿದ. ಅವನು ಆ ಕನಸಿನ, ಅದ್ರಲ್ಲಿ ನೋಡಿದ ವಿಷ್ಯಗಳ ಬಗ್ಗೆ ಪೂರ್ತಿ ಬರೆದಿಟ್ಟ.”

ದಾನಿಯೇಲ 7:​1

“ನೀವು ದೇವರ ಸಂದೇಶವನ್ನ ನಮ್ಮಿಂದ ಕೇಳಿಸ್ಕೊಂಡಾಗ ಅದನ್ನ ಮನುಷ್ಯರ ಮಾತು ಅಂತ ಅಂದ್ಕೊಳ್ಳದೆ ದೇವರ ಮಾತು ಅಂತಾನೇ ಒಪ್ಕೊಂಡ್ರಿ. . . . ಅದು ನಿಜವಾಗ್ಲೂ ದೇವರ ಸಂದೇಶನೇ.”

1 ಥೆಸಲೊನೀಕ 2:13

‘ಪವಿತ್ರ ಗ್ರಂಥದಲ್ಲಿರೋ ಎಲ್ಲ ಮಾತುಗಳನ್ನ ದೇವರೇ ಕೊಟ್ಟಿದ್ದು. ಜನ್ರಿಗೆ ಕಲಿಸೋಕೆ ಅದು ಸಹಾಯ ಮಾಡುತ್ತೆ.’

2 ತಿಮೊತಿ 3:16

“ಯಾವ ಭವಿಷ್ಯವಾಣಿನೂ ಮನುಷ್ಯನ ಇಷ್ಟದ ಪ್ರಕಾರ ಬರಲಿಲ್ಲ, ಬದಲಿಗೆ ದೇವರು ಹೇಳಿದ್ದನ್ನೇ ಮನುಷ್ಯರು ಪವಿತ್ರಶಕ್ತಿಯ ಸಹಾಯದಿಂದ ಮಾತಾಡಿದ್ರು.”

2 ಪೇತ್ರ 1:21