ಕೀರ್ತನೆ 15:1-5

  • ಯಾರು ಯೆಹೋವನ ಡೇರೆಯಲ್ಲಿ ಅತಿಥಿಯಾಗಿ ಇರಬಹುದು?

    • ಅವನು ಮನಸ್ಸಲ್ಲೂ ನಿಜ ಹೇಳ್ತಾನೆ (2)

    • ಸುಳ್ಳು ಅಪವಾದ ಹೊರಿಸಲ್ಲ (3)

    • ತನಗೆ ನಷ್ಟ ಆದ್ರೂ ಕೊಟ್ಟ ಮಾತು ತಪ್ಪಲ್ಲ (4)

ದಾವೀದನ ಮಧುರ ಗೀತೆ. 15  ಯೆಹೋವನೇ, ನಿನ್ನ ಡೇರೆಯಲ್ಲಿ ಯಾರು ಅತಿಥಿಯಾಗಿ ಇರಬಹುದು? ನಿನ್ನ ಪವಿತ್ರ ಬೆಟ್ಟಕ್ಕೆ ಯಾರು ಬರಬಹುದು?+  2  ಅವರು ಯಾರಂದ್ರೆ, ಯಾವ ಆರೋಪನೂ ಇಲ್ಲದೆ ಜೀವನ ಮಾಡ್ತಿರೋರು,+ಸರಿಯಾಗಿ ಇರೋದನ್ನೇ ಮಾಡ್ತಿರೋರು,+ಹೃದಯದಲ್ಲೂ ಸತ್ಯವನ್ನೇ ಹೇಳೋರು.+  3  ಅಂಥವರು ಯಾರ ಮೇಲೂ ಸುಳ್ಳು ಅಪವಾದ ಹಾಕಲ್ಲ,+ಬೇರೆಯವರಿಗೆ ಯಾವ ತೊಂದ್ರೆನೂ ಕೊಡಲ್ಲ,+ಸ್ನೇಹಿತರ ಹೆಸ್ರನ್ನ ಹಾಳುಮಾಡಲ್ಲ.*+  4  ನೀಚರ ಜೊತೆ ಸೇರಲ್ಲ,+ಆದ್ರೆ ಯೆಹೋವನ ಭಯಭಕ್ತಿ ಇರೋರಿಗೆ ಗೌರವ ಕೊಡೋದನ್ನ ತಪ್ಸಲ್ಲ. ನಷ್ಟ ಆದ್ರೂ ಕೊಟ್ಟ ಮಾತನ್ನ* ತಪ್ಪಲ್ಲ.+  5  ಸಾಲ ಕೊಟ್ಟು ಬಡ್ಡಿಗಾಗಿ ಆಸೆಪಡಲ್ಲ,+ನಿರಪರಾಧಿನ ಅಪರಾಧಿ ಮಾಡೋಕೆ ಲಂಚ ತಗೊಳಲ್ಲ.+ ಇವೆಲ್ಲ ಮಾಡೋ ವ್ಯಕ್ತಿನ ಯಾವತ್ತೂ ಕದಲಿಸೋಕೆ ಆಗಲ್ಲ.+

ಪಾದಟಿಪ್ಪಣಿ

ಅಥವಾ “ಮಾನ ಕಳಿಯಲ್ಲ.”
ಅಕ್ಷ. “ಪ್ರಮಾಣ.”