ಕೀರ್ತನೆ 56:1-13

  • ಹಿಂಸೆಗೆ ಒಳಗಾದವನ ಪ್ರಾರ್ಥನೆ

    • “ದೇವರಲ್ಲಿ ನಾನು ನನ್ನ ಭರವಸೆ ಇಟ್ಟಿದ್ದೀನಿ” (4)

    • “ನಿನ್ನ ಚರ್ಮದ ಬುದ್ದಲಿಯಲ್ಲಿ ನನ್ನ ಕಣ್ಣೀರು” (8)

    • “ಮಾಮೂಲಿ ಮನುಷ್ಯ ನನಗೆ ಏನು ಮಾಡ್ತಾನೆ?” (4, 11)

ಗಾಯಕರ ನಿರ್ದೇಶಕನಿಗೆ ಸೂಚನೆ, “ದೂರದ ಮೌನ ಪಾರಿವಾಳ” ಅನ್ನೋ ರಾಗದಲ್ಲಿ ಹಾಡಬೇಕು. ದಾವೀದನ ಕೀರ್ತನೆ. ಮಿಕ್ತಾಮ್‌.* ಗತ್‌ನಲ್ಲಿ+ ಫಿಲಿಷ್ಟಿಯರು ದಾವೀದನನ್ನ ವಶ ಮಾಡ್ಕೊಂಡಾಗ ರಚಿಸಿದ ಕೀರ್ತನೆ. 56  ದೇವರೇ, ನನಗೆ ಕೃಪೆ ತೋರಿಸು. ಯಾಕಂದ್ರೆ ನಾಶವಾಗಿ ಹೋಗೋ ಮನುಷ್ಯ ನನ್ನ ಮೇಲೆ ಆಕ್ರಮಣ ಮಾಡ್ತಿದ್ದಾನೆ.* ಇಡೀ ದಿನ ಅವರು ನನ್ನ ಜೊತೆ ಹೋರಾಡ್ತಾರೆ, ನನ್ನ ಮೇಲೆ ದಬ್ಬಾಳಿಕೆ ಮಾಡ್ತಾರೆ.   ನನ್ನ ವೈರಿಗಳು ಇಡೀ ದಿನ ನನ್ನ ಮೇಲೆ ಆಕ್ರಮಣ ಮಾಡ್ತಾರೆ,ತುಂಬ ಜನ ಅಹಂಕಾರದಿಂದ ನನ್ನ ವಿರುದ್ಧ ಹೋರಾಡ್ತಾರೆ.   ನನಗೆ ಭಯ ಆದಾಗ+ ನಾನು ನಿನ್ನ ಮೇಲೆ ಭರವಸೆ ಇಡ್ತೀನಿ.+   ನಾನು ಯಾರ ಮಾತನ್ನ ಹೊಗಳ್ತೀನೋ, ಆ ದೇವರಲ್ಲಿಹೌದು, ಆ ದೇವರಲ್ಲಿ ನಾನು ಭರವಸೆ ಇಟ್ಟಿದ್ದೀನಿ. ನಾನು ಭಯಪಡಲ್ಲ. ಮಾಮೂಲಿ ಮನುಷ್ಯ* ನನಗೆ ಏನು ಮಾಡಕ್ಕಾಗುತ್ತೆ?+   ಇಡೀ ದಿನ ಅವರು ನನಗೆ ತೊಂದ್ರೆ ಕೊಡ್ತಾರೆ,ನನಗೆ ಹಾನಿ ಮಾಡಬೇಕು ಅನ್ನೋ ಯೋಚನೆ ಬಿಟ್ರೆ ಬೇರೆ ಯಾವ ಯೋಚನೆನೂ ಅವ್ರಿಗಿಲ್ಲ.+   ಅವರು ನನ್ನ ಮೇಲೆ ಆಕ್ರಮಣ ಮಾಡೋಕೆ ಬಚ್ಚಿಟ್ಕೊಂತಾರೆ,ಅವಕಾಶ ಸಿಕ್ಕಿದ ತಕ್ಷಣ ನನ್ನ ಪ್ರಾಣ ತೆಗೀಬೇಕು ಅಂತ+ಅವರು ನನ್ನ ಪ್ರತಿಯೊಂದು ಹೆಜ್ಜೆಯನ್ನೂ ಗಮನಿಸ್ತಾರೆ.+   ಅವರು ದುಷ್ಟರಾಗಿ ಇರೋದ್ರಿಂದ ಅವ್ರನ್ನ ತಳ್ಳಿಬಿಡು. ದೇವರೇ, ನಿನ್ನ ಕೋಪದಿಂದ ಜನ್ರನ್ನ ಬೀಳಿಸು.+   ಅಲೆಮಾರಿಯಾಗಿದ್ದಾಗ ನಾನು ಅನುಭವಿಸಿದ ಕಷ್ಟಗಳ ಲೆಕ್ಕವನ್ನ ನೀನು ಇಡ್ತೀಯ.+ ನಿನ್ನ ಚರ್ಮದ ಚೀಲದಲ್ಲಿ ನನ್ನ ಕಣ್ಣೀರನ್ನ ಕೂಡಿಸು.+ ಅವೆಲ್ಲ ನಿನ್ನ ಪುಸ್ತಕದಲ್ಲಿ ಇಲ್ವಾ?+   ನಾನು ಸಹಾಯಕ್ಕಾಗಿ ಕೂಗೋ ದಿನ ನನ್ನ ಶತ್ರುಗಳು ವಾಪಸ್‌ ಹೋಗ್ತಾರೆ.+ ದೇವರು ನನ್ನ ಪಕ್ಷದಲ್ಲಿದ್ದಾನೆ. ಇದ್ರ ಮೇಲೆ ನನಗೆ ಯಾವ ಸಂಶಯನೂ ಇಲ್ಲ.+ 10  ನಾನು ಯಾರ ಮಾತನ್ನ ಹೊಗಳ್ತೀನೋ ಆ ದೇವರಲ್ಲಿ,ನಾನು ಯಾರ ನುಡಿಯನ್ನ ಸ್ತುತಿಸ್ತೀನೋ ಆ ಯೆಹೋವನಲ್ಲಿ 11  ಹೌದು, ಆ ದೇವರಲ್ಲಿ ನಾನು ನನ್ನ ಭರವಸೆ ಇಟ್ಟಿದ್ದೀನಿ. ನಾನು ಭಯಪಡಲ್ಲ.+ ನಾಶವಾಗೋ ಮನುಷ್ಯ ನನಗೆ ಏನು ಮಾಡಕ್ಕಾಗುತ್ತೆ?+ 12  ದೇವರೇ, ನಾನು ಹೊತ್ತ ಹರಕೆಗಳನ್ನ ತೀರಿಸೋದು ನನ್ನ ಕರ್ತವ್ಯ,+ನಾನು ನಿನಗೆ ಧನ್ಯವಾದ ಹೇಳ್ತೀನಿ.+ 13  ಯಾಕಂದ್ರೆ ನೀನು ನನ್ನನ್ನ ಸಾವಿನ ಬಾಯಿಂದ ಬಿಡಿಸಿದೆ,+ನಾನು ಜೀವಂತವಾಗಿ ಇರಬೇಕು, ದೇವರ ಸೇವೆ ಮಾಡಬೇಕು ಅಂತ,*+ ನನ್ನ ಕಾಲು ಎಡವಿ ಬೀಳದ ಹಾಗೆ ನೋಡ್ಕೊಂಡೆ.+

ಪಾದಟಿಪ್ಪಣಿ

ಅಥವಾ “ನನ್ನನ್ನ ಕಚ್ಚಿ ಸೀಳಿಬಿಡಬೇಕು ಅಂತಿದ್ದಾನೆ.”
ಅಕ್ಷ. “ಮಾಂಸ.”
ಅಕ್ಷ. “ದೇವರ ಮುಂದೆ ನಡೀಬೇಕು ಅಂತ.”