ಕೀರ್ತನೆ 150:1-6

  • ಉಸಿರಾಡೋ ಎಲ್ಲ ಜೀವಿಗಳು ಯಾಹುವನ್ನ ಸ್ತುತಿಸಲಿ

    • ಹಲ್ಲೆಲೂಯಾ! (1, 6)

150  ಯಾಹುವನ್ನ ಸ್ತುತಿಸಿ!*+ ದೇವ್ರನ್ನ ಆತನ ಪವಿತ್ರ ಸ್ಥಳದಲ್ಲಿ ಕೊಂಡಾಡಿ.+ ಆತನ ಶಕ್ತಿಗೆ ಸಾಕ್ಷಿಯಾಗಿರೋ ಆಕಾಶದ ಕೆಳಗೆ ಆತನನ್ನ ಹೊಗಳಿ.+   ಆತನ ಮಹಾ ಕೆಲಸಗಳಿಗಾಗಿ ಆತನನ್ನ ಸ್ತುತಿಸಿ.+ ಆತನ ದೊಡ್ಡತನಕ್ಕಾಗಿ ಆತನನ್ನ ಸ್ತುತಿಸಿ.+   ಕೊಂಬನ್ನ ಊದುತ್ತಾ ಆತನನ್ನ ಹೊಗಳಿ.+ ತಂತಿವಾದ್ಯವನ್ನ, ಸಂಗೀತ ವಾದ್ಯಗಳನ್ನ ನುಡಿಸ್ತಾ ಆತನಿಗೆ ಹಾಡಿ ಹೊಗಳಿ.+   ದಮ್ಮಡಿ ಬಡೀತಾ,+ ಕುಣಿಯುತ್ತಾ ಆತನನ್ನ ಕೊಂಡಾಡಿ. ತಂತಿವಾದ್ಯ ನುಡಿಸ್ತಾ,+ ಕೊಳಲನ್ನ ಊದುತ್ತಾ ಆತನನ್ನ ಸ್ತುತಿಸಿ.+   ಝಲ್ಲರಿಗಳನ್ನ ಬಾರಿಸ್ತಾ ಆತನನ್ನ ಹೊಗಳಿ,ಝಲ್ಲರಿಗಳ ತಾಳಮೇಳದಿಂದ ಆತನನ್ನ ಕೊಂಡಾಡಿ.+   ಉಸಿರಾಡೋ ಎಲ್ಲ ಜೀವಿಗಳು ಯಾಹುವನ್ನ ಸ್ತುತಿಸಲಿ. ಯಾಹುವನ್ನ ಸ್ತುತಿಸಿ!*+

ಪಾದಟಿಪ್ಪಣಿ

ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.
ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.