ಕೀರ್ತನೆ 23:1-6
ದಾವೀದನ ಮಧುರ ಗೀತೆ.
23 ಯೆಹೋವ ನನ್ನ ಕುರುಬ.+
ನನಗೆ ಯಾವ ಕೊರತೆನೂ ಇರಲ್ಲ.+
2 ಹಚ್ಚಹಸುರಾಗಿ ಬೆಳೆದಿರೋ ಹುಲ್ಲುಗಾವಲಲ್ಲಿ ಆತನು ನನ್ನನ್ನ ಮಲಗಿಸ್ತಾನೆ,ವಿಶ್ರಾಂತಿ ಪಡೆಯೋಕೆ ಚೆನ್ನಾಗಿ ನೀರು ಹರಿಯೋ ಪ್ರದೇಶಗಳಿಗೆ* ಆತನು ನನ್ನನ್ನ ನಡಿಸ್ತಾನೆ.+
3 ಆತನು ನನಗೆ ಹೊಸಬಲ ಕೊಡ್ತಾನೆ.+
ನನ್ನನ್ನ ಒಳ್ಳೇ ದಾರಿಯಲ್ಲಿ ನಡಿಸಿ ಆತನ ಹೆಸ್ರಿಗೆ ತಕ್ಕ ಹಾಗೆ ನಡೀತಾನೆ.+
4 ಕತ್ತಲ ಕಣಿವೆಯಲ್ಲಿ ನಾನು ನಡೆದ್ರೂ,+ಹಾನಿ ಆಗುತ್ತೆ ಅನ್ನೋ ಭಯ ನನಗಿಲ್ಲ,+ಯಾಕಂದ್ರೆ ನೀನೇ ನನ್ನ ಜೊತೆ ಇದ್ದೀಯ,+ನಿನ್ನ ಕೋಲು, ನಿನ್ನ ಬೆತ್ತ ನನಗೆ ಧೈರ್ಯ* ಕೊಡುತ್ತೆ.
5 ನನ್ನ ಶತ್ರುಗಳ ಮುಂದೆ ನೀನು ನನಗೆ ಹಬ್ಬದ ಊಟ ಹಾಕ್ತೀಯ,+ನನ್ನ ತಲೆಗೆ ತೈಲ ಹಚ್ಚಿ ಚೈತನ್ಯ ಕೊಡ್ತೀಯ,+ನನ್ನ ಪಾನಪಾತ್ರೆಯನ್ನ ತುಂಬಿತುಳುಕೋ ಹಾಗೆ ಮಾಡ್ತೀಯ.+
6 ನಾನು ಸಾಯೋ ತನಕ ನಿನ್ನ ಒಳ್ಳೇತನ, ನಿನ್ನ ಶಾಶ್ವತ ಪ್ರೀತಿ ನನ್ನ ಹಿಂದೆನೇ ಬರುತ್ತೆ,+ನಾನು ನನ್ನ ಜೀವನ ಪೂರ್ತಿ ಯೆಹೋವನ ಆಲಯದಲ್ಲೇ ಇರ್ತಿನಿ.+