ಕೀರ್ತನೆ 92:1-15

  • ಯೆಹೋವ ಸದಾಕಾಲಕ್ಕೂ ಉನ್ನತ ಸ್ಥಾನದಲ್ಲಿ ಇರ್ತಾನೆ

    • ಆತನ ಶ್ರೇಷ್ಠ ಕೆಲಸ, ಆಳವಾದ ಆಲೋಚನೆ (5)

    • ‘ನೀತಿವಂತರು ಮರದ ಹಾಗೆ ಚೆನ್ನಾಗಿ ಬೆಳೀತಾರೆ’ (12)

    • ಮುದುಕರಾದ್ರೂ ಫಲ ಕೊಡ್ತಾ ಇರ್ತಾರೆ (14)

ಸಬ್ಬತ್‌ ದಿನಕ್ಕಾಗಿ ಇರೋ ಮಧುರ ಗೀತೆ. 92  ಸರ್ವೋನ್ನತನೇ, ನಿನ್ನ ಹೆಸ್ರನ್ನ ಹಾಡಿ ಹೊಗಳೋದು* ಒಳ್ಳೇದು. ಯೆಹೋವನಿಗೆ ಧನ್ಯವಾದ ಹೇಳೋದೂ ಒಳ್ಳೇದೇ.+   ಬೆಳಿಗ್ಗೆ ನಿನ್ನ ಶಾಶ್ವತ ಪ್ರೀತಿಯನ್ನ,+ರಾತ್ರಿ ನಿನ್ನ ನಂಬಿಗಸ್ತಿಕೆಯನ್ನ ಹೇಳೋದು ಒಳ್ಳೇದು.   ಹತ್ತು ತಂತಿಗಳಿರೋ ತಂತಿವಾದ್ಯದ ಜೊತೆ,ವೀಣೆಯ ಮಧುರ ಸಂಗೀತದ ಜೊತೆ ಸ್ತುತಿಸೋದು ಒಳ್ಳೇದು.+   ಯಾಕಂದ್ರೆ ಯೆಹೋವನೇ, ನಿನ್ನ ಕೆಲಸಗಳಿಂದ ನನ್ನನ್ನ ಖುಷಿಪಡಿಸಿದ್ದೀಯ,ಆ ಕೆಲಸಗಳನ್ನ ನೋಡಿ ಸಂಭ್ರಮದಿಂದ ನಾನು ಜೈಕಾರ ಹಾಕ್ತೀನಿ.   ಯೆಹೋವನೇ, ನಿನ್ನ ಕೆಲಸಗಳು ಎಷ್ಟು ಶ್ರೇಷ್ಠ!+ ನಿನ್ನ ಯೋಚನೆಗಳು ಎಷ್ಟು ಆಳ!+   ವಿವೇಕ ಇಲ್ಲದವನು ಅವುಗಳನ್ನ ತಿಳ್ಕೊಳ್ಳೋಕೆ ಆಗಲ್ಲ,ಯಾವ ಮೂರ್ಖನೂ ಈ ವಿಷ್ಯನ ಅರ್ಥಮಾಡ್ಕೊಳ್ಳೋಕೆ ಆಗಲ್ಲ.+   ದುಷ್ಟ ಕಳೆಗಳ ಹಾಗೆ* ಮೊಳಕೆ ಒಡೆಯೋದೂತಪ್ಪು ಮಾಡೋರೆಲ್ಲ ಚೆನ್ನಾಗಿ ಬೆಳೆಯೋದೂಶಾಶ್ವತವಾಗಿ ನಾಶ ಆಗೋಕೇ.+   ಆದ್ರೆ ಯೆಹೋವನೇ, ನೀನು ಯಾವಾಗ್ಲೂ ಉನ್ನತ ಸ್ಥಾನದಲ್ಲಿ ಇರ್ತಿಯ.   ಯೆಹೋವನೇ, ನೀನು ನಿನ್ನ ಶತ್ರುಗಳ ಸೋಲನ್ನ ನೋಡು,ಅವರು ಹೇಗೆ ನಾಶವಾಗಿ ಹೋಗ್ತಾರೆ ಅಂತ ನೋಡು,ತಪ್ಪು ಮಾಡೋರೆಲ್ಲ ಚೆಲ್ಲಾಪಿಲ್ಲಿ ಆಗ್ತಾರೆ.+ 10  ಆದ್ರೆ ನೀನು ನನಗೆ ಜಾಸ್ತಿ ಬಲ ಕೊಟ್ಟು ನನ್ನಲ್ಲಿ ಕಾಡುಕೋಣದ ಶಕ್ತಿಯನ್ನ ತುಂಬ್ತೀಯ,ತಾಜಾ ಎಣ್ಣೆಯನ್ನ ತ್ವಚೆಗೆ ಹಚ್ಕೊಂಡು ಚೈತನ್ಯ ಪಡ್ಕೊತೀನಿ.+ 11  ನನ್ನ ಶತ್ರುಗಳ ಸೋಲನ್ನ ನನ್ನ ಕಣ್ಣು ನೋಡುತ್ತೆ,+ನನ್ನ ಮೇಲೆ ಆಕ್ರಮಣಮಾಡೋ ದುಷ್ಟಜನ್ರು ಬಿದ್ದುಹೋಗೋದನ್ನ ನನ್ನ ಕಿವಿ ಕೇಳಿಸ್ಕೊಳ್ಳುತ್ತೆ. 12  ಆದ್ರೆ ನೀತಿವಂತರು ಖರ್ಜೂರದ ಮರದ ತರ ಚೆನ್ನಾಗಿ ಬೆಳೀತಾರೆಲೆಬನೋನಿನ ದೇವದಾರು ಮರದ ತರ ದೊಡ್ಡದಾಗಿ ಬೆಳೀತಾರೆ.+ 13  ಅವರು ಯೆಹೋವನ ಆಲಯದಲ್ಲಿ ಇದ್ದಾರೆ,ನಮ್ಮ ದೇವರ ಅಂಗಳದಲ್ಲಿ ಅವರು ವೃದ್ಧಿಯಾಗ್ತಾರೆ.+ 14  ಅವರು ಮುದುಕರಾದ್ರೂ ಫಲ ಕೊಡ್ತಾ ಇರ್ತಾರೆ,+ಅವ್ರಲ್ಲಿ ಹುರುಪು,* ಹೊಸತನ ಹಾಗೇ ಇರುತ್ತೆ.+ 15  ಯೆಹೋವ ನೀತಿವಂತ ಅಂತ ಅವರು ಪ್ರಕಟಿಸ್ತಾರೆ. ಆತನು ನನ್ನ ಬಂಡೆ,+ ಆತನಲ್ಲಿ ಅನೀತಿ ಅನ್ನೋದೇ ಇಲ್ಲ.

ಪಾದಟಿಪ್ಪಣಿ

ಅಥವಾ “ಸಂಗೀತ ರಚಿಸೋದು.”
ಅಥವಾ “ಹುಲ್ಲಿನ ಹಾಗೆ.”
ಅಕ್ಷ. “ಕೊಬ್ಬು.”