ಕೀರ್ತನೆ 137:1-9

  • ಬಾಬೆಲಿನ ನದಿಗಳ ದಡದಲ್ಲಿ

    • ಚೀಯೋನಿನ ಯಾವ ಹಾಡನ್ನೂ ಹಾಡಲಿಲ್ಲ (3, 4)

    • ಬಾಬೆಲ್‌ ಹಾಳಾಗಿ ಹೋಗುತ್ತೆ (8)

137  ಬಾಬೆಲಿನ ನದಿಗಳ ದಡದಲ್ಲಿ+ ನಾವು ಕೂತ್ಕೊಂಡ್ವಿ,ಚೀಯೋನನ್ನ ನೆನಪಿಸ್ಕೊಂಡು ಕಣ್ಣೀರು ಹಾಕಿದ್ವಿ.+   ಅದ್ರ* ಮಧ್ಯದಲ್ಲಿದ್ದ ನೀರವಂಜಿ* ಮರಗಳಿಗೆನಾವು ನಮ್ಮ ತಂತಿವಾದ್ಯಗಳನ್ನ ನೇತುಹಾಕಿದ್ವಿ.+   ನಮ್ಮನ್ನ ಸೆರೆಹಿಡಿದವರು ಅಲ್ಲಿ ನಮಗೊಂದು ಹಾಡು ಹಾಡೋಕೆ ಹೇಳಿದ್ರು,+ನಮ್ಮನ್ನ ಅಣಿಕಿಸೋರು ಮಜಾ ತಗೊಳ್ಳೋಕೆ,“ಚೀಯೋನಿನ ಒಂದು ಹಾಡನ್ನ ನಮಗೋಸ್ಕರ ಹಾಡಿ” ಅಂದ್ರು.   ವಿದೇಶಿ ಮಣ್ಣಲ್ಲಿ ನಾವು ಹೇಗೆ ತಾನೇ ಯೆಹೋವನ ಹಾಡನ್ನ ಹಾಡೋಕೆ ಸಾಧ್ಯ?   ಯೆರೂಸಲೇಮೇ, ನಾನು ನಿನ್ನನ್ನ ಮರೆತ್ರೆನನ್ನ ಬಲಗೈ ಬಿದ್ದುಹೋಗಲಿ.*+   ನನ್ನ ಅಪಾರ ಆನಂದಕ್ಕೆ ಕಾರಣವಾಗಿದ್ದಯೆರೂಸಲೇಮನ್ನ ನಾನು ಉನ್ನತ ಸ್ಥಾನದಲ್ಲಿ ಇಡದಿದ್ರೆ,+ಅದನ್ನ ನೆನಪಿಸ್ಕೊಳ್ಳದಿದ್ರೆನನ್ನ ನಾಲಿಗೆ ಸೇದಿಹೋಗಲಿ.   ಯೆಹೋವನೇ, ನೆನಪಿಸ್ಕೊ! ಯೆರೂಸಲೇಮ್‌ ಬಿದ್ದುಹೋಗೋ ದಿನ ಎದೋಮ್ಯರು,“ಅದನ್ನ ಕೆಡವಿಹಾಕಿ! ಅದ್ರ ಅಸ್ತಿವಾರದ ಸಮೇತ ಅದನ್ನ ಬೀಳಿಸಿ!”+ ಅಂದಿದ್ದನ್ನ ನೆನಪಿಸ್ಕೊ.   ಬಾಬೆಲಿನ ಮಗಳೇ, ಆದಷ್ಟು ಬೇಗ ನಾಶ ಆಗಿ ಹೋಗುವವಳೇ,+ನೀನು ನಮ್ಮ ಜೊತೆ ನಡ್ಕೊಂಡ ತರಾನೇನಿನ್ನ ಜೊತೆನೂ ನಡ್ಕೊಳ್ಳೋರು ಭಾಗ್ಯವಂತರು.+   ನಿನ್ನ ಮಕ್ಕಳನ್ನ ಹಿಡಿದುಬಂಡೆಗೆ ಅಪ್ಪಳಿಸೋರು ಸಂತೋಷ ಉಳ್ಳವರು.+

ಪಾದಟಿಪ್ಪಣಿ

ಬಾಬೆಲಿನ ಬಗ್ಗೆ ಹೇಳ್ತಿದ್ದಾರೆ.
ಅಥವಾ, “ಪಾಪ್ಲರ್‌.”
ಬಹುಶಃ, “ಒಣಗಿಹೋಗಲಿ.”