ಕೀರ್ತನೆ 6:1-10

  • ದಯೆಗಾಗಿ ಬಿನ್ನಹ

    • ಸತ್ತವರಿಗೆ ದೇವರನ್ನ ಸ್ತುತಿಸೋಕೆ ಆಗಲ್ಲ (5)

    • ದಯೆಗಾಗಿ ಮಾಡೋ ಬಿನ್ನಹಗಳನ್ನ ದೇವರು ಕೇಳಿಸ್ಕೊಳ್ತಾನೆ (9)

ದಾವೀದನ ಮಧುರ ಗೀತೆ. ಗಾಯಕರ ನಿರ್ದೇಶಕನಿಗೆ ಸೂಚನೆ: ಈ ಹಾಡನ್ನ ಶೆಮಿನಿತ್‌* ಸ್ವರಕ್ಕೆ ತಂತಿವಾದ್ಯಗಳನ್ನ ಹೊಂದಿಸ್ಕೊಂಡು ಹಾಡಬೇಕು. 6  ಯೆಹೋವನೇ, ಕೋಪದಿಂದ ನನ್ನ ಬೈಬೇಡ,ಸಿಟ್ಟಿಂದ ನನ್ನನ್ನ ತಿದ್ದಬೇಡ.+   ಯೆಹೋವನೇ, ನನಗೆ ದಯೆ* ತೋರಿಸು. ನನ್ನಲ್ಲಿ ಅಷ್ಟು ಶಕ್ತಿ ಇಲ್ಲ. ಯೆಹೋವನೇ, ನನ್ನನ್ನ ವಾಸಿಮಾಡು.+ ನನ್ನ ಮೂಳೆ ನಡುಗ್ತಿದೆ.   ನಿಜವಾಗ್ಲೂ ನನ್ನ ಮನಸ್ಸಿಗೆ ತುಂಬ ಬೇಜಾರಾಗಿದೆ.+ ಯೆಹೋವನೇ, ನಾನು ಇನ್ನೂ ಎಲ್ಲಿ ತನಕ ಹೀಗೇ ಕಷ್ಟಪಡಬೇಕು?+   ಯೆಹೋವನೇ, ಬಂದು ನನ್ನ ಕಾಪಾಡು,+ಶಾಶ್ವತ ಪ್ರೀತಿ ತೋರಿಸಿ ನನ್ನನ್ನ ರಕ್ಷಿಸು.+   ಯಾಕಂದ್ರೆ ಸತ್ತವರು ನಿನ್ನ ಬಗ್ಗೆ ಮಾತಾಡಲ್ಲ.* ಸಮಾಧಿಯಲ್ಲಿ* ನಿನ್ನನ್ನ ಹೊಗಳೋರು ಯಾರು?+   ಗೋಳಾಡಿ ಗೋಳಾಡಿ ಸುಸ್ತಾಗಿ ಹೋಗಿದ್ದೀನಿ,+ರಾತ್ರಿಯಿಡೀ ಅತ್ತುಅತ್ತು ಕಣ್ಣೀರಿಂದ ನನ್ನ ಹಾಸಿಗೆ ಒದ್ದೆ ಆಗಿದೆ,*ಕಣ್ಣೀರಲ್ಲೇ ನನ್ನ ಮಂಚ ಮುಳುಗಿ ಹೋಗಿದೆ.+   ದುಃಖದಿಂದ ನನಗೆ ಕಣ್ಣೇ ಬಿಡಕ್ಕಾಗ್ತಿಲ್ಲ,+ಕಿರುಕುಳ ಕೊಡೋರಿಂದ ನನ್ನ ದೃಷ್ಟಿ ಮಂಜಾಗಿದೆ.   ದುಷ್ಟರೇ, ನನ್ನಿಂದ ದೂರ ತೊಲಗಿ. ಯಾಕಂದ್ರೆ ಯೆಹೋವ ನನ್ನ ವೇದನೆಯನ್ನ ಕೇಳಿಸ್ಕೊಳ್ತಾನೆ.+   ದಯೆಗಾಗಿ ನಾನು ಬೇಡೋದನ್ನ ಯೆಹೋವ ಕೇಳಿಸ್ಕೊಳ್ತಾನೆ.+ ನನ್ನ ಪ್ರಾರ್ಥನೆಗೆ ಯೆಹೋವ ಉತ್ತರ ಕೊಡ್ತಾನೆ. 10  ನನ್ನ ಶತ್ರುಗಳೆಲ್ಲ ಅವಮಾನದಿಂದ ಭಯಪಡ್ತಾರೆ. ತಟ್ಟಂತ ಮಾನಮರ್ಯಾದೆ ಕಳ್ಕೊಂಡು ಓಡಿಹೋಗ್ತಾರೆ.+

ಪಾದಟಿಪ್ಪಣಿ

ಅಥವಾ “ಕರುಣೆ.”
ಅಥವಾ “ನಿನ್ನನ್ನ ನೆನಪಿಸ್ಕೊಳ್ಳಲ್ಲ.”
ಅಕ್ಷ. “ಈಜುತ್ತಿದೆ.”