ಕೀರ್ತನೆ 100:1-5

  • ಸೃಷ್ಟಿಕರ್ತನಿಗೆ ಧನ್ಯವಾದ ಹೇಳೋದು

    • “ಸಂತೋಷದಿಂದ ಯೆಹೋವನ ಸೇವೆ ಮಾಡಿ” (2)

    • ‘ನಮ್ಮನ್ನ ಸೃಷ್ಟಿಸಿದ್ದು ದೇವರೇ’ (3)

ಧನ್ಯವಾದದ ಮಧುರ ಗೀತೆ. 100  ಇಡೀ ಭೂಮಿಯ ಜನ್ರೇ, ಯೆಹೋವನಿಗೆ ಜೈಕಾರ ಹಾಕಿ.+   ಸಂತೋಷದಿಂದ ಯೆಹೋವನ ಸೇವೆ ಮಾಡಿ.+ ಸಂತೋಷದಿಂದ ಜೈಕಾರ ಹಾಕ್ತಾ ಆತನ ಸನ್ನಿಧಿಗೆ ಬನ್ನಿ.   ಯೆಹೋವನೇ ದೇವರು ಅಂತ ತಿಳ್ಕೊಳ್ಳಿ.*+ ನಮ್ಮನ್ನ ಸೃಷ್ಟಿಸಿದ್ದು ಆತನೇ, ನಾವು ಆತನಿಗೆ ಸೇರಿದವರು.+ ನಾವು ಆತನ ಜನ್ರು, ಆತನು ಪರಿಪಾಲಿಸೋ ಜನ್ರು.+   ಧನ್ಯವಾದ ಹೇಳ್ತಾ ಆತನ ಬಾಗಿಲ ಹತ್ರ ಬನ್ನಿ,+ಹೊಗಳ್ತಾ ಆತನ ಅಂಗಳಕ್ಕೆ ಬನ್ನಿ.+ ಆತನಿಗೆ ಧನ್ಯವಾದ ಹೇಳಿ, ಆತನ ಹೆಸ್ರನ್ನ ಕೊಂಡಾಡಿ.+   ಯಾಕಂದ್ರೆ ಯೆಹೋವ ಒಳ್ಳೆಯವನು.+ ಆತನ ಪ್ರೀತಿ ಶಾಶ್ವತ,ಆತನ ನಂಬಿಗಸ್ತಿಕೆ ನಿರಂತರ.+

ಪಾದಟಿಪ್ಪಣಿ

ಅಥವಾ “ಒಪ್ಕೊಳ್ಳಿ.”