ಕೀರ್ತನೆ 97:1-12
97 ಯೆಹೋವ ರಾಜನಾಗಿದ್ದಾನೆ!+
ಭೂಮಿ ಖುಷಿಪಡಲಿ.+
ಎಲ್ಲ ದ್ವೀಪಗಳು ಉಲ್ಲಾಸಿಸಲಿ.+
2 ಆತನ ಸುತ್ತ ಕಪ್ಪು ಮೋಡ ಕವಿದಿದೆ,+ನೀತಿ, ನ್ಯಾಯ ಆತನ ಸಿಂಹಾಸನದ ಅಸ್ತಿವಾರ ಆಗಿದೆ.+
3 ಬೆಂಕಿ ಆತನ ಮುಂದೆಮುಂದೆ ಹೋಗ್ತಾ+ಸುತ್ತ ಇರೋ ಆತನ ಶತ್ರುಗಳನ್ನ ಸುಟ್ಟು ಭಸ್ಮಮಾಡುತ್ತೆ.+
4 ಆತನ ಮಿಂಚಿನ ಬಾಣಗಳು ಭೂಮಿಯನ್ನ ಬೆಳಗಿಸುತ್ತೆ.
ಅದನ್ನ ನೋಡಿ ಭೂಮಿ ಗಡಗಡ ನಡುಗುತ್ತೆ.+
5 ಯೆಹೋವನ ಮುಂದೆ, ಇಡೀ ಭೂಮಿಯ ಒಡೆಯನ ಮುಂದೆ,ಬೆಟ್ಟಗಳು ಮೇಣದ ತರ ಕರಗಿಹೋಗುತ್ತೆ.+
6 ಆಕಾಶ ಆತನ ನೀತಿಯನ್ನ ಘೋಷಿಸುತ್ತೆ,ಎಲ್ಲ ಜನ್ರು ಆತನ ಮಹಿಮೆಯನ್ನ ನೋಡ್ತಾರೆ.+
7 ಕೆತ್ತಿದ ಮೂರ್ತಿಗಳನ್ನ ಆರಾಧಿಸೋರಿಗೆ,ಪ್ರಯೋಜನಕ್ಕೆ ಬರದ ದೇವರುಗಳ ಬಗ್ಗೆ ಕೊಚ್ಕೊಳ್ಳೋರಿಗೆ ಅವಮಾನ ಆಗುತ್ತೆ.+
ಎಲ್ಲ ದೇವರುಗಳೇ, ಆತನಿಗೆ ಬಗ್ಗಿ ನಮಸ್ಕರಿಸಿ.*+
8 ಯೆಹೋವನೇ, ನಿನ್ನ ತೀರ್ಪುಗಳ ಬಗ್ಗೆ+ಚೀಯೋನ್ ಕೇಳಿಸ್ಕೊಂಡು ಉಲ್ಲಾಸಿಸ್ತಾ ಇದೆ,ಯೆಹೂದದ ಪಟ್ಟಣಗಳು ಸಂಭ್ರಮಿಸ್ತಾ ಇವೆ.+
9 ಯಾಕಂದ್ರೆ ಯೆಹೋವ, ನೀನು ಭೂಮಿಯಲ್ಲೇ ಸರ್ವೋನ್ನತ,ಬೇರೆಲ್ಲ ದೇವರುಗಳಿಗಿಂತ ಎಷ್ಟೋ ಉನ್ನತ.+
10 ಯೆಹೋವನನ್ನ ಪ್ರೀತಿಸೋರೇ, ಕೆಟ್ಟದ್ದನ್ನ ದ್ವೇಷಿಸಿ.+
ಆತನು ತನ್ನ ನಿಷ್ಠಾವಂತರ ಪ್ರಾಣವನ್ನ ಕಾದು ಕಾಪಾಡ್ತಾನೆ,+ದುಷ್ಟರ ಕೈಯಿಂದ ಆತನು ಅವ್ರನ್ನ ಬಿಡಿಸ್ತಾನೆ.+
11 ನೀತಿವಂತರಿಗಾಗಿ ಬೆಳಕು ಪ್ರಜ್ವಲಿಸಿದೆ,+ಪ್ರಾಮಾಣಿಕ ಹೃದಯ ಇರೋರಿಗೆ ಸಂಭ್ರಮದ ಅಲೆ ಎದ್ದಿದೆ.
12 ನೀತಿವಂತರೇ, ಯೆಹೋವನಲ್ಲಿ ಖುಷಿಪಡಿ,ಆತನ ಪವಿತ್ರ ಹೆಸ್ರಿಗೆ ಧನ್ಯವಾದ ಹೇಳಿ.*