ಕೀರ್ತನೆ 143:1-12

  • ಒಣಗಿದ ನೆಲದ ಹಾಗೆ ದೇವರಿಗಾಗಿ ಹಾತೊರಿತೀನಿ

    • “ನಿನ್ನ ಕೈಕೆಲಸಗಳ ಬಗ್ಗೆ ಆಳವಾಗಿ ಆಲೋಚಿಸ್ತೀನಿ” (5)

    • “ನಿನ್ನ ಇಷ್ಟವನ್ನ ಮಾಡೋಕೆ ನನಗೆ ಕಲಿಸು” (10)

    • ‘ನಿನ್ನ ಪವಿತ್ರಶಕ್ತಿ ನನ್ನನ್ನ ನಡೆಸಲಿ’ (10)

ದಾವೀದನ ಮಧುರ ಗೀತೆ. 143  ಯೆಹೋವ, ನನ್ನ ಪ್ರಾರ್ಥನೆಯನ್ನ ಕೇಳಿಸ್ಕೊ,+ಸಹಾಯಕ್ಕಾಗಿ ನಾನಿಡೋ ಮೊರೆಗೆ ಗಮನಕೊಡು. ನೀನು ನಂಬಿಗಸ್ತ, ನೀತಿವಂತ. ಹಾಗಾಗಿ ನನಗೆ ಉತ್ರ ಕೊಡು.   ನಿನ್ನ ಸೇವಕನನ್ನ ನಿನ್ನ ನ್ಯಾಯಾಲಯದ ಮುಂದೆ ತರಬೇಡ,ಯಾಕಂದ್ರೆ ಬದುಕಿರೋರಲ್ಲಿ ಯಾರೂ ನಿನ್ನ ಮುಂದೆ ನೀತಿವಂತರಲ್ಲ.+   ಶತ್ರು ನನ್ನನ್ನ ಅಟ್ಟಿಸ್ಕೊಂಡು ಬರ್ತಿದ್ದಾನೆ. ಅವನು ನನ್ನನ್ನ ನೆಲಕ್ಕೆ ಹಾಕಿ ತುಳಿದು ಬಿಟ್ಟಿದ್ದಾನೆ. ಎಷ್ಟೋ ವರ್ಷಗಳ ಮುಂಚೆನೇ ಸತ್ತು ಹೋಗಿರೋರ ತರ ನಾನಾಗಿದ್ದೀನಿ. ಅವನು ನನ್ನನ್ನ ಕತ್ತಲಲ್ಲಿ ವಾಸಿಸೋ ಹಾಗೆ ಮಾಡಿದ್ದಾನೆ.   ನಾನು ಬೇಜಾರಾಗಿದ್ದೀನಿ, ನನಗೆ ಶಕ್ತಿನೇ ಇಲ್ಲ.+ ನನ್ನ ಹೃದಯ ಮರಗಟ್ಟಿ ಹೋಗಿದೆ.+   ಕಳೆದು ಹೋದ ದಿನಗಳನ್ನ ನಾನು ನೆನಪಿಸ್ಕೊಳ್ತೀನಿ,ನಿನ್ನ ಎಲ್ಲ ಕೆಲಸಗಳ ಬಗ್ಗೆ ನಾನು ಧ್ಯಾನಿಸ್ತೀನಿ,+ನಿನ್ನ ಕೈಕೆಲಸಗಳ ಬಗ್ಗೆ ಆಳವಾಗಿ ಆಲೋಚಿಸ್ತೀನಿ.*   ನಾನು ನಿನ್ನ ಮುಂದೆ ನನ್ನ ಕೈ ಚಾಚ್ತೀನಿ,ಒಣಗಿದ ನೆಲ ಮಳೆಗಾಗಿ ಬಾಯಾರಿರೋ ತರ ನಾನು ನಿನಗಾಗಿ ಬಾಯಾರಿದ್ದೀನಿ.+ (ಸೆಲಾ)   ಯೆಹೋವ, ಬೇಗ ಉತ್ರ ಕೊಡು,+ಇದ್ರ ಮೇಲೆ ನನಗೆ ಇನ್ನು ತಾಳಿಕೊಳ್ಳೋಕಾಗಲ್ಲ.+ ನಿನ್ನ ಮುಖವನ್ನ ನನ್ನಿಂದ ಮರೆ ಮಾಡ್ಕೊಬೇಡ,+ನೀನು ಮರೆ ಮಾಡ್ಕೊಂಡ್ರೆ ನನ್ನ ಗತಿ ಸಮಾಧಿಗೆ* ಸೇರಿದವರ ತರ ಆಗಿಬಿಡುತ್ತೆ.+   ಬೆಳ್ಳಂಬೆಳಿಗ್ಗೆಯೇ ನಿನ್ನ ಶಾಶ್ವತ ಪ್ರೀತಿಯ ಬಗ್ಗೆ ನಾನು ಕೇಳಿಸ್ಕೊಳ್ಳೋ ಹಾಗಾಗಲಿ,ಯಾಕಂದ್ರೆ ನಾನು ನಿನ್ನಲ್ಲಿ ಭರವಸೆ ಇಟ್ಟಿದ್ದೀನಿ. ನಾನು ನಡೀಬೇಕಾದ ದಾರಿಯನ್ನ ನನಗೆ ತೋರಿಸ್ಕೊಡು,+ಯಾಕಂದ್ರೆ ನಾನು ನಿನ್ನ ಕಡೆ ತಿರುಗಿಕೊಳ್ತೀನಿ.   ಯೆಹೋವ, ನನ್ನ ಶತ್ರುಗಳಿಂದ ನನ್ನನ್ನ ಕಾಪಾಡು. ರಕ್ಷಣೆಗಾಗಿ ನಾನು ನಿನ್ನ ಹತ್ರ ಓಡಿ ಬಂದಿದ್ದೀನಿ.+ 10  ನಿನಗೆ ಏನು ಇಷ್ಟಾನೋ ಅದನ್ನ ಮಾಡೋಕೆ ನನಗೆ ಕಲಿಸು,+ಯಾಕಂದ್ರೆ ನೀನೇ ನನ್ನ ದೇವರು. ನೀನು ಒಳ್ಳೆಯವನು. ನೀನು ನನ್ನನ್ನ ನಿನ್ನ ಪವಿತ್ರಶಕ್ತಿಯಿಂದ ಸಮ ನೆಲದ ಮೇಲೆ* ನಡಿಸು. 11  ಯೆಹೋವ, ನಿನ್ನ ಹೆಸ್ರಿಂದಾಗಿ ನನ್ನನ್ನ ಜೀವಂತವಾಗಿ ಉಳಿಸು. ನಿನ್ನ ನೀತಿಯಿಂದಾಗಿ ನನ್ನನ್ನ ಕಷ್ಟದಿಂದ ಬಿಡಿಸು.+ 12  ನಿನ್ನ ಶಾಶ್ವತ ಪ್ರೀತಿಯಿಂದಾಗಿ ನನ್ನ ಶತ್ರುಗಳಿಗೆ ಅಂತ್ಯ ಹಾಡು,*+ನನಗೆ ಕಿರುಕುಳ ಕೊಡೋರನ್ನ ನಾಶಮಾಡು,+ಯಾಕಂದ್ರೆ ನಾನು ನಿನ್ನ ಸೇವಕ.+

ಪಾದಟಿಪ್ಪಣಿ

ಅಥವಾ “ಅಧ್ಯಯನ ಮಾಡ್ತೀನಿ.”
ಅಥವಾ “ಗುಂಡಿಗೆ.”
ಅಥವಾ “ಪ್ರಾಮಾಣಿಕತೆಯ ದೇಶದಲ್ಲಿ.”
ಅಕ್ಷ. “ನಿಶ್ಶಬ್ದ ಮಾಡು.”