ಕೀರ್ತನೆ 35:1-28

  • ಶತ್ರುಗಳಿಂದ ಬಿಡಿಸೋಕೆ ಪ್ರಾರ್ಥನೆ

    • ವೈರಿಗಳನ್ನ ವಾಪಸ್‌ ಕಳಿಸೋಕೆ ಬಿನ್ನಹ (5)

    • ಜನ್ರ ಗುಂಪಿನ ಮಧ್ಯ ದೇವರಿಗೆ ಸ್ತುತಿ (18)

    • ವಿನಾಕಾರಣ ನನ್ನ ಕಡೆ ದ್ವೇಷ (19)

ದಾವೀದನ ಕೀರ್ತನೆ 35  ಯೆಹೋವನೇ, ನನ್ನ ವಿರೋಧಿಗಳ ವಿರುದ್ಧ ನನಗಿರೋ ಮೊಕದ್ದಮೆಯನ್ನ ನನ್ನ ಪಕ್ಷದಲ್ಲಿ ನಿಂತು ವಾದಿಸು.+ ನನ್ನ ಜೊತೆ ಹೋರಾಡ್ತಿರೋರ ವಿರುದ್ಧ ಹೋರಾಡು.+   ನಿನ್ನ ಚಿಕ್ಕ ಗುರಾಣಿ,* ನಿನ್ನ ದೊಡ್ಡ ಗುರಾಣಿ ತಗೊಂಡು,+ನನ್ನನ್ನ ಕಾಪಾಡೋಕೆ ಬಾ.+   ನನ್ನನ್ನ ಅಟ್ಟಿಸಿಕೊಂಡು ಬರ್ತಿರೋ ಜನ್ರ ವಿರುದ್ಧ ನಿನ್ನ ಈಟಿಯನ್ನ, ಯುದ್ಧದ ಕೊಡಲಿಯನ್ನ* ಎತ್ತು.+ ನನಗೆ “ನಿನ್ನನ್ನ ರಕ್ಷಿಸ್ತೀನಿ”+ ಅಂತ ಹೇಳು.   ನನ್ನ ಜೀವವನ್ನ ಬೇಟೆಯಾಡ್ತಾ ಇರೋರಿಗೆ ನಾಚಿಕೆ ಅವಮಾನ ಆಗಲಿ.+ ನನ್ನನ್ನ ನಾಶಮಾಡೋಕೆ ಪಿತೂರಿ ಮಾಡ್ತಿರೋರು ಅವಮಾನದಿಂದ ವಾಪಸ್‌ ಹೋಗ್ಲಿ.   ಅವರು ಗಾಳಿಗೆ ಹಾರಿಹೋಗೋ ಹೊಟ್ಟಿನ ತರ ಆಗಲಿ,ಯೆಹೋವನ ದೂತ ಅವ್ರನ್ನ ಓಡಿಸಿಬಿಡ್ಲಿ.+   ಯೆಹೋವನ ದೂತ ಅವ್ರನ್ನ ಅಟ್ಟಿಸ್ಕೊಂಡು ಹೋಗೋವಾಗ,ಅವ್ರ ದಾರಿ ಕತ್ತಲಿಂದ ತುಂಬಲಿ, ಜಾರಿ ಬೀಳೋ ತರ ಇರಲಿ.   ಯಾಕಂದ್ರೆ ಅವರು ಕಾರಣ ಇಲ್ಲದೆ ನನ್ನನ್ನ ಸಿಕ್ಕಿಸೋಕೆ ಬಲೆ ಬೀಸಿದ್ದಾರೆ, ಕಾರಣ ಇಲ್ಲದೆ ನನಗಾಗಿ ಗುಂಡಿ ತೋಡಿದ್ದಾರೆ.   ಆದ್ರೆ ಅವ್ರಿಗೇ ಗೊತ್ತಾಗದ ಹಾಗೆ ಅವ್ರ ಮೇಲೆ ವಿಪತ್ತು ಬರಲಿ,ಅವರು ಬೀಸಿದ ಬಲೆಯಲ್ಲಿ ಅವ್ರೇ ಸಿಕ್ಕಿಹಾಕೊಳ್ಳಲಿ,ಅವರು ತೋಡಿದ ಗುಂಡಿಗೆ ಅವ್ರೇ ಬಿದ್ದು ನಾಶವಾಗಲಿ.+   ಆದ್ರೆ ನಾನು ಯೆಹೋವನಲ್ಲಿ ಖುಷಿಪಡ್ತೀನಿ,ಆತನು ರಕ್ಷಿಸೋದನ್ನ ನೋಡಿ ಸಂತೋಷಪಡ್ತೀನಿ. 10  ನನ್ನ ಎಲುಬುಗಳೆಲ್ಲ ಹೀಗೆ ಹೇಳುತ್ತೆ“ಯೆಹೋವನೇ, ನಿನ್ನ ಹಾಗೆ ಯಾರಿದ್ದಾರೆ? ನೀನು ಬಲಿಷ್ಠರ ಕೈಯಿಂದ ನಿಸ್ಸಹಾಯಕರನ್ನ ಕಾಪಾಡ್ತೀಯ,+ದೋಚುವವರ ಕೈಯಿಂದ ಮುಗ್ಧರನ್ನ ಮತ್ತು ಬಡವರನ್ನ ಬಿಡಿಸ್ತೀಯ.”+ 11  ಕೆಟ್ಟವರು ಮುಂದೆ ಬಂದು ನನ್ನ ವಿರುದ್ಧ ಸಾಕ್ಷಿ ಹೇಳ್ತಾರೆ,+ನನಗೆ ಗೊತ್ತೇ ಇಲ್ಲದಿರೋ ವಿಷ್ಯಗಳ ಬಗ್ಗೆ ನನ್ನನ್ನ ಕೇಳ್ತಾರೆ. 12  ಉಪಕಾರಕ್ಕೆ ಅಪಕಾರ ಮಾಡ್ತಾರೆ,+ತಬ್ಬಲಿತರ ಮಾಡಿಬಿಟ್ಟಿದ್ದಾರೆ. 13  ಆದ್ರೆ ಅವ್ರಿಗೆ ಹುಷಾರಿಲ್ಲದಿದ್ದಾಗ ನಾನು ಗೋಣಿಬಟ್ಟೆ ಹಾಕೊಂಡೆ,ಉಪವಾಸ ಮಾಡಿ ಕಷ್ಟಪಟ್ಟೆ,ಯಾವಾಗ ನನ್ನ ಪ್ರಾರ್ಥನೆಗೆ ಉತ್ತರ ಸಿಗಲಿಲ್ವೋ, 14  ಆಗ ನನ್ನ ಒಬ್ಬ ಸ್ನೇಹಿತನಿಗಾಗಿ, ನನ್ನ ತಮ್ಮನಿಗಾಗಿ ದುಃಖಪಡೋ ಹಾಗೆ ದುಃಖಪಡ್ತಾ ಆಕಡೆ ಈಕಡೆ ತಿರುಗಾಡಿದೆ,ಅಮ್ಮ ಸತ್ತಾಗ ಗೋಳಾಡಿದ ಹಾಗೆ ಗೋಳಾಡಿ ತಲೆತಗ್ಗಿಸಿದೆ. 15  ಆದ್ರೆ ನಾನು ಎಡವಿಬಿದ್ದಾಗ ಅವರು ಖುಷಿಪಟ್ರು,ಒಟ್ಟಾಗಿ ಬಂದು ನನ್ನನ್ನ ಸಾಯಿಸೋಕೆ ಹೊಂಚುಹಾಕಿದ್ರು,ಅವರು ಸುಮ್ಮನಿರಲಿಲ್ಲ, ನನ್ನನ್ನ ತುಂಡುತುಂಡಾಗಿ ಸೀಳಿಬಿಟ್ರು. 16  ದೇವ್ರ ಮೇಲೆ ಭಕ್ತಿ ಇಲ್ಲದ ಅವರು ನನ್ನನ್ನ ಕೀಳಾಗಿ ನೋಡ್ತಾ ಅಣಕಿಸಿದ್ರು,*ಅವರು ನನ್ನ ವಿರುದ್ಧ ಹಲ್ಲು ಕಡಿದ್ರು.+ 17  ಯೆಹೋವನೇ, ಎಲ್ಲಿ ತನಕ ಹೀಗೆ ನೋಡ್ತಾ ಸುಮ್ಮನೆ ಇರ್ತಿಯಾ?+ ಅವ್ರ ಆಕ್ರಮಣಗಳಿಂದ ನನ್ನನ್ನ ಕಾಪಾಡು,+ಎಳೇ* ಸಿಂಹಗಳಿಂದ ನನ್ನ ಅಮೂಲ್ಯ ಜೀವವನ್ನ ಕಾಪಾಡು.+ 18  ಆಗ ನಾನು ತುಂಬಿದ ಸಭೆಯಲ್ಲಿ ನಿನಗೆ ಧನ್ಯವಾದ ಹೇಳ್ತೀನಿ,+ಜನ್ರ ಗುಂಪಲ್ಲಿ ನಿನ್ನನ್ನ ಹೊಗಳ್ತೀನಿ. 19  ಸುಮ್ಮಸುಮ್ಮನೆ ನನ್ನ ಶತ್ರುಗಳು ನನ್ನನ್ನ ನೋಡಿ ಹಿಗ್ಗೋಕೆ ಬಿಡಬೇಡ,ವಿನಾಕಾರಣ ನನ್ನನ್ನ ದ್ವೇಷಿಸೋರು+ ನನ್ನನ್ನ ನೋಡಿ ದುರುದ್ದೇಶದಿಂದ ಕಣ್ಣು ಮಿಟುಕಿಸೋಕೆ+ ಬಿಡಬೇಡ. 20  ಯಾಕಂದ್ರೆ ಅವ್ರ ಮಾತಲ್ಲಿ ಶಾಂತಿ ಇಲ್ಲ,ದೇಶದಲ್ಲಿರೋ ಶಾಂತಿಪ್ರಿಯರ ಮೇಲೆ ಮೋಸದಿಂದ ಸಂಚು ಮಾಡ್ತಾರೆ.+ 21  ಅವರು ನನ್ನನ್ನ ಬೈಯೋಕೆ ತಮ್ಮ ಬಾಯಿಯನ್ನ ಊರಗಲ ತೆಗಿದು,“ಆಹಾ! ಆಹಾ! ನಾವು ಏನು ಅಂದ್ಕೊಂಡಿದ್ವೋ ಹಾಗೇ ಆಯ್ತು” ಅಂತಾರೆ. 22  ಯೆಹೋವನೇ, ನೀನು ಇದನ್ನ ನೋಡಿದ್ದೀಯ, ಸುಮ್ಮನಿರಬೇಡ.+ ಯೆಹೋವನೇ, ನನ್ನಿಂದ ದೂರ ಇರಬೇಡ.+ 23  ದಯವಿಟ್ಟು ಬಂದು ನನ್ನನ್ನ ರಕ್ಷಿಸು,ನನ್ನ ದೇವರಾದ ಯೆಹೋವನೇ, ನನ್ನ ಪಕ್ಷದಲ್ಲಿ ನಿಂತು ನನ್ನ ಪರವಾಗಿ ವಾದಿಸು. 24  ನನ್ನ ದೇವರಾದ ಯೆಹೋವನೇ, ನಿನ್ನ ನೀತಿಗೆ ತಕ್ಕ ಹಾಗೆ ನನಗೆ ತೀರ್ಪು ಕೊಡು,+ಅವರು ನನ್ನನ್ನ ನೋಡಿ ಹಿಗ್ಗೋಕೆ ಬಿಡಬೇಡ. 25  ಯಾವತ್ತೂ ಅವರು “ಆಹಾ! ನಮಗೆ ಏನು ಬೇಕಾಗಿತ್ತೋ ಅದೇ ಸಿಕ್ತು” ಅಂದ್ಕೊಬಾರದು. ಯಾವತ್ತೂ ಅವರು “ನಾವು ಅವನನ್ನ ನುಂಗಿಬಿಟ್ವಿ” ಅಂದ್ಕೊಬಾರದು.+ 26  ನನ್ನ ಕಷ್ಟ ನೋಡಿ ಖುಷಿಪಡೋರಿಗೆ,ನಾಚಿಕೆ, ಅವಮಾನ ಆಗಲಿ. ನನ್ನನ್ನ ನೋಡಿ ತಮ್ಮನ್ನೇ ಅಟ್ಟಕೇರಿಸಿಕೊಳ್ಳೋ ಜನ್ರಿಗೆ ನಾಚಿಕೆ, ಅವಮಾನ ಆಗಲಿ. 27  ಆದ್ರೆ ನಾನು ನೀತಿಯಿಂದ ನಡ್ಕೊಳ್ಳೋದನ್ನ ನೋಡಿ ಖುಷಿಪಡೋರು ಆನಂದದಿಂದ ಜೈಕಾರ ಹಾಕಲಿ,“ತನ್ನ ಸೇವಕನ ಶಾಂತಿನ ನೋಡಿ ಸಂತೋಷಪಡೋ ಯೆಹೋವನಿಗೆ ಮಹಿಮೆ ಆಗಲಿ” ಅಂತ ಅವರು ಯಾವಾಗ್ಲೂ ಹೇಳಲಿ.+ 28  ಆಗ ನಾನು ನಿನ್ನ ನೀತಿಯ ಬಗ್ಗೆ ವಿವರಿಸ್ತೀನಿ,*+ಇಡೀ ದಿನ ನಿನ್ನನ್ನ ಹಾಡಿ ಹೊಗಳ್ತೀನಿ.+

ಪಾದಟಿಪ್ಪಣಿ

ಇಂಥ ಗುರಾಣಿಗಳನ್ನ ಬಿಲ್ಲುಗಾರರು ಬಳಸ್ತಿದ್ರು.
ಅಥವಾ “ಇಬ್ಬಾಯಿ ಕೊಡಲಿಯನ್ನ.”
ಬಹುಶಃ, “ದೇವಭಕ್ತಿ ಇಲ್ಲದವರು ಒಂದು ರೊಟ್ಟಿಗಾಗಿ ಅಣಕಿಸಿದ್ರು.”
ಅಥವಾ “ಪ್ರಾಯದ.”
ಅಥವಾ “ಧ್ಯಾನಿಸ್ತೀನಿ.”