ಕೀರ್ತನೆ 66:1-20
ಗಾಯಕರ ನಿರ್ದೇಶಕನಿಗೆ ಸೂಚನೆ, ಇದೊಂದು ಮಧುರ ಗೀತೆ.
66 ಇಡೀ ಭೂಮಿಯ ನಿವಾಸಿಗಳೇ, ದೇವರಿಗೆ ಜೈಕಾರ ಹಾಕಿ.+
2 ಗೌರವದಿಂದ ಕೂಡಿರೋ ಆತನ ಹೆಸ್ರನ್ನ ಹಾಡಿ ಹೊಗಳಿ.*
ಆತನನ್ನ ಕೊಂಡಾಡ್ತಾ ಮಹಿಮೆಪಡಿಸಿ.+
3 ದೇವರಿಗೆ ಹೀಗೆ ಹೇಳಿ “ನಿನ್ನ ಕೆಲಸಗಳು ಎಷ್ಟೋ ಆಶ್ಚರ್ಯ ತರುತ್ತೆ!+
ನಿನ್ನ ಮಹಾ ಶಕ್ತಿಯಿಂದ,ನಿನ್ನ ಶತ್ರುಗಳು ನಿನ್ನ ಹತ್ರ ಗಡಗಡ ಅಂತ ನಡುಗ್ತಾ ಬರ್ತಾರೆ.+
4 ಭೂಮಿಯ ಎಲ್ಲ ಜನ್ರು ನಿನಗೆ ಬಗ್ಗಿ ನಮಸ್ಕಾರ ಮಾಡ್ತಾರೆ,+ಅವರು ನಿನಗೆ ಹಾಡಿ ಹೊಗಳ್ತಾರೆ,ಅವರು ನಿನ್ನ ಹೆಸ್ರಿಗೆ ಗೌರವ ಕೊಡೋಕೆ ಸ್ತುತಿ ಗೀತೆಗಳನ್ನ ಹಾಡ್ತಾರೆ.”+ (ಸೆಲಾ)
5 ಬನ್ನಿ, ದೇವರ ಕೆಲಸಗಳನ್ನ ನೋಡಿ.
ಮನುಷ್ಯರಿಗಾಗಿ ಆತನು ಮಾಡಿರೋ ಕೆಲಸಗಳು ಭಯವಿಸ್ಮಯ ಹುಟ್ಟಿಸುತ್ತೆ.+
6 ಆತನು ಸಮುದ್ರವನ್ನ ಒಣನೆಲದ ತರ ಮಾಡಿದ,+ಜನ್ರು ನದಿಯನ್ನ ನಡ್ಕೊಂಡೇ ದಾಟಿದ್ರು.+
ದೇವರಿಂದಾಗಿ ನಾವು ಖುಷಿಯಲ್ಲಿ ತೇಲಾಡಿದ್ವಿ.+
7 ಆತನು ತನ್ನ ಶಕ್ತಿಯಿಂದ ಶಾಶ್ವತವಾಗಿ ಆಳ್ತಾನೆ.+
ಆತನ ಕಣ್ಣುಗಳು ಜನ್ರನ್ನ ಗಮನಿಸ್ತಾನೇ ಇರುತ್ತೆ.+
ಹಠಮಾರಿಗಳು ತಮ್ಮನ್ನ ತಾವೇ ಹೆಚ್ಚಿಸ್ಕೊಬಾರದು.+ (ಸೆಲಾ)
8 ದೇಶಗಳ ಜನ್ರೇ, ನಮ್ಮ ದೇವರನ್ನ ಸ್ತುತಿಸಿ,+ಆತನನ್ನ ಹೊಗಳೋದು ಎಲ್ಲ ಕಡೆ ಕೇಳಿಸಲಿ.
9 ಆತನು ನಮ್ಮ ಜೀವವನ್ನ ಕಾಪಾಡ್ತಾನೆ,+ನಮ್ಮ ಕಾಲು ಎಡವಿ ಬೀಳೋಕೆ* ಆತನು ಬಿಡಲ್ಲ.+
10 ಯಾಕಂದ್ರೆ ದೇವರೇ, ನೀನು ನಮ್ಮನ್ನ ಪರೀಕ್ಷಿಸಿದ್ದೀಯ,+ಬೆಳ್ಳಿಯನ್ನ ಪರಿಷ್ಕರಿಸೋ ಹಾಗೆ ನೀನು ನಮ್ಮನ್ನ ಪರಿಷ್ಕರಿಸಿದ್ದೀಯ.
11 ನೀನು ನಮ್ಮನ್ನ ನಿನ್ನ ಬಲೆಯಲ್ಲಿ ಸಿಕ್ಕಿಸಿದೆ,ಜಜ್ಜಿಹಾಕೋ ಹೊರೆಯನ್ನ ನಮ್ಮ ಮೇಲೆ* ಹೊರಿಸಿದೆ.
12 ನಾಶವಾಗೋ ಮನುಷ್ಯ ನಮ್ಮ* ಮೇಲೆ ಸವಾರಿ ಮಾಡೋಕೆ ಬಿಟ್ಟೆ,ನಾವು ಬೆಂಕಿ ಮತ್ತು ನೀರನ್ನ ದಾಟಿ ಬಂದ್ವಿ,ಆಮೇಲೆ, ನೀನು ನಮ್ಮನ್ನ ಒಂದು ನೆಮ್ಮದಿಯ ನೆಲೆಗೆ ಕರ್ಕೊಂಡು ಬಂದೆ.
13 ಸರ್ವಾಂಗಹೋಮ ಬಲಿಗಳನ್ನ ತಗೊಂಡು ನಾನು ನಿನ್ನ ಆಲಯಕ್ಕೆ ಬರ್ತಿನಿ,+ನಾನು ನನ್ನ ಹರಕೆಗಳನ್ನ ನಿನಗೆ ಸಲ್ಲಿಸ್ತೀನಿ,+
14 ನಾನು ಕಷ್ಟದಲ್ಲಿದ್ದಾಗ ನನ್ನ ತುಟಿಗಳು ಹೊತ್ತ ಆ ಹರಕೆಗಳನ್ನ ಒಪ್ಪಿಸ್ತೀನಿ,+ನಾನು ತೊಂದರೆಯಲ್ಲಿದ್ದಾಗ ನನ್ನ ಬಾಯಿಂದ ಕೊಟ್ಟ ಆ ಮಾತನ್ನ ತೀರಿಸ್ತೀನಿ.
15 ನಾನು ಕೊಬ್ಬಿದ ಪ್ರಾಣಿಗಳ ಸರ್ವಾಂಗಹೋಮ ಬಲಿಗಳನ್ನ ನಿನಗೆ ಕೊಡ್ತೀನಿಟಗರನ್ನ ಬಲಿಕೊಟ್ಟು ಅದ್ರ ಹೊಗೆ ಮೇಲೆ ಏರೋ ತರ ಮಾಡ್ತೀನಿ.
ಆಡುಗಳ ಜೊತೆ ಹೋರಿಗಳನ್ನೂ ಬಲಿಯಾಗಿ ಕೊಡ್ತೀನಿ. (ಸೆಲಾ)
16 ದೇವರಿಗೆ ಭಯಪಡೋರೇ, ನೀವೆಲ್ಲ ಬಂದು ಕೇಳಿಸ್ಕೊಳ್ಳಿ,ಆತನು ನನಗಾಗಿ ಏನೆಲ್ಲ ಮಾಡಿದ್ದಾನೆ ಅಂತ ನಾನು ನಿಮಗೆ ಹೇಳ್ತೀನಿ.+
17 ನಾನು ನನ್ನ ಬಾಯಿಂದ ಆತನನ್ನ ಕೂಗಿದೆನನ್ನ ನಾಲಿಗೆಯಿಂದ ಆತನಿಗೆ ಗೌರವ ಕೊಟ್ಟೆ.
18 ನಾನು ನನ್ನ ಹೃದಯದಲ್ಲಿ ಯಾವ ರೀತಿ ಆದ್ರೂ ಕೆಟ್ಟ ವಿಷ್ಯಗಳನ್ನ ಇಟ್ಕೊಂಡಿದ್ರೆ,ಯೆಹೋವ ನನ್ನ ಕೂಗನ್ನ ಕೇಳಿಸಿಕೊಳ್ತಾ ಇರಲಿಲ್ಲ.+
19 ಆದ್ರೆ ದೇವರು ನನ್ನ ಮೊರೆಯನ್ನ ಕೇಳಿಸ್ಕೊಂಡನು,+ನನ್ನ ಪ್ರಾರ್ಥನೆಗೆ ಗಮನಕೊಟ್ಟನು.+
20 ನನ್ನ ಪ್ರಾರ್ಥನೆಯನ್ನ ತಳ್ಳಿಹಾಕದ ದೇವರಿಗೆ,ತನ್ನ ಶಾಶ್ವತ ಪ್ರೀತಿಯನ್ನ ನನಗೆ ಕೊಡೋಕೆ ಹಿಂದೆಮುಂದೆ ನೋಡದ ದೇವರಿಗೆ ಹೊಗಳಿಕೆಯಾಗಲಿ.
ಪಾದಟಿಪ್ಪಣಿ
^ ಅಥವಾ “ಸಂಗೀತ ರಚಿಸಿ.”
^ ಅಥವಾ “ತತ್ತರಿಸಿ ಹೋಗೋಕೆ.”
^ ಅಕ್ಷ. “ನಮ್ಮ ಸೊಂಟದ ಮೇಲೆ.”
^ ಅಕ್ಷ. “ನಮ್ಮ ತಲೆ.”