ಮಾಹಿತಿ ಇರುವಲ್ಲಿ ಹೋಗಲು


ಬೈಬಲ್‌ ಅಧ್ಯಯನದ ಕೋರ್ಸ್‌

ಎಂದೆಂದೂ ಖುಷಿಯಾಗಿ ಬಾಳೋಣ!

ಈ ಉಚಿತ ಬೈಬಲ್‌ ಕೋರ್ಸ್‌ನಲ್ಲಿ, ಕೆಳಗೆ ಕೊಡಲಾಗಿರೋ ಪ್ರಶ್ನೆಗಳಿಗೆ ಉತ್ತರ ತಿಳಿಯಬಹುದು:

  • ನಾನು ಹೇಗೆ ಜೀವನದಲ್ಲಿ ಖುಷಿಯನ್ನು ಕಂಡುಕೊಳ್ಳಬಹುದು?

  • ಕಷ್ಟಸಂಕಟಗಳು ಹಾಗೂ ದುಷ್ಟತನ ಎಂದಾದರೂ ಕೊನೆಯಾಗುತ್ತಾ?

  • ತೀರಿಹೋಗಿರೋ ನನ್ನ ಪ್ರೀತಿಪಾತ್ರರನ್ನು ನಾನು ಪುನಃ ನೋಡೋಕಾಗುತ್ತಾ?

  • ದೇವರಿಗೆ ನನ್ನ ಬಗ್ಗೆ ನಿಜವಾಗಲೂ ಕಾಳಜಿ ಇದೆಯಾ?

  • ದೇವರು ನನಗೆ ಕಿವಿಗೊಡೋ ಹಾಗೆ ನಾನು ಹೇಗೆ ಪ್ರಾರ್ಥನೆ ಮಾಡೋದು?

ಉಚಿತ

ಈ ಬೈಬಲ್‌ ಕೋರ್ಸ್‌ಗಾಗಿ ನೀವು ಹಣ ಕೊಡಬೇಕಾಗಿಲ್ಲ. ಹಾಗಾಗಿ ಬೈಬಲ್‌ ಕಲಿಯಲು, ಬೈಬಲ್‌ ಅಥವಾ ಎಂದೆಂದೂ ಖುಷಿಯಾಗಿ ಬಾಳೋಣ! ಪ್ರತಿಯನ್ನು ಉಚಿತವಾಗಿ ಪಡೆಯಿರಿ.

ನಿಮ್ಮ ಅನುಕೂಲಕ್ಕಾಗಿ

ನಿಮಗೆ ಈ ವಿಷಯಗಳನ್ನು ಕಲಿಸಲು ನಿಮಗೆ ಅನುಕೂಲವಾದ ಸಮಯ ಹಾಗೂ ಸ್ಥಳದಲ್ಲಿ, ವೈಯಕ್ತಿಕವಾಗಿ, ಫೋನ್‌ ಅಥವಾ ಬೇರೆ ಮಾಧ್ಯಮಗಳ ಮೂಲಕ ಕಲಿಸಿಕೊಡುವ ಒಬ್ಬರನ್ನು ಭೇಟಿ ಮಾಡಬಹುದು.

ಒತ್ತಾಯ ಇಲ್ಲ

ನೀವು ಯಾವಾಗ ಬೇಕಾದರೂ ಈ ಕೋರ್ಸನ್ನು ನಿಲ್ಲಿಸಬಹುದು. ಮುಗಿಸಲೇಬೇಕು ಅನ್ನೋ ಯಾವುದೇ ಒತ್ತಾಯ ಇಲ್ಲ.

ನಮ್ಮ ಈ ಬೈಬಲ್‌ ಕೋರ್ಸ್‌ ಹೇಗಿರುತ್ತೆ?

ಬೈಬಲನ್ನು ಹಂತಹಂತವಾಗಿ ಕಲಿಯೋಕೆ ನಿಮಗೆ ಬೈಬಲ್‌ ಕಲಿಸುವವರು ಸಹಾಯ ಮಾಡ್ತಾರೆ. ನೀವು ಬೈಬಲ್‌ ವಿಷಯಗಳನ್ನು ಇನ್ನಷ್ಟು ಕಲಿಯೋಕೆ, ಹಾಗೂ ಕಲಿತ ವಿಷಯಗಳಿಂದ ಸಹಾಯ ಪಡೆದುಕೊಳ್ಳುವುದು ಹೇಗೆ ಅಂತ ತಿಳಿಯೋಕೆ ಎಂದೆಂದೂ ಖುಷಿಯಾಗಿ ಬಾಳೋಣ! ಅನ್ನೋ ಪುಸ್ತಕ ಸಹಾಯ ಮಾಡುತ್ತೆ. ಹೆಚ್ಚನ್ನು ತಿಳಿಯಲು ಈ ವಿಡಿಯೋ ನೋಡಿ ಅಥವಾ ಈ ಬೈಬಲ್‌ ಕೋರ್ಸ್‌ ಬಗ್ಗೆ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳನ್ನು ಓದಿ ನೋಡಿ.

ಕಲಿಯುವ ವಿಷಯಗಳು ಹೇಗಿರುತ್ತೆ ಅಂತ ನೋಡೋಕೆ ಇಷ್ಟಪಡ್ತೀರಾ?

ಈ ಕೋರ್ಸಿನ ಆರಂಭದ ಕೆಲವು ಪಾಠಗಳನ್ನು ನೋಡಿ.

ಈ ಕೋರ್ಸನ್ನು ಟ್ರೈ ಮಾಡಿ ನೋಡ್ತೀರಾ?

ನಿಮ್ಮ ಮೊದಲ ವೈಯಕ್ತಿಕ ಬೈಬಲ್‌ ಅಧ್ಯಯನವನ್ನು ವಿನಂತಿಸಲು ಈ ಬಟನ್‌ ಕ್ಲಿಕ್‌ ಮಾಡಿ.