ಕೀರ್ತನೆ 110:1-7

  • ಮೆಲ್ಕಿಜೆದೇಕನ ತರದ ರಾಜ ಮತ್ತು ಪುರೋಹಿತ

    • ‘ನಿನ್ನ ಶತ್ರುಗಳ ಮಧ್ಯ ಆಳ್ವಿಕೆ ಮಾಡು’ (2)

    • ಸ್ವಇಷ್ಟದಿಂದ ಮುಂದೆ ಬರೋ ಯುವಜನ ಇಬ್ಬನಿಯ ಹಾಗೆ (3)

ದಾವೀದನ ಮಧುರ ಗೀತೆ. 110  ಯೆಹೋವ ನನ್ನ ಒಡೆಯನಿಗೆ,“ನಿನ್ನ ಶತ್ರುಗಳನ್ನ ನಾನು ನಿನ್ನ ಪಾದಪೀಠವಾಗಿ ಮಾಡೋ ತನಕ,+ನೀನು ನನ್ನ ಬಲಗಡೆ ಕೂತ್ಕೊ”+ ಅಂತ ಹೇಳಿದ.   ಬಲಿಷ್ಠವಾದ ನಿನ್ನ ರಾಜದಂಡವನ್ನ ಯೆಹೋವ ಚೀಯೋನಿಂದ ಚಾಚಿ,“ನಿನ್ನ ಶತ್ರುಗಳ ಹತ್ರ ಹೋಗು, ಅವ್ರನ್ನ ವಶಮಾಡ್ಕೊ”+ ಅಂತ ಹೇಳ್ತಾನೆ.   ಯಾವ ದಿನ ನೀನು ನಿನ್ನ ಸೈನ್ಯವನ್ನ ಕರ್ಕೊಂಡು ಯುದ್ಧಕ್ಕೆ ಬರ್ತಿಯೋ,ಆ ದಿನ ನಿನ್ನ ಜನ್ರು ಮನಸಾರೆ ತಮ್ಮನ್ನೇ ಕೊಟ್ಕೊಳ್ತಾರೆ. ನಿನ್ನ ಜೊತೆ ನಿನ್ನ ಯುವಸೇನೆ ಇರುತ್ತೆ,ಅವ್ರಲ್ಲಿ ಪವಿತ್ರತೆಯ ತೇಜಸ್ಸು ಹೊಳಿಯುತ್ತೆ. ಅವರು ಮುಂಜಾನೆಯ ಇಬ್ಬನಿ ತರ ಇರ್ತಾರೆ.   “ನೀನು ಮೆಲ್ಕಿಜೆದೇಕನ ತರ+ ಪುರೋಹಿತನಾಗಿ ಇರ್ತಿಯ,ನೀನು ಸದಾಕಾಲ ಪುರೋಹಿತನಾಗೇ ಇರ್ತಿಯ!”+ ಅಂತ ಯೆಹೋವ ಮಾತುಕೊಟ್ಟಿದ್ದಾನೆ. ಆತನು ತನ್ನ ಮನಸ್ಸನ್ನ ಬದಲಾಯಿಸಲ್ಲ.*   ಯೆಹೋವ ನಿನ್ನ ಬಲಗಡೆನೇ ಇರ್ತಾನೆ,+ಆತನು ತನ್ನ ಕೋಪದ ದಿನದಲ್ಲಿ ರಾಜರನ್ನ ಜಜ್ಜಿಹಾಕ್ತಾನೆ.+   ಆತನು ದೇಶಗಳ ವಿರುದ್ಧ* ನ್ಯಾಯತೀರಿಸ್ತಾನೆ,+ಆತನು ದೇಶನ ಶವಗಳಿಂದ ತುಂಬಿಸ್ತಾನೆ.+ ಒಂದು ವಿಶಾಲ ದೇಶದ* ನಾಯಕನನ್ನ* ಜಜ್ಜಿಹಾಕ್ತಾನೆ.   ಅವನು* ದಾರಿ ಪಕ್ಕದಲ್ಲಿರೋ ತೊರೆಯಿಂದ ನೀರು ಕುಡಿತಾನೆ. ಹಾಗಾಗಿ ಅವನು ತಲೆ ಎತ್ತಿ ನಿಲ್ತಾನೆ.

ಪಾದಟಿಪ್ಪಣಿ

ಅಥವಾ “ಆತನು ವಿಷಾದಪಡಲ್ಲ.”
ಅಥವಾ “ಮಧ್ಯ.”
ಅಥವಾ “ಭೂಮಿಯ.”
ಅಕ್ಷ. “ಪ್ರಧಾನ.”
ಇವನು ವಚನ 1ರಲ್ಲಿ “ನನ್ನ ಒಡೆಯ” ಅಂತ ಯಾರಿಗೆ ಹೇಳಿದ್ದಾನೋ ಅವನೇ ಆಗಿದ್ದಾನೆ.