ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಶ್ನೆ 1

ದೇವರು ಯಾರು?

“ಯೆಹೋವ ಅನ್ನೋ ಹೆಸ್ರಿರೋ ನೀನೊಬ್ಬನೇ ಇಡೀ ಭೂಮಿಯಲ್ಲಿ ಸರ್ವೋನ್ನತ ದೇವರು ಅಂತ ಎಲ್ರಿಗೂ ಗೊತ್ತಾಗಲಿ.”

ಕೀರ್ತನೆ 83:18

“ಯೆಹೋವನೇ ದೇವರು ಅಂತ ತಿಳ್ಕೊಳ್ಳಿ. ನಮ್ಮನ್ನ ಸೃಷ್ಟಿಸಿದ್ದು ಆತನೇ, ನಾವು ಆತನಿಗೆ ಸೇರಿದವರು.”

ಕೀರ್ತನೆ 100:3

“ನಾನು ಯೆಹೋವ. ಇದು ನನ್ನ ಹೆಸ್ರು, ನನಗೆ ಸಿಗಬೇಕಾದ ಮಹಿಮೆಯನ್ನ ನಾನು ಬೇರೆ ಯಾರ ಜೊತೆನೂ ಹಂಚ್ಕೊಳ್ಳಲ್ಲ, ನನಗೆ ಸಲ್ಲಬೇಕಾದ ಸ್ತುತಿ ಕೆತ್ತಿದ ಮೂರ್ತಿಗಳಿಗೆ ಸಲ್ಲೋಕೆ ನಾನು ಬಿಡಲ್ಲ.”

ಯೆಶಾಯ 42:8

“ಯೆಹೋವನ ಹೆಸ್ರು ಹೇಳಿ ಪ್ರಾರ್ಥಿಸೋ ಪ್ರತಿಯೊಬ್ಬನು ರಕ್ಷಣೆ ಪಡಿತಾನೆ.”

ರೋಮನ್ನರಿಗೆ 10:13

“ಪ್ರತಿಯೊಂದು ಮನೆಯನ್ನ ಯಾರಾದ್ರೂ ಒಬ್ರು ಕಟ್ಟಿರ್ತಾರೆ. ಆದ್ರೆ ಎಲ್ಲವನ್ನೂ ಸೃಷ್ಟಿಸಿದ್ದು ದೇವರೇ.”

ಇಬ್ರಿಯ 3:4

“ನಿಮ್ಮ ಕಣ್ಣುಗಳನ್ನ ಮೇಲೆತ್ತಿ, ಆಕಾಶದ ಕಡೆ ನೋಡಿ. ನಕ್ಷತ್ರಗಳನ್ನ ಸೃಷ್ಟಿ ಮಾಡಿದವರು ಯಾರು? ಅವುಗಳಲ್ಲಿ ಒಂದೊಂದನ್ನ ಎಣಿಸಿ ಲೆಕ್ಕಮಾಡಿದವನೇ. ಆತನು ಅವುಗಳಲ್ಲಿ ಪ್ರತಿಯೊಂದನ್ನ ಹೆಸರಿಡಿದು ಕರಿತಾನೆ. ಆತನ ಅಪಾರ ಶಕ್ತಿಯಿಂದಾಗಿ, ಭಯವಿಸ್ಮಯ ಹುಟ್ಟಿಸೋ ಆತನ ಬಲದಿಂದಾಗಿ, ಅವುಗಳಲ್ಲಿ ಒಂದೂ ಕಾಣದೆ ಹೋಗಲ್ಲ.”

ಯೆಶಾಯ 40:26