ಕೀರ್ತನೆ 148:1-14
148 ಯಾಹುವನ್ನ ಸ್ತುತಿಸಿ!*
ಸ್ವರ್ಗದಲ್ಲಿ ಇರೋರೇ, ಯೆಹೋವನನ್ನ ಹೊಗಳಿ,+ಎತ್ರವಾದ ಸ್ಥಳದಲ್ಲಿರೋರೇ, ಆತನನ್ನ ಕೊಂಡಾಡಿ.
2 ಆತನ ದೇವದೂತರೇ, ನೀವೆಲ್ರೂ ಆತನನ್ನ ಹಾಡಿಹೊಗಳಿ,+ಆತನ ಇಡೀ ಸೈನ್ಯವೇ, ಆತನನ್ನ ಕೊಂಡಾಡು.+
3 ಸೂರ್ಯಚಂದ್ರರೇ, ಆತನನ್ನ ಸ್ತುತಿಸಿ.
ಹೊಳಿಯೋ ನಕ್ಷತ್ರಗಳೇ, ಆತನನ್ನ ಕೊಂಡಾಡಿ.+
4 ಎಲ್ಲಕ್ಕಿಂತ ಎತ್ರದಲ್ಲಿರೋ ಆಕಾಶವೇ,ಅದ್ರ ಮೇಲಿರೋ ಜಲರಾಶಿಯೇ ಆತನನ್ನ ಸ್ತುತಿಸಿ.
5 ಅವು ಯೆಹೋವನ ಹೆಸ್ರನ್ನ ಸ್ತುತಿಸಲಿ,ಯಾಕಂದ್ರೆ ಆತನು ಆಜ್ಞೆ ಕೊಟ್ಟಾಗ ಅವೆಲ್ಲ ಸೃಷ್ಟಿ ಆದ್ವು.+
6 ಆತನು ಅವುಗಳನ್ನ ಶಾಶ್ವತಕ್ಕೂ ಇಟ್ಟಿದ್ದಾನೆ,+ಎಂದಿಗೂ ರದ್ದಾಗದ ಒಂದು ಆಜ್ಞೆಯನ್ನ ಆತನು ಕೊಟ್ಟಿದ್ದಾನೆ.+
7 ಭೂಮಿಯಲ್ಲಿ ಇರೋರೇ, ಯೆಹೋವನನ್ನ ಸ್ತುತಿಸಿ,ಆಳವಾದ ಸಮುದ್ರವೇ, ಅದ್ರಲ್ಲಿರೋ ಮಹಾ ಜೀವಿಗಳೇ ಆತನನ್ನ ಹೊಗಳಿ.
8 ಸಿಡಿಲೇ, ಆಲಿಕಲ್ಲಿನ ಮಳೆಯೇ, ಹಿಮವೇ, ದಟ್ಟವಾದ ಮೋಡಗಳೇ,ಆತನ ಆಜ್ಞೆಗಳನ್ನ ಪಾಲಿಸೋ ಬಿರುಗಾಳಿಯೇ ಆತನನ್ನ ಸ್ತುತಿಸಿ.+
9 ಪರ್ವತಗಳೇ, ಎಲ್ಲ ಬೆಟ್ಟಗಳೇ,+ಹಣ್ಣಿನ ಮರಗಳೇ, ಎಲ್ಲ ದೇವದಾರು ಮರಗಳೇ ಆತನನ್ನ ಸ್ತುತಿಸಿ.+
10 ಕಾಡು ಪ್ರಾಣಿಗಳೇ,+ ಎಲ್ಲ ಸಾಕುಪ್ರಾಣಿಗಳೇ,ತೆವಳೋ ಪ್ರಾಣಿಗಳೇ, ಹಾರಾಡೋ ಪಕ್ಷಿಗಳೇ ಆತನನ್ನ ಸ್ತುತಿಸಿ.
11 ಭೂಮಿಯ ರಾಜರೇ, ಎಲ್ಲ ಜನ್ರೇ,ಅಧಿಕಾರಿಗಳೇ, ಭೂಮಿಯಲ್ಲಿರೋ ಎಲ್ಲ ನ್ಯಾಯಾಧೀಶರೇ ಆತನನ್ನ ಸ್ತುತಿಸಿ.+
12 ಯುವಕ, ಯುವತಿಯರೇ,ವೃದ್ಧರೇ, ಮಕ್ಕಳೇ ಎಲ್ರೂ ಸೇರಿ ಆತನನ್ನ ಸ್ತುತಿಸಿ.
13 ಅವ್ರೆಲ್ಲ ಯೆಹೋವನ ಹೆಸ್ರನ್ನ ಕೊಂಡಾಡಲಿ,ಯಾಕಂದ್ರೆ ಎಲ್ಲಕ್ಕಿಂತ ಆತನ ಹೆಸ್ರೇ ಶ್ರೇಷ್ಠ.+
ಆತನ ಗೌರವ ಭೂಮಿ ಆಕಾಶಕ್ಕಿಂತ ಎತ್ರದಲ್ಲಿದೆ.+
14 ಆತನು ತನ್ನ ಎಲ್ಲ ನಿಷ್ಠಾವಂತರಿಗೆ,ತನಗೆ ಎಲ್ರಿಗಿಂತ ಆಪ್ತರಾಗಿರೋ ಇಸ್ರಾಯೇಲ್ಯರಿಗೆ ಕೀರ್ತಿ ಬರೋ ಹಾಗೆಅವ್ರ ಬಲವನ್ನ* ಹೆಚ್ಚಿಸ್ತಾನೆ.
ಯಾಹುವನ್ನ ಸ್ತುತಿಸಿ!*
ಪಾದಟಿಪ್ಪಣಿ
^ ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.
^ ಅಕ್ಷ. “ಕೊಂಬನ್ನ.”
^ ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.