ಕೀರ್ತನೆ 46:1-11

  • “ದೇವರು ನಮ್ಮ ಆಶ್ರಯ”

    • ದೇವರ ವಿಸ್ಮಯಕಾರಿ ಕೆಲಸಗಳು (8)

    • ದೇವರು ಭೂಮಿ ಎಲ್ಲ ಕಡೆ ಯುದ್ಧ ನಿಲ್ಲಿಸ್ತಾನೆ (9)

ಗಾಯಕರ ನಿರ್ದೇಶಕನಿಗೆ ಸೂಚನೆ ಕೋರಹನ+ ಮಕ್ಕಳ ಗೀತೆ. ಅಲಾಮೋತ್‌ ಶೈಲಿಯಲ್ಲಿ* ರಚಿಸಿದ ಗೀತೆ. 46  ದೇವರು ನಮ್ಮ ಆಶ್ರಯ, ನಮ್ಮ ಬಲ,+ಕಷ್ಟ ಬಂದಾಗ ಸುಲಭವಾಗಿ ಸಿಗೋ ಸಹಾಯ.+   ಹಾಗಾಗಿ ಭೂಮಿ ಬದಲಾದ್ರೂ ಬೆಟ್ಟಗಳು ಉರುಳಿ ಸಮುದ್ರದ ಆಳಕ್ಕೆ ಬಿದ್ರೂ ನಾವು ಹೆದ್ರಲ್ಲ,+   ಸಮುದ್ರದ ನೀರು ಪ್ರವಾಹದ ತರ ನೊರೆ ಕಾರಿದ್ರೂ+ಸಮುದ್ರ ಅಲ್ಲೋಲಕಲ್ಲೋಲವಾಗಿ ಬೆಟ್ಟಗಳು ಅಲ್ಲಾಡಿದ್ರೂ ನಾವು ಭಯಪಡಲ್ಲ. (ಸೆಲಾ)   ಒಂದು ನದಿ ಇದೆ. ಅದ್ರ ತೊರೆಗಳು ದೇವರ ಪಟ್ಟಣವನ್ನ,ಸರ್ವೋನ್ನತನ ಮಹಾ ಪವಿತ್ರ ಡೇರೆಯನ್ನ ಖುಷಿಪಡಿಸುತ್ತೆ.+   ಆ ಪಟ್ಟಣದಲ್ಲಿ ದೇವರಿದ್ದಾನೆ,+ ಹಾಗಾಗಿ ಅದನ್ನ ಉರುಳಿಸೋಕೆ ಆಗಲ್ಲ. ಬೆಳಕು ಹರಿಯೋವಾಗ್ಲೇ ದೇವರು ಅದ್ರ ಸಹಾಯಕ್ಕಾಗಿ ಬರ್ತಾನೆ.+   ದೇಶಗಳು ತತ್ತರಿಸಿದ್ವು, ರಾಜ್ಯಗಳು ಉರುಳಿಹೋದ್ವು,ದೇವರು ತನ್ನ ಸ್ವರ ಎತ್ತಿದಾಗ ಭೂಮಿ ಕರಗಿಹೋಯ್ತು.+   ಸೈನ್ಯಗಳ ದೇವರಾದ ಯೆಹೋವ ನಮ್ಮ ಜೊತೆ ಇದ್ದಾನೆ,+ಯಾಕೋಬನ ದೇವರು ನಮ್ಮ ಸುರಕ್ಷಿತ ಆಶ್ರಯ.* (ಸೆಲಾ)   ಬಂದು ಯೆಹೋವನ ಕೆಲಸಗಳನ್ನ ನೋಡಿ,ಆತನು ಭೂಮಿಯಲ್ಲಿರೋ ವಿಸ್ಮಯಕರ ವಿಷ್ಯಗಳನ್ನ ಹೇಗೆ ಮಾಡಿದ್ದಾನೆ ಅಂತ ನೋಡಿ.   ಆತನು ಭೂಮಿಯಲ್ಲಿ ಎಲ್ಲ ಕಡೆ ಯುದ್ಧಗಳನ್ನ ನಿಲ್ಲಿಸಿಬಿಡ್ತಾನೆ.+ ಬಾಣಗಳನ್ನ ಮುರಿದು, ಈಟಿಗಳನ್ನ ನುಚ್ಚುನೂರು ಮಾಡ್ತಾನೆ,ಯುದ್ಧ ರಥಗಳನ್ನ* ಬೆಂಕಿಯಲ್ಲಿ ಸುಟ್ಟುಹಾಕ್ತಾನೆ. 10  ಆತನು ಹೀಗೆ ಹೇಳಿದ “ಸೋಲನ್ನ ಒಪ್ಕೊಳ್ಳಿ, ನಾನೇ ದೇವರು ಅಂತ ತಿಳ್ಕೊಳ್ಳಿ. ದೇಶಗಳಲ್ಲಿ ನನ್ನನ್ನ ಘನತೆಗೆ ಏರಿಸಲಾಗುತ್ತೆ,+ಇಡೀ ಭೂಮಿ ನನ್ನನ್ನ ಮೇಲಕ್ಕೆ ಏರಿಸುತ್ತೆ.”+ 11  ಸೈನ್ಯಗಳ ದೇವರಾದ ಯೆಹೋವ ನಮ್ಮ ಜೊತೆ ಇದ್ದಾನೆ,+ಯಾಕೋಬನ ದೇವರು ನಮ್ಮ ಸುರಕ್ಷಿತ ಆಶ್ರಯ.+ (ಸೆಲಾ)

ಪಾದಟಿಪ್ಪಣಿ

ಅಥವಾ “ಎತ್ತರ ಸ್ಥಳ.”
ಬಹುಶಃ, “ಗುರಾಣಿಗಳನ್ನ.”