ಕೀರ್ತನೆ 76:1-12

  • ಚೀಯೋನಿನ ಶತ್ರುಗಳ ವಿರುದ್ಧ ದೇವರ ವಿಜಯ

    • ದೇವರು ಸೌಮ್ಯಭಾವದ ಜನರನ್ನ ರಕ್ಷಿಸ್ತಾನೆ (9)

    • ನಾಯಕರ ಗರ್ವವನ್ನ ಆತನು ತಗ್ಗಿಸ್ತಾನೆ (12)

ಗಾಯಕರ ನಿರ್ದೇಶಕನಿಗೆ ಸೂಚನೆ, ತಂತಿವಾದ್ಯಗಳ ಜೊತೆ ಹಾಡಬೇಕು. ಆಸಾಫನ+ ಮಧುರ ಗೀತೆ. 76  ಯೆಹೂದದಲ್ಲಿ ಇರೋರಿಗೆಲ್ಲ ದೇವರ ಪರಿಚಯ ಇದೆ,+ಇಸ್ರಾಯೇಲಲ್ಲಿ ಆತನ ಹೆಸ್ರು ಪ್ರಸಿದ್ಧವಾಗಿದೆ.+   ಸಾಲೇಮಲ್ಲಿ+ ಆತನ ಗುಡಾರ ಇದೆ,ಚೀಯೋನಲ್ಲಿ ಆತನ ಮನೆ ಇದೆ.+   ಅಲ್ಲಿ ಆತನು ಉರೀತಿರೋ ಬಾಣಗಳನ್ನ,ಗುರಾಣಿ, ಕತ್ತಿ ಮತ್ತು ಯುದ್ಧದ ಆಯುಧಗಳನ್ನ ಮುರಿದುಬಿಟ್ಟ.+ (ಸೆಲಾ)   ದೇವರೇ, ನೀನು ತೇಜಸ್ಸಿಂದ ಹೊಳೀತಿದ್ದೀಯ,*ಕಾಡು ಪ್ರಾಣಿಗಳಿರೋ ಬೆಟ್ಟಕ್ಕಿಂತ ನಿನ್ನ ಮಹಿಮೆ ಎಷ್ಟೋ ದೊಡ್ಡದು.   ಧೈರ್ಯದ ಗುಂಡಿಗೆ ಇರೋರನ್ನ ದೋಚಿದ್ರು.+ ವೀರ ಸೈನಿಕರು ಗಾಢ ನಿದ್ದೆಗೆ ಜಾರಿದ್ರು,ಯಾಕಂದ್ರೆ ಅವ್ರಿಗೆ ಸಹಾಯ ಮಾಡೋಕೆ ಯಾರೂ ಇರ್ಲಿಲ್ಲ.+   ಯಾಕೋಬನ ದೇವರೇ, ನೀನು ಗದರಿಸಿದಾಗಸಾರಥಿಗಳು ಗಾಢ ನಿದ್ದೆಗೆ ಹೋದ್ರು,ಕುದುರೆಗಳು ಗಾಢ ನಿದ್ದೆಗೆ ಜಾರಿದ್ವು.+   ನೀನೊಬ್ಬನೇ ಭಯವಿಸ್ಮಯ ಹುಟ್ಟಿಸೋ ದೇವರು.+ ನಿನ್ನ ಉಗ್ರ ಕೋಪ ತಾಳಿಕೊಳ್ಳೋಕೆ ಯಾರಿಂದಾಗುತ್ತೆ?+   ಸ್ವರ್ಗದಿಂದ ನೀನು ನ್ಯಾಯ ತೀರಿಸ್ತೀಯ,+ಭೂಮಿ ಹೆದರಿ ಮೌನವಾಯ್ತು.+   ಆಗ ನೀನು ಭೂಮಿಯಲ್ಲಿರೋ ದೀನ ಜನ್ರನ್ನೆಲ್ಲ ರಕ್ಷಿಸೋಕೆ,ನ್ಯಾಯ ತೀರಿಸೋಕೆ ಎದ್ದೆ.+ (ಸೆಲಾ) 10  ಮನುಷ್ಯನ ಕೋಪ ಜಾಸ್ತಿ ಆದಷ್ಟು ನಿನಗೆ ಹೊಗಳಿಕೆ ಜಾಸ್ತಿ ಸಿಗುತ್ತೆ,+ಅವ್ರಲ್ಲಿ ಉಳಿದಿರೋ ಅಲ್ಪಸ್ವಲ್ಪ ಕೋಪದಿಂದಾನೂ ನೀನು ನಿನ್ನನ್ನೇ ಅಲಂಕರಿಸಿಕೊಳ್ತೀಯ. 11  ನಿಮ್ಮ ದೇವರಾದ ಯೆಹೋವನಿಗೆ ಹರಕೆಗಳನ್ನ ಮಾಡ್ಕೊಳ್ಳಿ, ಅವುಗಳನ್ನ ತೀರಿಸಿ,+ಆತನ ಸುತ್ತ ಇರೋರೆಲ್ಲ ಭಯಭಕ್ತಿಯಿಂದ ಆತನಿಗೆ ಉಡುಗೊರೆಗಳನ್ನ ತರಲಿ.+ 12  ನಾಯಕರ ಜಂಬವನ್ನ ಆತನು ಅಡಗಿಸಿಬಿಡ್ತಾನೆ,ರಾಜರಿಗೆ ಭಯ ಹುಟ್ಟಿಸ್ತಾನೆ.

ಪಾದಟಿಪ್ಪಣಿ

ಅಥವಾ “ನಿನ್ನ ಸುತ್ತ ಬೆಳಕು ತುಂಬಿದೆ.”