ಕೀರ್ತನೆ 149:1-9
149 ಯಾಹುವನ್ನ ಸ್ತುತಿಸಿ!*
ಯೆಹೋವನಿಗಾಗಿ ಒಂದು ಹೊಸ ಹಾಡನ್ನ ಹಾಡಿ,+ನಿಷ್ಠಾವಂತರ ಸಭೆಯಲ್ಲಿ ಆತನನ್ನ ಸ್ತುತಿಸಿ.+
2 ಇಸ್ರಾಯೇಲ್ ತನ್ನ ಮಹಾ ಸೃಷ್ಟಿಕರ್ತನಲ್ಲಿ ಖುಷಿಪಡಲಿ,+ಚೀಯೋನಿನ ಮಕ್ಕಳು ತಮ್ಮ ರಾಜನಲ್ಲಿ ಆನಂದಿಸಲಿ.
3 ಅವರು ಕುಣಿತಾ ಆತನ ಹೆಸ್ರನ್ನ ಕೊಂಡಾಡಲಿ,+ದಮ್ಮಡಿ, ತಂತಿವಾದ್ಯವನ್ನ ನುಡಿಸ್ತಾ ಆತನನ್ನ ಹಾಡಿ ಹೊಗಳಲಿ.*+
4 ಯಾಕಂದ್ರೆ ಯೆಹೋವ ತನ್ನ ಜನ್ರನ್ನ ನೋಡಿ ಖುಷಿಪಡ್ತಾನೆ,+ಆತನು ದೀನರನ್ನ ರಕ್ಷಿಸಿ ಅವ್ರನ್ನ ಅಲಂಕರಿಸ್ತಾನೆ.+
5 ನಿಷ್ಠಾವಂತರು ತಮಗೆ ಸಿಕ್ಕ ಗೌರವದಿಂದ ಖುಷಿಪಡಲಿ,ಅವರು ಸಂಭ್ರಮಿಸ್ತಾ ತಮ್ಮ ಹಾಸಿಗೆ ಮೇಲೆನೇ ಜೈಕಾರ ಹಾಕಲಿ.+
6 ದೇವರಿಗಾಗಿ ಅವ್ರ ತುಟಿಗಳು ಸ್ತುತಿ ಗೀತೆಗಳನ್ನ ಹಾಡಲಿ,ಅವ್ರ ಕೈಯಲ್ಲಿ ಇಬ್ಬಾಯಿಕತ್ತಿ ಇರಲಿ,
7 ಅದ್ರಿಂದ ಅವರು ಜನಾಂಗಗಳಿಗೆ ಸೇಡು ತೀರಿಸಲಿ,ದೇಶಗಳ ಜನ್ರಿಗೆ ಶಿಕ್ಷೆ ಕೊಡಲಿ.
8 ಅವ್ರ ರಾಜರನ್ನ ಸರಪಳಿಯಿಂದ ಬಂಧಿಸಲಿ,ಅವ್ರ ಪ್ರಧಾನರಿಗೆ ಕಬ್ಬಿಣದ ಬೇಡಿಗಳನ್ನ ಹಾಕಲಿ.
9 ಅವ್ರ ವಿರುದ್ಧ ಬರೆದಿರೋ ನ್ಯಾಯತೀರ್ಪನ್ನ ಜಾರಿಗೆ ತರೋಕೆ ಹೀಗೆ ಮಾಡಲಿ.+
ಇದ್ರ ಕೀರ್ತಿ ಆತನ ಎಲ್ಲ ನಿಷ್ಠಾವಂತರಿಗೆ ಸೇರಿದೆ.
ಯಾಹುವನ್ನ ಸ್ತುತಿಸಿ!*
ಪಾದಟಿಪ್ಪಣಿ
^ ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.
^ ಅಥವಾ “ಸಂಗೀತ ರಚಿಸಲಿ.”
^ ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.