ಕೀರ್ತನೆ 4:1-8

  • ದೇವರ ಮೇಲೆ ಭರವಸೆ ಇಟ್ಟು ಮಾಡಿದ ಪ್ರಾರ್ಥನೆ

    • “ಕೋಪ ಬಂದ್ರೂ ಪಾಪ ಮಾಡಬೇಡಿ” (4)

    • ‘ನಾನು ನೆಮ್ಮದಿಯಾಗಿ ನಿದ್ದೆ ಮಾಡ್ತೀನಿ’ (8)

ದಾವೀದನ ಮಧುರ ಗೀತೆ. ಗಾಯಕರ ನಿರ್ದೇಶಕನಿಗೆ ಸೂಚನೆ: ಈ ಗೀತೆಯನ್ನ ತಂತಿವಾದ್ಯಗಳ ಜೊತೆ ಹಾಡಬೇಕು. 4  ನೀತಿವಂತನಾಗಿರೋ ನನ್ನ ದೇವರೇ,+ ನಾನು ಕರೆದಾಗ ನನಗೆ ಉತ್ತರ ಕೊಡು. ನಾನು ಕಷ್ಟದಲ್ಲಿ ಇರೋವಾಗ ತಪ್ಪಿಸಿಕೊಳ್ಳೋಕೆ ದಾರಿ ತೋರಿಸು.* ನನಗೆ ದಯೆ ತೋರಿಸು, ನನ್ನ ಪ್ರಾರ್ಥನೆ ಕೇಳು.   ಜನರೇ, ಎಲ್ಲಿ ತನಕ ನೀವು ನನಗೆ ಗೌರವ ಕೊಡೋ ಬದಲು ಅವಮಾನ ಮಾಡ್ತಾ ಇರ್ತಿರಾ? ಎಲ್ಲಿ ತನಕ ಪ್ರಯೋಜನಕ್ಕೆ ಬರದೆ ಇರೋದನ್ನ ಪ್ರೀತಿಸ್ತಾ, ಸುಳ್ಳನ್ನ ಹುಡುಕ್ತಾ ಇರ್ತಿರಾ? (ಸೆಲಾ)   ನಿಮಗೆ ಗೊತ್ತಿರಲಿ, ನಿಷ್ಠಾವಂತರನ್ನ ಯೆಹೋವ ವಿಶೇಷವಾಗಿ ನೋಡ್ಕೊಳ್ತಾನೆ.* ನಾನು ಕರೆದಾಗ ಯೆಹೋವ ಕೇಳಿಸ್ಕೊಳ್ತಾನೆ.   ಕೋಪ ಬಂದ್ರೂ ಪಾಪ ಮಾಡಬೇಡಿ.+ ನೀವು ಹೇಳಬೇಕು ಅಂತಿರೋದನ್ನ ಹಾಸಿಗೆ ಮೇಲೆ ನಿಮ್ಮ ಮನಸ್ಸಲ್ಲೇ ಹೇಳ್ಕೊಂಡು ನೆಮ್ಮದಿಯಿಂದ ಮಲ್ಕೊಳ್ಳಿ. (ಸೆಲಾ)   ದೇವರಿಗೆ ಏನೇ ಕೊಟ್ಟರೂ ಒಳ್ಳೇ ಮನಸ್ಸಿಂದ ಕೊಡಿ. ಯೆಹೋವನ ಮೇಲೆ ಭರವಸೆ ಇಡಿ.+   ಎಷ್ಟೋ ಜನ, “ಒಳ್ಳೇ ದಿನ ಯಾರಿಂದ ತರಕ್ಕಾಗುತ್ತೆ?” ಅಂತಾರೆ. ಯೆಹೋವನೇ, ನಿನ್ನ ಮುಖದ ಕಾಂತಿ ನಮ್ಮ ಮೇಲೆ ಹೊಳೆಯಲಿ.+   ಒಳ್ಳೇ ಬೆಳೆ ಮತ್ತು ದ್ರಾಕ್ಷಾಮದ್ಯ ಸಿಕ್ಕಾಗ ಸಿಗೋ ಖುಷಿಗಿಂತ,ಎಷ್ಟೋ ಜಾಸ್ತಿ ಖುಷಿನ ನೀನು ನನ್ನ ಮನಸ್ಸಲ್ಲಿ ತುಂಬಿಸಿದ್ದೀಯ.   ನಾನು ನೆಮ್ಮದಿಯಾಗಿ ನಿದ್ದೆ ಮಾಡ್ತೀನಿ,+ಯಾಕಂದ್ರೆ ಯೆಹೋವನೇ, ನನ್ನನ್ನ ಕಾಪಾಡೋನು ನೀನೊಬ್ಬನೇ.+

ಪಾದಟಿಪ್ಪಣಿ

ಅಕ್ಷ. “ಅಗಲವಾದ ಜಾಗ ಮಾಡಿಕೊಡು.”
ಅಥವಾ “ಗೌರವಿಸ್ತಾನೆ, ಆರಿಸಿಕೊಳ್ತಾನೆ.”