ಕೀರ್ತನೆ 118:1-29

  • ಯೆಹೋವನಿಂದ ಜಯ ಸಿಕ್ಕಿದ್ದಕ್ಕೆ ಧನ್ಯವಾದ ಹೇಳಿ

    • ‘ನಾನು ಯಾಹುಗೆ ಮೊರೆಯಿಟ್ಟೆ, ಆತನು ನನಗೆ ಉತ್ರ ಕೊಟ್ಟ’ (5)

    • “ಯೆಹೋವ ನನ್ನ ಪಕ್ಷದಲ್ಲಿ ಇದ್ದಾನೆ” (6, 7)

    • ಬೇಡ ಅಂತ ಬಿಟ್ಟಿರೋ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯ್ತು (22)

    • ‘ಯೆಹೋವನ ಹೆಸ್ರಲ್ಲಿ ಬರೋನು’ (26)

118  ಯೆಹೋವನಿಗೆ ಧನ್ಯವಾದ ಹೇಳಿ, ಆತನು ಒಳ್ಳೆಯವನು.+ ಆತನ ಪ್ರೀತಿ ಶಾಶ್ವತ.  2  ಇಸ್ರಾಯೇಲ್‌ ಹೀಗೆ ಹೇಳಲಿ,“ಆತನ ಪ್ರೀತಿ ಶಾಶ್ವತ.”  3  ಆರೋನನ ಮನೆತನದವರು ಹೀಗೆ ಹೇಳಲಿ,“ಆತನ ಪ್ರೀತಿ ಶಾಶ್ವತ.”  4  ಯೆಹೋವನಿಗೆ ಭಯಪಡೋರು ಹೀಗೆ ಹೇಳಲಿ,“ಆತನ ಪ್ರೀತಿ ಶಾಶ್ವತ.”  5  ನನ್ನ ಕಷ್ಟಕಾಲದಲ್ಲಿ ನಾನು ಯಾಹುಗೆ* ಮೊರೆಯಿಟ್ಟೆ,ಯಾಹು ನನಗೆ ಉತ್ರ ಕೊಟ್ಟು ನನ್ನನ್ನ ಸುರಕ್ಷಿತವಾದ* ಜಾಗಕ್ಕೆ ಕರ್ಕೊಂಡು ಬಂದ.+  6  ಯೆಹೋವ ನನ್ನ ಪಕ್ಷದಲ್ಲಿ ಇದ್ದಾನೆ, ನಾನು ಹೆದ್ರಲ್ಲ.+ ಮನುಷ್ಯ ನನಗೆ ಏನು ಮಾಡಕ್ಕಾಗುತ್ತೆ?+  7  ಯೆಹೋವ ನನ್ನ ಪಕ್ಷದಲ್ಲಿ ಇದ್ದಾನೆ, ನನ್ನ ಸಹಾಯಕನಾಗಿ ಇದ್ದಾನೆ,*+ನನ್ನನ್ನ ದ್ವೇಷಿಸೋರು ಬಿದ್ದು ಹೋಗೋದನ್ನ ನಾನು ಕಣ್ಣಾರೆ ನೋಡ್ತೀನಿ.+  8  ಮನುಷ್ಯರ ಮೇಲೆ ಭರವಸೆ ಇಡೋದಕ್ಕಿಂತಯೆಹೋವನನ್ನ ಆಶ್ರಯಿಸೋದೇ ಮೇಲು.+  9  ಅಧಿಕಾರಿಗಳ ಮೇಲೆ ಭರವಸೆ ಇಡೋದಕ್ಕಿಂತಯೆಹೋವನನ್ನ ಆಶ್ರಯಿಸೋದೇ ಮೇಲು.+ 10  ಎಲ್ಲ ಜನಾಂಗಗಳು ನನ್ನನ್ನ ಸುತ್ಕೊಂಡಿವೆ,ಆದ್ರೆ ನಾನು ಯೆಹೋವನ ಹೆಸ್ರಲ್ಲಿಅವುಗಳನ್ನ ಓಡಿಸಿಬಿಡ್ತೀನಿ.+ 11  ಅವು ನನ್ನನ್ನ ಸುತ್ಕೊಂಡಿವೆ, ಹೌದು ನನ್ನನ್ನ ಎಲ್ಲ ಕಡೆಯಿಂದ ಸುತ್ಕೊಂಡಿವೆ. ಆದ್ರೆ ನಾನು ಯೆಹೋವನ ಹೆಸ್ರಲ್ಲಿಅವುಗಳನ್ನ ಓಡಿಸಿಬಿಡ್ತೀನಿ. 12  ಅವು ನನ್ನನ್ನ ಜೇನು ನೊಣಗಳ ತರ ಮುತ್ಕೊಂಡ್ವು,ಆದ್ರೆ ಬೆಂಕಿ ಹತ್ಕೊಂಡಾಗ ತಕ್ಷಣ ಉರಿದು ಹೋಗೋ ಮುಳ್ಳಿನ ಪೊದೆ ತರ ಬೇಗ ನಾಶ ಆದ್ವು. ನಾನು ಯೆಹೋವನ ಹೆಸ್ರಲ್ಲಿಅವುಗಳನ್ನ ಓಡಿಸಿಬಿಡ್ತೀನಿ.+ 13  ನಾನು ಬೀಳೋ ಹಾಗೆ ನನ್ನನ್ನ ಜೋರಾಗಿ ತಳ್ಳಿದ್ರೂ,*ಯೆಹೋವ ನನಗೆ ಸಹಾಯಮಾಡಿದ. 14  ಯಾಹು ನನ್ನ ಆಶ್ರಯ, ನನ್ನ ಬಲ,ಆತನು ನನ್ನ ರಕ್ಷಕ.+ 15  ನೀತಿವಂತರಿಗೆ ರಕ್ಷಣೆ* ಸಿಕ್ಕಿದೆ,ಹಾಗಾಗಿ ಅವ್ರ ಡೇರೆಗಳಿಂದ ಸಂತೋಷದ ಧ್ವನಿ ಕೇಳಿಸ್ತಿದೆ,ಯೆಹೋವನ ಬಲಗೈ ಆತನ ಶಕ್ತಿಯನ್ನ ತೋರಿಸ್ತಿದೆ.+ 16  ಯೆಹೋವನ ಬಲಗೈ ಅದ್ಭುತಗಳನ್ನ ಮಾಡ್ತಿದೆ,ಯೆಹೋವನ ಬಲಗೈ ಆತನ ಶಕ್ತಿಯನ್ನ ತೋರಿಸ್ತಿದೆ.+ 17  ಇಲ್ಲ, ನಾನು ಸಾಯಲ್ಲ,ಯಾಹುವಿನ ಕೆಲಸಗಳ ಬಗ್ಗೆ ತಿಳಿಸೋಕೆ ಬದುಕಿರ್ತೀನಿ.+ 18  ಯಾಹು ನನಗೆ ಚೆನ್ನಾಗಿ ಶಿಕ್ಷೆ ಕೊಟ್ಟ,+ಆದ್ರೆ ನನ್ನನ್ನ ಸಾವಿನ ಕೈಗೆ ಒಪ್ಪಿಸಲಿಲ್ಲ.+ 19  ನನಗಾಗಿ ನೀತಿಯ ಬಾಗಿಲನ್ನ ತೆಗೀರಿ,+ನಾನು ಅದರೊಳಗೆ ಹೋಗಿ ಯಾಹುವನ್ನ ಹೊಗಳ್ತೀನಿ. 20  ಇದು ಯೆಹೋವನ ಬಾಗಿಲು. ನೀತಿವಂತ ಅದರೊಳಗೆ ಹೋಗ್ತಾನೆ.+ 21  ನಾನು ನಿನ್ನನ್ನ ಹೊಗಳ್ತೀನಿ, ಯಾಕಂದ್ರೆ ನೀನು ನನಗೆ ಉತ್ರ ಕೊಟ್ಟೆ,+ನೀನು ನನ್ನ ರಕ್ಷಕನಾದೆ. 22  ಕಟ್ಟೋರು ಯಾವ ಕಲ್ಲನ್ನು ಬೇಡ ಅಂತ ಬಿಟ್ಟರೋ ಅದೇಮುಖ್ಯವಾದ ಮೂಲೆಗಲ್ಲಾಯಿತು.*+ 23  ಯೆಹೋವನೇ ಇದನ್ನ ಮಾಡಿದ್ದಾನೆ,+ಎಂಥ ಆಶ್ಚರ್ಯ.+ 24  ಇಂಥ ಒಂದು ದಿನ ಬಂದಿದೆ ಅಂದ್ರೆ ಅದಕ್ಕೆ ಯೆಹೋವನೇ ಕಾರಣ,ಈ ದಿನ ನಾವು ಖುಷಿಪಡ್ತೀವಿ, ಆನಂದಪಡ್ತೀವಿ. 25  ಯೆಹೋವ, ನಾವು ಬೇಡಿಕೊಳ್ತೀವಿ, ದಯವಿಟ್ಟು ನಮ್ಮನ್ನ ಕಾಪಾಡು! ಯೆಹೋವನೇ ದಯವಿಟ್ಟು ನಮ್ಮನ್ನ ಗೆಲ್ಲಿಸು! 26  ಯಾರು ಯೆಹೋವನ ಹೆಸ್ರಲ್ಲಿ ಬರ್ತಾನೋ ಅವನು ಆಶೀರ್ವಾದ ಪಡೀತಾನೆ,+ನಾವು ನಿಮ್ಮನ್ನ ಯೆಹೋವನ ಆಲಯದಿಂದ ಆಶೀರ್ವದಿಸ್ತೀವಿ. 27  ಯೆಹೋವ ದೇವರಾಗಿದ್ದಾನೆ,ಆತನು ನಮಗೆ ಬೆಳಕು ಕೊಡ್ತಾನೆ.+ ಕೈಯಲ್ಲಿ ಗರಿಗಳನ್ನ ಹಿಡ್ಕೊಂಡು ಹಬ್ಬದ ಮೆರವಣಿಗೆಗೆ ಬನ್ನಿ,+ಯಜ್ಞವೇದಿಯ ಕೊಂಬುಗಳ ತನಕ ಬನ್ನಿ.+ 28  ನೀನು ನನ್ನ ದೇವರು, ನಾನು ನಿನ್ನನ್ನ ಹಾಡಿ ಹೊಗಳ್ತೀನಿ,ನನ್ನ ದೇವರೇ, ನಾನು ನಿನ್ನನ್ನ ಕೊಂಡಾಡ್ತೀನಿ.+ 29  ಯೆಹೋವನಿಗೆ ಧನ್ಯವಾದ ಹೇಳಿ,+ ಆತನು ಒಳ್ಳೆಯವನು. ಆತನ ಪ್ರೀತಿ ಶಾಶ್ವತ.+

ಪಾದಟಿಪ್ಪಣಿ

“ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.
ಅಥವಾ “ವಿಶಾಲವಾದ.”
ಬಹುಶಃ, “ನನಗೆ ಸಹಾಯ ಮಾಡೋ ಜನರ ಜೊತೆ ಇದ್ದಾನೆ.”
ಬಹುಶಃ, “ನೀನು ನನ್ನನ್ನ ಜೋರಾಗಿ ತಳ್ಳಿಬಿಟ್ಟೆ.”
ಅಥವಾ “ಜಯ.”
ಅಕ್ಷ. “ಮೂಲೆಯ ತಲೆ ಆಯ್ತು.”