ಕೀರ್ತನೆ 54:1-7

  • ವಿರೋಧಿಗಳಿಂದ ಬಿಡಿಸೋಕೆ ಸಹಾಯಕ್ಕಾಗಿ ಪ್ರಾರ್ಥನೆ

    • “ದೇವರು ನನ್ನ ಸಹಾಯಕ” (4)

ಗಾಯಕರ ನಿರ್ದೇಶಕನಿಗೆ ಸೂಚನೆ, ಇದನ್ನ ತಂತಿವಾದ್ಯಗಳ ಜೊತೆ ಹಾಡಬೇಕು. ಮಸ್ಕಿಲ್‌.* “ದಾವೀದ ಇಲ್ಲೇ ಬಚ್ಚಿಟ್ಕೊಂಡಿದ್ದಾನೆ” ಅಂತ ಜೀಫ್ಯರು ಸೌಲನಿಗೆ ಹೇಳಿದ್ರು.+ ಆಗ ದಾವೀದ ಈ ಕೀರ್ತನೆ ರಚಿಸಿದ. 54  ದೇವರೇ, ನಿನ್ನ ಹೆಸ್ರಿಂದ ನನ್ನನ್ನ ಕಾಪಾಡು,+ನಿನ್ನ ಶಕ್ತಿಯಿಂದ ನನ್ನನ್ನ ಸಂರಕ್ಷಿಸು.+   ದೇವರೇ, ನನ್ನ ಪ್ರಾರ್ಥನೆಯನ್ನ ಕೇಳು,+ನನ್ನ ಬಿನ್ನಹಗಳಿಗೆ ಗಮನಕೊಡು.   ಯಾಕಂದ್ರೆ ಅಪರಿಚಿತರು ನನ್ನ ವಿರುದ್ಧ ಬಂದಿದ್ದಾರೆ,ಕ್ರೂರಿಗಳು ನನ್ನ ಜೀವ ತೆಗೀಬೇಕು ಅಂತಿದ್ದಾರೆ.+ ದೇವರ ಕಡೆ ಅವ್ರಿಗೆ ಒಂಚೂರು ಗೌರವ ಇಲ್ಲ.*+ (ಸೆಲಾ)   ನೋಡು! ದೇವರು ನನ್ನ ಸಹಾಯಕ,+ನನಗೆ ಸಹಕಾರ ಕೊಡೋರ ಜೊತೆ ಯೆಹೋವ ಇದ್ದಾನೆ.   ನನ್ನ ಎದುರಾಳಿಗಳು ಕೊಡೋ ಕಷ್ಟಗಳನ್ನ ಆತನು ಅವ್ರಿಗೇ ವಾಪಸ್‌ ಕೊಡ್ತಾನೆ,+ನನ್ನ ದೇವರೇ, ನೀನು ನಂಬಿಗಸ್ತನಾಗಿ ಇರೋದ್ರಿಂದ ಅವ್ರನ್ನ ನಾಶಮಾಡು.+   ನಾನು ನನ್ನ ಮನಸಾರೆ ನಿನಗೆ ಬಲಿ ಕೊಡ್ತೀನಿ.+ ಯೆಹೋವನೇ, ನಾನು ನಿನ್ನ ಹೆಸ್ರನ್ನ ಹೊಗಳ್ತೀನಿ. ಯಾಕಂದ್ರೆ ಅದೇ ಒಳ್ಳೇದು.+   ಆತನು ನನ್ನನ್ನ ಎಲ್ಲ ಸಂಕಷ್ಟಗಳಿಂದ ಕಾಪಾಡ್ತಾನೆ,+ನಾನು ಶತ್ರುಗಳು ಸೋಲೋದನ್ನ ನೋಡ್ತೀನಿ.+

ಪಾದಟಿಪ್ಪಣಿ

ಅಥವಾ “ಅವರು ದೇವರನ್ನ ತಮ್ಮ ಮುಂದೆ ಇಟ್ಕೊಳ್ಳಲ್ಲ.”