ಕೀರ್ತನೆ 144:1-15

  • ವಿಜಯಕ್ಕಾಗಿ ಪ್ರಾರ್ಥನೆ

    • “ನಾಶವಾಗೋ ಮನುಷ್ಯನಿಗೆ ನೀನು ಯಾಕೆ ಬೆಲೆ ಕೊಡಬೇಕು?” (3)

    • ‘ಶತ್ರುಗಳು ಚೆಲ್ಲಾಪಿಲ್ಲಿ ಆಗಲಿ’ (6)

    • ಯೆಹೋವನ ಜನ್ರು ಭಾಗ್ಯವಂತರು (15)

ದಾವೀದನ ಕೀರ್ತನೆ. 144  ನನ್ನ ಬಂಡೆಯಾಗಿರೋ+ ಯೆಹೋವನಿಗೆ ಹೊಗಳಿಕೆ ಸಿಗಲಿ,ಆತನು ನನ್ನ ಕೈಗಳಿಗೆ ಯುದ್ಧಮಾಡೋದನ್ನ ಕಲಿಸಿದ್ದಾನೆ. ಶತ್ರುಗಳ ಜೊತೆ ಹೋರಾಡೋದು ಹೇಗೆ ಅಂತ ನನ್ನ ಬೆರಳುಗಳಿಗೆ ಹೇಳಿ ಕೊಟ್ಟಿದ್ದಾನೆ.+  2  ನನ್ನ ಶಾಶ್ವತ ಪ್ರೀತಿ, ನನ್ನ ಭದ್ರಕೋಟೆ ಆತನೇ,ನನ್ನ ಸುರಕ್ಷಿತ ಜಾಗ,* ನನ್ನ ರಕ್ಷಕ,ನನ್ನ ಗುರಾಣಿನೂ ಆತನೇ, ನಾನು ಆತನಲ್ಲೇ ಆಶ್ರಯ ಪಡ್ಕೊಂಡಿದ್ದೀನಿ,+ಜನಾಂಗಗಳ ಜನ್ರನ್ನ ನನ್ನ ಕೈಕೆಳಗೆ ಹಾಕಿದ್ದು ಆತನೇ.+  3  ಯೆಹೋವ, ಮನುಷ್ಯನ ಕಡೆಗೆ ನೀನು ಯಾಕೆ ಗಮನ ಕೊಡಬೇಕು? ನಾಶವಾಗೋ ಮನುಷ್ಯನಿಗೆ ನೀನು ಯಾಕೆ ಬೆಲೆ ಕೊಡಬೇಕು?+  4  ಮನುಷ್ಯ ಬರೀ ಉಸಿರಷ್ಟೇ,+ಅವನ ಆಯಸ್ಸು ಮಾಯವಾಗಿ ಹೋಗೋ ನೆರಳಿನ ತರ ಇದೆ.+  5  ಯೆಹೋವ, ನೀನು ನಿನ್ನ ಆಕಾಶವನ್ನ ಬಾಗಿಸಿ ಕೆಳಗಿಳಿದು ಬಾ,+ಬೆಟ್ಟಗಳನ್ನ ಮುಟ್ಟಿ ಅವುಗಳಿಂದ ಹೊಗೆ ಬರಿಸು.+  6  ಮಿಂಚಿನ ಹೊಳಪಿಂದ ಶತ್ರುಗಳನ್ನ ಚೆದರಿಸು,+ನಿನ್ನ ಬಾಣಗಳನ್ನ ಬಿಟ್ಟು ಅವ್ರಲ್ಲಿ ಗಲಿಬಿಲಿ ಹುಟ್ಟಿಸು.+  7  ಮೇಲಿಂದ ನಿನ್ನ ಕೈ ಚಾಚು,ಉಕ್ಕೇರೋ ಸಮುದ್ರದಿಂದ, ವಿದೇಶಿಗಳ ಕೈಯಿಂದ*ನನ್ನನ್ನ ಕಾಪಾಡು, ನನ್ನನ್ನ ರಕ್ಷಿಸು.+  8  ಯಾರು ಸುಳ್ಳು ಹೇಳ್ತಾರೋ,ಯಾರು ಬಲಗೈಯಿಂದ ಸುಳ್ಳಾಣೆ ಇಡ್ತಾರೋ ಅಂಥವ್ರಿಂದ ನನ್ನನ್ನ ಕಾಪಾಡು.  9  ದೇವರೇ, ನಾನು ನಿನಗಾಗಿ ಒಂದು ಹೊಸ ಹಾಡನ್ನ ಹಾಡ್ತೀನಿ.+ ಹತ್ತು ತಂತಿಗಳಿರೋ ತಂತಿವಾದ್ಯವನ್ನ ನುಡಿಸ್ತಾ ನಾನು ನಿನ್ನನ್ನ ಹಾಡಿ ಹೊಗಳ್ತೀನಿ.* 10  ಯಾಕಂದ್ರೆ ನೀನು ರಾಜರಿಗೆ ಜಯ* ಕೊಟ್ಟೆ,+ಕತ್ತಿಯಿಂದ ನಿನ್ನ ಸೇವಕ ದಾವೀದನನ್ನ ರಕ್ಷಿಸಿದೆ.+ 11  ವಿದೇಶಿಯರ ಕೈಯಿಂದ ನನ್ನನ್ನ ರಕ್ಷಿಸಿ, ಕಾಪಾಡು. ಅವರು ಸುಳ್ಳು ಹೇಳ್ತಾರೆ,ಅವರು ತಮ್ಮ ಬಲಗೈಯಿಂದ ಸುಳ್ಳಾಣೆ ಇಡ್ತಾರೆ. 12  ಆಗ ನಮ್ಮ ಗಂಡುಮಕ್ಕಳು ಬೇಗ ಬೆಳೆಯೋ ಸಸಿಗಳ ತರ ಇರ್ತಾರೆ,ನಮ್ಮ ಹೆಣ್ಣುಮಕ್ಕಳು ಅರಮನೆಗಾಗಿ ಕೆತ್ತಿರೋ ಮೂಲೆ ಕಂಬದ ತರ ಇರ್ತಾರೆ. 13  ನಮ್ಮ ಕಣಜಗಳು ಬೇರೆ ಬೇರೆ ಧಾನ್ಯಗಳಿಂದ ತುಂಬಿ ತುಳುಕುತ್ತೆ,ನಮ್ಮ ಹೊಲಗಳಲ್ಲಿ ನಮ್ಮ ಕುರಿಗಳು ಸಾವಿರಾರು ಪಟ್ಟು, ಲಕ್ಷಾಂತರ ಪಟ್ಟು ಜಾಸ್ತಿಯಾಗುತ್ತೆ. 14  ಬಸುರಾಗಿರೋ ನಮ್ಮ ದನಗಳಿಗೆ ಯಾವ ತೊಂದ್ರೆನೂ ಆಗಲ್ಲ, ಅವುಗಳಿಗೆ ಗರ್ಭಪಾತ ಆಗಲ್ಲ,ನಮ್ಮ ಪಟ್ಟಣದ ಮುಖ್ಯಸ್ಥಳದಲ್ಲಿ* ಯಾವ ಗೋಳಾಟನೂ ಕೇಳಿಸಲ್ಲ. 15  ಇಂಥ ಒಳ್ಳೇ ಪರಿಸ್ಥಿತಿಯಲ್ಲಿರೋ ಜನ ಧನ್ಯರು,ಯಾರಿಗೆ ಯೆಹೋವ ದೇವರಾಗಿ ಇರ್ತಾನೋ ಅಂಥವರು ಭಾಗ್ಯವಂತರು.+

ಪಾದಟಿಪ್ಪಣಿ

ಅಥವಾ “ಎತ್ತರ ಸ್ಥಳ.”
ಅಥವಾ “ಹಿಡಿತದಿಂದ.”
ಅಥವಾ “ಸಂಗೀತ ರಚಿಸ್ತೀನಿ.”
ಅಥವಾ “ರಕ್ಷಣೆ.”