ಕೀರ್ತನೆ 86:1-17

  • ಯೆಹೋವ ದೇವರ ತರ ಯಾರೂ ಇಲ್ಲ

    • ಯೆಹೋವ ಕ್ಷಮಿಸೋಕೆ ಸದಾ ಸಿದ್ಧ (5)

    • ಎಲ್ಲ ಜನಾಂಗಗಳು ಯೆಹೋವನನ್ನ ಆರಾಧಿಸ್ತಾರೆ (9)

    • ‘ನಿನ್ನ ದಾರಿಯ ಬಗ್ಗೆ ನನಗೆ ಕಲಿಸು’ (11)

    • “ಒಂದೇ ಮನಸ್ಸನ್ನ ಕೊಡು” (11)

ದಾವೀದನ ಪ್ರಾರ್ಥನೆ. 86  ಯೆಹೋವನೇ, ನನ್ನ ಪ್ರಾರ್ಥನೆಯನ್ನ ಕೇಳಿ* ನನಗೆ ಉತ್ರ ಕೊಡು. ಯಾಕಂದ್ರೆ ನಾನು ಕಷ್ಟದಲ್ಲಿದ್ದೀನಿ, ನಾನು ಬಡವ.+   ನಾನು ನಿಷ್ಠಾವಂತನಾಗಿ ಇರೋದ್ರಿಂದ ನನ್ನ ಪ್ರಾಣವನ್ನ ಕಾದು ಕಾಪಾಡು.+ ನಿನ್ನಲ್ಲಿ ಭರವಸೆ ಇಟ್ಟಿರೋ ನಿನ್ನ ಸೇವಕನನ್ನ ರಕ್ಷಿಸು,ಯಾಕಂದ್ರೆ ನೀನೇ ನನ್ನ ದೇವರು.+   ಯೆಹೋವನೇ, ನನಗೆ ದಯೆ ತೋರಿಸು,+ಇಡೀ ದಿನ ನಾನು ನಿನ್ನ ಕರೀತಾ ಇರ್ತಿನಿ.+   ನಿನ್ನ ಸೇವಕ ಖುಷಿಪಡೋ ಹಾಗೆ ಮಾಡು,ಯಾಕಂದ್ರೆ ಯೆಹೋವನೇ, ನಾನು ನಿನ್ನ ಕಡೆ ತಿರುಗಿಕೊಳ್ತೀನಿ.   ಯೆಹೋವನೇ, ನೀನು ಒಳ್ಳೆಯವನು,+ ಕ್ಷಮಿಸೋಕೆ ಯಾವಾಗ್ಲೂ ಸಿದ್ಧನಾಗಿ ಇರ್ತಿಯ,+ನಿನಗೆ ಮೊರೆಯಿಡೋ ಪ್ರತಿಯೊಬ್ರಿಗೂ ಶಾಶ್ವತ ಪ್ರೀತಿಯನ್ನ ಅಪಾರವಾಗಿ ತೋರಿಸ್ತೀಯ.+   ಯೆಹೋವನೇ, ನನ್ನ ಪ್ರಾರ್ಥನೆಯನ್ನ ಕೇಳಿಸ್ಕೊ,ಸಹಾಯಕ್ಕಾಗಿ ನಾನಿಡೋ ಮೊರೆಗೆ ಗಮನಕೊಡು.+   ನನಗೆ ಕಷ್ಟ ಬಂದಾಗ ನಾನು ನಿನ್ನನ್ನ ಕೂಗ್ತೀನಿ,+ಯಾಕಂದ್ರೆ ನೀನು ನನಗೆ ಉತ್ರ ಕೊಡ್ತೀಯ.+   ಯೆಹೋವನೇ, ದೇವರುಗಳಲ್ಲಿ ನಿನ್ನಂಥ ದೇವರು ಬೇರೆ ಯಾರೂ ಇಲ್ಲ,+ನಿನ್ನ ಕೆಲಸಗಳಿಗೆ ಸರಿಸಾಟಿ ಇಲ್ಲ.+   ಯೆಹೋವನೇ, ನೀನು ಸೃಷ್ಟಿಸಿದ ಎಲ್ಲ ಜನಾಂಗಗಳುನಿನ್ನ ಮುಂದೆ ಬಂದು ನಿನಗೆ ಬಗ್ಗಿ ನಮಸ್ಕಾರ ಮಾಡ್ತವೆ,+ಅವು ನಿನ್ನ ಹೆಸ್ರಿಗೆ ಗೌರವ ತರುತ್ತವೆ.+ 10  ಯಾಕಂದ್ರೆ ನೀನು ಮಹೋನ್ನತನು, ಅದ್ಭುತಗಳನ್ನ ಮಾಡ್ತೀಯ,+ನೀನೇ ದೇವರು, ನೀನೊಬ್ಬನೇ ದೇವರು.+ 11  ಯೆಹೋವನೇ, ನಿನ್ನ ದಾರಿಯನ್ನ ನನಗೆ ಕಲಿಸು.+ ನಾನು ನಿನ್ನ ಸತ್ಯದ ದಾರಿಯಲ್ಲಿ ನಡೀತೀನಿ.+ ನನಗೆ ಒಂದೇ ಮನಸ್ಸನ್ನ* ಕೊಡು, ಆಗ ನಿನ್ನ ಹೆಸ್ರಿಗೆ ಭಯಪಡ್ತೀನಿ.+ 12  ನನ್ನ ದೇವರಾದ ಯೆಹೋವನೇ, ಪೂರ್ಣ ಹೃದಯದಿಂದ ನಾನು ನಿನ್ನನ್ನ ಹೊಗಳ್ತೀನಿ,+ಶಾಶ್ವತವಾಗಿ ನಿನ್ನ ಹೆಸ್ರಿಗೆ ಗೌರವ ಕೊಡ್ತೀನಿ. 13  ಯಾಕಂದ್ರೆ ನನ್ನ ಕಡೆಗಿರೋ ನಿನ್ನ ಶಾಶ್ವತ ಪ್ರೀತಿ ತುಂಬ ದೊಡ್ಡದು,ನೀನು ನನ್ನ ಪ್ರಾಣನ ಸಮಾಧಿಯ* ಆಳದಿಂದ ಬಿಡಿಸಿದೆ.+ 14  ದೇವರೇ, ಗರ್ವಿಷ್ಠರು ನನ್ನ ವಿರುದ್ಧ ಎದ್ದಿದ್ದಾರೆ,+ಕ್ರೂರಿಗಳ ಗುಂಪು ನನ್ನ ಪ್ರಾಣದ ಹಿಂದೆ ಬಿದ್ದಿದೆ,ನೀನಂದ್ರೆ ಅವ್ರಿಗೆ ಕಿಂಚಿತ್ತೂ ಬೆಲೆ ಇಲ್ಲ.*+ 15  ಆದ್ರೆ ಯೆಹೋವನೇ, ನೀನು ಕರುಣೆ ಇರೋ ದೇವರು, ಕನಿಕರ ಇರೋ* ದೇವರು,ಥಟ್ಟಂತ ಕೋಪಿಸಿಕೊಳ್ಳಲ್ಲ, ಶಾಶ್ವತ ಪ್ರೀತಿಯನ್ನ ಧಾರಾಳವಾಗಿ ತೋರಿಸ್ತೀಯ, ನಂಬಿಗಸ್ತನು.*+ 16  ನನ್ನ ಕಡೆ ತಿರುಗಿ ನನಗೆ ದಯೆ ತೋರಿಸು.+ ನಿನ್ನ ಸೇವಕನಿಗೆ ನಿನ್ನ ಶಕ್ತಿಯನ್ನು ಕೊಡು,+ನಿನ್ನ ದಾಸಿಯ ಮಗನನ್ನ ರಕ್ಷಿಸು. 17  ನಿನ್ನ ಒಳ್ಳೇತನದ ಒಂದು ಗುರುತನ್ನ* ನನಗೆ ತೋರಿಸು,ನನ್ನನ್ನ ದ್ವೇಷಿಸೋರು ಅದನ್ನ ನೋಡಿ ಅವಮಾನಪಡಲಿ. ಯಾಕಂದ್ರೆ ಯೆಹೋವನೇ, ನನಗೆ ಸಹಾಯ ಮಾಡೋನೂ ನನ್ನನ್ನ ಸಂತೈಸೋನೂ ನೀನೇ.

ಪಾದಟಿಪ್ಪಣಿ

ಅಥವಾ “ಬಗ್ಗಿ ನಾನು ಹೇಳೋದನ್ನ ಕೇಳಿ.”
ಅಥವಾ “ಚಂಚಲವಲ್ಲದ ಹೃದಯವನ್ನ.”
ಅಥವಾ “ನಿನ್ನನ್ನ ಅವರು ತಮ್ಮ ಮುಂದೆ ಇಟ್ಕೊಳ್ಳಲಿಲ್ಲ.”
ಅಥವಾ “ದಯಾಳು.”
ಅಥವಾ “ಸತ್ಯವಂತನು.”
ಅಥವಾ “ಪುರಾವೆ.”