ಮಾಹಿತಿ ಇರುವಲ್ಲಿ ಹೋಗಲು

ಸೆಕೆಂಡರಿ ಮೆನ್ಯೂಗೆ ಹೋಗಲು

ಯೆಹೋವನ ಸಾಕ್ಷಿಗಳು

Kannada (ಕನ್ನಡ)

ಯೆಹೋವನ ಸಾಕ್ಷಿಗಳ ಸಭಾ ಕೂಟಗಳು

ನಮ್ಮ ಕೂಟಗಳ ಬಗ್ಗೆ ತಿಳಿದುಕೊಳ್ಳಿ. ನಿಮಗೆ ಹತ್ತಿರವಿರುವ ಸಭೆ ಯಾವುದೆಂದು ಕಂಡುಕೊಳ್ಳಿ.

ನಿಮಗೆ ಹತ್ತಿರವಾಗುವ ಕಾರ್ಯಕ್ರಮದ ಸ್ಥಳವನ್ನು ತಿಳಿದುಕೊಳ್ಳಿ

ನಮ್ಮ ಕೂಟಗಳು ನಡೆಸಲ್ಪಡುವ ವಿಧ

ಯೆಹೋವನ ಸಾಕ್ಷಿಗಳು ವಾರಕ್ಕೆ ಎರಡು ಬಾರಿ ಆರಾಧನೆಗಾಗಿರುವ ಕೂಟಗಳನ್ನು ನಡೆಸುತ್ತಾರೆ. (ಇಬ್ರಿಯ 10:24, 25) ಸಾರ್ವಜನಿಕರಿಗೂ ಆಮಂತ್ರಣವಿರುವ ಈ ಕೂಟಗಳಲ್ಲಿ ನಾವು ಬೈಬಲ್‌ ಏನು ತಿಳಿಸುತ್ತದೆ ಮತ್ತು ಅದನ್ನು ನಾವು ಹೇಗೆ ಅನ್ವಯಿಸಬಲ್ಲೆವು ಎಂಬದನ್ನು ಕಲಿಯುತ್ತೇವೆ.

ನಮ್ಮ ಕೂಟದಲ್ಲಿ ಹೆಚ್ಚಿನದಾಗಿ ಸಭಿಕರೊಂದಿಗೆ ಚರ್ಚೆ ಇರುತ್ತದೆ. ಶಾಲೆಯ ತರಗತಿಯಲ್ಲಿ ನಡೆಯುವ ಚರ್ಚೆಯ ರೀತಿ ಇರುತ್ತದೆ. ಪ್ರತಿ ಕೂಟದ ಪ್ರಾರಂಭದಲ್ಲೂ ಮುಕ್ತಾಯದಲ್ಲೂ ಸಂಗೀತ ಮತ್ತು ಪ್ರಾರ್ಥನೆ ಇರುತ್ತದೆ.

ನಮ್ಮ ಕೂಟಗಳಿಗೆ ಹಾಜರಾಗಲು ನೀವೊಬ್ಬ ಯೆಹೋವನ ಸಾಕ್ಷಿಯಾಗಿರುವ ಅಗತ್ಯವಿಲ್ಲ. ಸಭಾಗೃಹದ ಬಾಗಿಲು ಎಲ್ಲರಿಗಾಗಿ ತೆರೆದಿದೆ. ಯಾವುದೇ ಪ್ರವೇಶ ಶುಲ್ಕವಿಲ್ಲ. ಚಂದಾ ಎತ್ತುವುದನ್ನಾಗಲಿ ಹಣ ಕೇಳುವುದನ್ನಾಗಲಿ ಎಂದೂ ಮಾಡುವುದಿಲ್ಲ.