ಮಾಹಿತಿ ಇರುವಲ್ಲಿ ಹೋಗಲು

ಯೆಹೋವನ ಸಾಕ್ಷಿಗಳ ಸಭೆಗಳನ್ನು ಹೇಗೆ ಸಂಘಟಿಸಲಾಗಿದೆ?

ಯೆಹೋವನ ಸಾಕ್ಷಿಗಳ ಸಭೆಗಳನ್ನು ಹೇಗೆ ಸಂಘಟಿಸಲಾಗಿದೆ?

ಪ್ರತಿ ಸಭೆಯ ಮೇಲ್ವಿಚಾರಣೆಯನ್ನು ಹಿರಿಯರ ಮಂಡಲಿ ಮಾಡುತ್ತದೆ. ಸುಮಾರು 20 ಸಭೆಗಳನ್ನು ಒಂದು ಸರ್ಕಿಟ್‌ ಎಂದು ವಿಭಾಗಿಸಲಾಗಿದೆ. ಅಂಥ ಸುಮಾರು 10 ಸರ್ಕಿಟ್‌ಗಳನ್ನು ಒಂದು ಡಿಸ್ಟ್ರಿಕ್ಟ್‌ ಎಂದು ವಿಭಾಗಿಸಲಾಗಿದೆ. ಸಂಚರಣ ಕೆಲಸದಲ್ಲಿರುವ ಹಿರಿಯರನ್ನು ಸಂಚರಣ ಮೇಲ್ವಿಚಾರಕರು ಮತ್ತು ಜಿಲ್ಲಾ ಮೇಲ್ವಿಚಾರಕರು ಎಂದು ಕರೆಯಲಾಗುತ್ತದೆ. ಇವರು ಸಭೆಗಳನ್ನು ಆಗಿಂದಾಗ್ಗೆ ಭೇಟಿ ಮಾಡುತ್ತಾರೆ.

ಬೈಬಲ್‌ ಆಧರಿತ ಮಾರ್ಗದರ್ಶನ ಮತ್ತು ಸಲಹೆಗಳನ್ನು ಆಡಳಿತ ಮಂಡಲಿಯ ಸದಸ್ಯರು ನೀಡುತ್ತಾರೆ. ಇವರು ನ್ಯೂಯಾರ್ಕ್‌ನ ಬ್ರುಕ್ಲಿನ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಅಂತರರಾಷ್ಟ್ರೀಯ ಆಫೀಸ್‌ನಲ್ಲಿ ಕೆಲಸ ಮಾಡುತ್ತಿರುವ ಬಹಳ ವರ್ಷಗಳಿಂದ ಸಾಕ್ಷಿಗಳಾಗಿ ಅನುಭವವಿರುವ ಸದಸ್ಯರು.—ಅಪೊಸ್ತಲರ ಕಾರ್ಯಗಳು 15:23-29; 1 ತಿಮೊಥೆಯ 3:1-7.