ಕೀರ್ತನೆ 146:1-10

  • ಮನುಷ್ಯರಲ್ಲಿ ಅಲ್ಲ ದೇವರಲ್ಲಿ ಭರವಸೆಯಿಡಿ

    • ಸತ್ತ ಮೇಲೆ ಮನುಷ್ಯನ ಆಲೋಚನೆಗಳೆಲ್ಲ ಅಳಿದು ಹೋಗುತ್ತೆ (4)

    • ಕುಗ್ಗಿ ಹೋಗಿರೋ ಜನ್ರನ್ನ ದೇವರು ಎದ್ದು ನಿಲ್ಲೋ ಹಾಗೆ ಮಾಡ್ತಾನೆ (8)

146  ಯಾಹುವನ್ನ ಸ್ತುತಿಸಿ!*+ ನನ್ನ ತನುಮನವೆಲ್ಲ ಯೆಹೋವನನ್ನ ಹೊಗಳಲಿ.+   ನನ್ನ ಜೀವನಪರ್ಯಂತ ನಾನು ಯೆಹೋವನನ್ನ ಕೊಂಡಾಡ್ತೀನಿ. ನಾನು ಸಾಯೋ ತನಕ ನನ್ನ ದೇವರನ್ನ ಹಾಡಿಹೊಗಳ್ತೀನಿ.*   ದೊಡ್ಡದೊಡ್ಡ ಅಧಿಕಾರಿಗಳ* ಮೇಲಾಗಲಿ, ಮನುಷ್ಯರ ಮೇಲಾಗಲಿ ಭರವಸೆ ಇಡಬೇಡಿ,ಅವರು ರಕ್ಷಣೆ ಕೊಡೋಕೆ ಆಗಲ್ಲ.+   ಮನುಷ್ಯನ ಉಸಿರು ಹೋದಾಗ ಮಣ್ಣಿಗೆ ಸೇರ್ತಾನೆ.+ ಆ ದಿನಾನೇ ಅವನ ಯೋಚನೆಗಳೆಲ್ಲ ಅಳಿದು ಹೋಗುತ್ತೆ.+   ಸಹಾಯಕ್ಕಾಗಿ ಯಾಕೋಬನ ದೇವರಿಗೆ ಪ್ರಾರ್ಥಿಸೋರು,+ತಮ್ಮ ದೇವರಾದ ಯೆಹೋವನ ಮೇಲೆ ನಿರೀಕ್ಷೆ ಇಡೋರು ಭಾಗ್ಯವಂತರು.+   ಆತನು ಆಕಾಶ, ಭೂಮಿ,ಸಮುದ್ರ ಮತ್ತು ಅದ್ರಲ್ಲಿ ಇರೋ ಎಲ್ಲವನ್ನೂ ರಚಿಸಿದ,+ಆತನು ಯಾವಾಗ್ಲೂ ನಂಬಿಗಸ್ತನಾಗೇ ಇರ್ತಾನೆ.+   ಅನ್ಯಾಯ ಆದವ್ರಿಗೆ ಆತನು ನ್ಯಾಯ ಸಿಗೋ ತರ ಮಾಡ್ತಾನೆ,ಹಸಿದವ್ರಿಗೆ ಊಟ ಕೊಡ್ತಾನೆ.+ ಯೆಹೋವ ಕೈದಿಗಳನ್ನ ಬಿಡಿಸ್ತಾನೆ.+   ಯೆಹೋವ ಕುರುಡರ ಕಣ್ಣನ್ನ ತೆರೀತಾನೆ,+ಯೆಹೋವ ಕುಗ್ಗಿ ಹೋಗಿರೋರನ್ನ ಎದ್ದು ನಿಲ್ಲೋ ತರ ಮಾಡ್ತಾನೆ,+ಯೆಹೋವ ನೀತಿವಂತರನ್ನ ಪ್ರೀತಿಸ್ತಾನೆ.   ಯೆಹೋವ ವಿದೇಶಿಯರನ್ನ ರಕ್ಷಿಸ್ತಾನೆ,ಅನಾಥರನ್ನ, ವಿಧವೆಯರನ್ನ ಪರಿಪಾಲಿಸ್ತಾನೆ,+ಆದ್ರೆ ಕೆಟ್ಟವರ ಯೋಜನೆಗಳನ್ನ ಕೆಡಿಸ್ತಾನೆ.*+ 10  ಯೆಹೋವ ಯಾವಾಗ್ಲೂ ರಾಜನಾಗಿ ಇರ್ತಾನೆ,+ಚೀಯೋನೇ, ನಿನ್ನ ದೇವರು ಯುಗಯುಗಾಂತರಕ್ಕೂ ರಾಜನಾಗಿ ಇರ್ತಾನೆ. ಯಾಹುವನ್ನ ಸ್ತುತಿಸಿ!*

ಪಾದಟಿಪ್ಪಣಿ

ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.
ಅಥವಾ “ಸಂಗೀತ ರಚಿಸ್ತೀನಿ.”
ಅಥವಾ “ನಾಯಕರ.”
ಅಥವಾ “ದುಷ್ಟರ ದಾರಿಯನ್ನ ಸೊಟ್ಟ ಮಾಡ್ತಾನೆ.”
ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.