ಕೀರ್ತನೆ 98:1-9

  • ಯೆಹೋವ ನಮ್ಮ ರಕ್ಷಕ ಮತ್ತು ನೀತಿಯ ನ್ಯಾಯಾಧೀಶ

    • ಯೆಹೋವ ಹೇಗೆ ರಕ್ಷಿಸ್ತಾನೆ ಅಂತ ತೋರಿಸಿಕೊಟ್ಟಿದ್ದಾನೆ (2, 3)

ಮಧುರ ಗೀತೆ. 98  ಯೆಹೋವನಿಗೆ ಹೊಸ ಹಾಡನ್ನ ಹಾಡಿ,+ಯಾಕಂದ್ರೆ ಆತನು ಅದ್ಭುತಗಳನ್ನ ಮಾಡಿದ್ದಾನೆ.+ ಆತನ ಬಲಗೈ, ಆತನ ಪವಿತ್ರ ತೋಳು ರಕ್ಷಣೆ ತಂದಿದೆ.*+   ಯೆಹೋವ ತಾನು ಹೇಗೆ ರಕ್ಷಿಸ್ತಾನೆ ಅಂತ ತೋರಿಸ್ಕೊಟ್ಟಿದ್ದಾನೆ,+ದೇಶಗಳ ಮುಂದೆ ತನ್ನ ನೀತಿಯನ್ನ ಬಯಲು ಮಾಡಿದ್ದಾನೆ.+   ಇಸ್ರಾಯೇಲ್‌ ಮನೆತನದ ಕಡೆ ತನಗಿರೋ ಶಾಶ್ವತ ಪ್ರೀತಿ ಮತ್ತು ನಂಬಿಗಸ್ತಿಕೆಯನ್ನ ನೆನಪಿಸ್ಕೊಂಡಿದ್ದಾನೆ.+ ನಮ್ಮ ದೇವರು ಹೇಗೆ ರಕ್ಷಿಸ್ತಾನೆ ಅನ್ನೋದನ್ನ* ಇಡೀ ಭೂಮಿ ನೋಡಿದೆ.+   ಇಡೀ ಭೂಮಿಯ ಜನ್ರೇ, ಯೆಹೋವ ಗೆದ್ದಿದ್ದಕ್ಕೆ ಜೈಕಾರ ಹಾಕಿ. ಉಲ್ಲಾಸಪಡಿ, ಸಂಭ್ರಮದಿಂದ ಕೂಗಿ, ಹಾಡಿ ಹೊಗಳಿ.*+   ತಂತಿವಾದ್ಯದ ಜೊತೆ ಯೆಹೋವನಿಗೆ ಸ್ತುತಿಗೀತೆಗಳನ್ನ ಹಾಡಿ,*ವಾದ್ಯಗಳನ್ನ ನುಡಿಸ್ತಾ, ಮಧುರ ಗೀತೆಗಳನ್ನ ಹಾಡ್ತಾ ಆತನನ್ನ ಕೊಂಡಾಡಿ.   ತುತ್ತೂರಿಗಳಿಂದ, ಕೊಂಬುಗಳ ಶಬ್ದದಿಂದ+ರಾಜನಾದ ಯೆಹೋವನ ಮುಂದೆ ಜೈಕಾರ ಹಾಕಿ.   ಸಮುದ್ರ ಅದ್ರಲ್ಲಿರೋ ಎಲ್ಲವೂಭೂಮಿ ಅದ್ರಲ್ಲಿ ವಾಸವಾಗಿರೋ ಎಲ್ಲವೂ ಜೈಕಾರ ಹಾಕಲಿ.   ನದಿಗಳು ಚಪ್ಪಾಳೆ ಹೊಡೀಲಿ,ಬೆಟ್ಟಗಳೆಲ್ಲ ಒಟ್ಟುಸೇರಿ ಜೈಕಾರ ಹಾಕಲಿ.+   ಯೆಹೋವನ ಮುಂದೆ ಜೈಕಾರ ಹಾಕಲಿ,ಯಾಕಂದ್ರೆ ಆತನು ಇಡೀ ಭೂಮಿಗೆ ನ್ಯಾಯತೀರಿಸೋಕೆ ಬರ್ತಿದ್ದಾನೆ.* ಆತನು ಇಡೀ ಲೋಕವನ್ನ ನೀತಿಯಿಂದ ತೀರ್ಪು ಮಾಡ್ತಾನೆ.+ ಜನಾಂಗಗಳನ್ನ ನ್ಯಾಯದಿಂದ ತೀರ್ಪು ಮಾಡ್ತಾನೆ.+

ಪಾದಟಿಪ್ಪಣಿ

ಅಥವಾ “ಆತನಿಗೆ ಜಯ ತಂದಿದೆ.”
ಅಥವಾ “ದೇವರ ವಿಜಯವನ್ನ.”
ಅಥವಾ “ಸಂಗೀತ ರಚಿಸಿ.”
ಅಥವಾ “ಸಂಗೀತ ರಚಿಸಿ.”
ಅಥವಾ “ಬಂದಿದ್ದಾನೆ.”