ಕೀರ್ತನೆ 113:1-9

  • ದೇವರು ದೀನರನ್ನ ಎತ್ರದಲ್ಲಿ ಇಡ್ತಾನೆ

    • ಯೆಹೋವನ ಹೆಸ್ರಿಗೆ ಯಾವಾಗ್ಲೂ ಹೊಗಳಿಕೆ ಸಿಗಲಿ (2)

    • ದೇವರು ಕೆಳಕ್ಕೆ ಬಾಗ್ತಾನೆ (6)

113  ಯಾಹುವನ್ನ ಸ್ತುತಿಸಿ!* ಯೆಹೋವನ ಸೇವಕರೇ, ಹಾಡಿಹೊಗಳಿ,ಯೆಹೋವನ ಹೆಸ್ರನ್ನ ಕೊಂಡಾಡಿ.   ಇವತ್ತಿಂದ ಶಾಶ್ವತವಾಗಿಯೆಹೋವನ ಹೆಸ್ರಿಗೆ ಹೊಗಳಿಕೆ ಸಿಗಲಿ.+   ಸೂರ್ಯ ಹುಟ್ಟಿ ಮುಳುಗೋ ತನಕಯೆಹೋವನ ಹೆಸ್ರಿಗೆ ಸ್ತುತಿ ಆಗಲಿ.+   ಎಲ್ಲ ಜನಾಂಗಗಳಿಗಿಂತ ಯೆಹೋವ ಉನ್ನತನು,+ಆತನ ಮಹಿಮೆ ಆಕಾಶಕ್ಕಿಂತ ಉನ್ನತ.+   ಉನ್ನತ ಸ್ಥಾನದಲ್ಲಿ ಇರೋ*ನಮ್ಮ ದೇವರಾದ ಯೆಹೋವನ ತರ ಯಾರಿದ್ದಾರೆ?+   ಆಕಾಶ ಭೂಮಿಯನ್ನ ನೋಡೋಕೆ ಆತನು ಕೆಳಗೆ ಬಗ್ತಾನೆ,+   ದೀನನನ್ನ ಧೂಳಿಂದ ಎಬ್ಬಿಸ್ತಾನೆ. ಬಡವನನ್ನ ಬೂದಿಯಿಂದ* ಮೇಲೆ ಎತ್ತುತ್ತಾನೆ.+   ಅವನನ್ನ ಪ್ರಧಾನರ ಜೊತೆ,ತನ್ನ ಜನ್ರ ಪ್ರಮುಖರ ಜೊತೆ ಕೂರಿಸೋಕೆ ಹೀಗೆ ಮಾಡ್ತಾನೆ.   ಆತನು ಬಂಜೆಗೆ ತಾಯಿ ಆಗೋ ಸೌಭಾಗ್ಯ ಕೊಟ್ಟು,ಅವಳು ಖುಷಿಯಾಗಿ ಮನೆಯಲ್ಲಿ ಮಕ್ಕಳ ಜೊತೆ ಇರೋ ಹಾಗೆ ಮಾಡ್ತಾನೆ.+ ಯಾಹುವನ್ನ ಸ್ತುತಿಸಿ!*

ಪಾದಟಿಪ್ಪಣಿ

ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.
ಅಥವಾ “ಸಿಂಹಾಸನದಲ್ಲಿ ಕೂತಿರೋ.”
ಬಹುಶಃ, “ತಿಪ್ಪೆಯಿಂದ.”
ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.