ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಗೀತೆ 137

ಕೊಡು ನಮಗೆ ಧೈರ್ಯ

ಕೊಡು ನಮಗೆ ಧೈರ್ಯ

ಡೌನ್‌ಲೋಡ್‌:

(ಅಪೊಸ್ತಲರ ಕಾರ್ಯಗಳು 4:29, 30)

 1. ನಿನ್ನ ರಾಜ್ಯ ನಿನ್ನ ನಾಮ

  ಬಗ್ಗೆ ಸಾರಿದಾಗೆಲ್ಲ,

  ಜನ ಮಾಡಿ ಅವಮಾನ

  ತೋರುತ್ತಾರೆ ವಿರೋಧ.

  ಜನಕ್ಕೆ ಹೆದರದೆ

  ತೋರುವೆವು ವಿಧೇಯತೆ,

  ಸುರಿಸು ನಿನ್ನ ಪವಿತ್ರಾತ್ಮ

  ಕಿವಿಗೊಡು ಯೆಹೋವನೇ.

  (ಪಲ್ಲವಿ)

  ವಾಕ್ಯವ ಸಾರಲು ಧೈರ್ಯ

  ಕೊಟ್ಟು ನೀಗಿಸು ಭಯ.

  ನಂಬಿಕೆ ನಿರ್ಭಯದಿಂದ

  ಜಗತ್ತಿಗೆ ಸಾರೋಣ.

  ಲೋಕಾಂತ್ಯ ಹತ್ತಿರವಿದೆ,

  ಅಂಜದೆ ಸಾರಬೇಕಿದೆ,

  ಸಾರಲು ಕೊಡಪ್ಪ ಧೈರ್ಯ

  ಯೆಹೋವನೇ.

 2. ನಾವು ಬಲಹೀನರೆಂದು

  ನೀನು ತಿಳಿದಿರುವೆ.

  ಬೆಂಬಲ ಕೊಡುವೆ ಎಂದು

  ವಚನ ಕೊಟ್ಟಿರುವೆ.

  ಹಿಂಸೆ ಬೆದರಿಕೆಗೆ

  ಗಮನ ಕೊಡು ದೇವರೇ,

  ಧೈರ್ಯದಿ ಸಾರಲು ನಮಗೆ

  ಸಹಾಯ ಕೊಡು ತಂದೆಯೇ.

  (ಪಲ್ಲವಿ)

  ವಾಕ್ಯವ ಸಾರಲು ಧೈರ್ಯ

  ಕೊಟ್ಟು ನೀಗಿಸು ಭಯ.

  ನಂಬಿಕೆ ನಿರ್ಭಯದಿಂದ

  ಜಗತ್ತಿಗೆ ಸಾರೋಣ.

  ಲೋಕಾಂತ್ಯ ಹತ್ತಿರವಿದೆ,

  ಅಂಜದೆ ಸಾರಬೇಕಿದೆ,

  ಸಾರಲು ಕೊಡಪ್ಪ ಧೈರ್ಯ

  ಯೆಹೋವನೇ.