ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಗೀತೆ 138

ಯೆಹೋವ ನಿನ್ನ ನಾಮ

ಯೆಹೋವ ನಿನ್ನ ನಾಮ

ಡೌನ್‌ಲೋಡ್‌:

(ಕೀರ್ತನೆ 83:18)

 1. ನೀನೇ ಸತ್ಯ ದೇವ

  ನೀ ಸರ್ವ ಸೃಷ್ಟಿಕರ್ತ

  ಎಲ್ಲಾ ಯುಗಗಳಲ್ಲೂ

  ಯೆಹೋವ ನಿನ್ನಾಮ.

  ಹೆಮ್ಮೆ ಗೌರವದಿ

  ಆದೆವು ನಿನ್ನ ಜನ.

  ಸಕಲ ಜನರಿಗೆ,

  ಸಾರುವೆವು ವಾಕ್ಯ.

  (ಪಲ್ಲವಿ)

  ಯೆಹೋವ, ಯೆಹೋವ,

  ಯಾರೂ ನಿನ್ನಂತಿಲ್ಲ.

  ಸ್ವರ್ಗದಲ್ಲೂ ಯಾರೂ ಇಲ್ಲ,

  ಭೂಮಿಯಲ್ಲೂ ಇಲ್ಲ.

  ನೀನೊಬ್ಬನೇ ಸರ್ವಶಕ್ತ,

  ತಿಳಿಯಲಿ ಜನ.

  ಯೆಹೋವ, ಯೆಹೋವ,

  ಏಕೈಕ ದೇವರು ನೀನೇ.

 2. ನಿನ್ನುದ್ದೇಶದಂತೆ,

  ನಿನ್ನ ಬಯಕೆಯಂತೆ

  ನಮ್ಮ ರೂಪಿಸು ತಂದೆ

  ಯೆಹೋವ ನಿನ್ನಾಮ.

  ನೀವು ನನ್ನ ಸಾಕ್ಷಿ

  ಎಂದೆ ನೀನು ನಮಗೆ.

  ನಿನಗೆ ಕೃತಜ್ಞತೆ

  ಗೌರವಿಸಿದ್ದಕ್ಕೆ.

  (ಪಲ್ಲವಿ)

  ಯೆಹೋವ, ಯೆಹೋವ,

  ಯಾರೂ ನಿನ್ನಂತಿಲ್ಲ.

  ಸ್ವರ್ಗದಲ್ಲೂ ಯಾರೂ ಇಲ್ಲ,

  ಭೂಮಿಯಲ್ಲೂ ಇಲ್ಲ.

  ನೀನೊಬ್ಬನೇ ಸರ್ವಶಕ್ತ,

  ತಿಳಿಯಲಿ ಜನ.

  ಯೆಹೋವ, ಯೆಹೋವ,

  ಏಕೈಕ ದೇವರು ನೀನೇ.