ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಗೀತೆ 139

ಧೃಡವಾಗಿ ನಿಲ್ಲಲು ಅವರಿಗೆ ಕಲಿಸಿ

ಧೃಡವಾಗಿ ನಿಲ್ಲಲು ಅವರಿಗೆ ಕಲಿಸಿ

ಡೌನ್‌ಲೋಡ್‌:

(ಮತ್ತಾಯ 28:19, 20)

 1. ಯೆಹೋವ ಸೆಳೆದವರಿಗೆ

  ಶಿಕ್ಷಣ ಕೊಡುತ್ತೇವೆ.

  ಸತ್ಯದಿ ಅವರ ಜೀವನ

  ನೋಡಲು ಅತ್ಯಾನಂದ.

  (ಪಲ್ಲವಿ)

  ಕೇಳು ಯೆಹೋವ ದೇವರೇ,

  ಆಗು ಅವರ ಆಸರೆ.

  ಯೇಸು ನಾಮದಿ ಕೋರಿಕೆ, ಸಫಲತೆ

  ನೀಡಿ ಮಾಡವರ ದೃಢ.

 2. ಶೋಧನೆ ಜಯಿಸಲಿ ಎಂದು

  ದಿನವೂ ಬೇಡಿದೆವು,

  ಕಲಿತು ಕಾಳಜಿ ಪಡೆದು

  ಬಲಿತು ಬೆಳೆದರು.

  (ಪಲ್ಲವಿ)

  ಕೇಳು ಯೆಹೋವ ದೇವರೇ,

  ಆಗು ಅವರ ಆಸರೆ.

  ಯೇಸು ನಾಮದಿ ಕೋರಿಕೆ, ಸಫಲತೆ

  ನೀಡಿ ಮಾಡವರ ದೃಢ.

 3. ನಿನ್ನಲಿ ನಿನ್ನ ಮಗನಲಿ

  ನಂಬಿಕೆ ತೋರಿಸಲಿ,

  ಸಹಿಸಿ ವಿಧೇಯರಾಗಲಿ

  ಜೀವದೋಟ ಗೆಲ್ಲಲಿ.

  (ಪಲ್ಲವಿ)

  ಕೇಳು ಯೆಹೋವ ದೇವರೇ,

  ಆಗು ಅವರ ಆಸರೆ.

  ಯೇಸು ನಾಮದಿ ಕೋರಿಕೆ, ಸಫಲತೆ

  ನೀಡಿ ಮಾಡವರ ದೃಢ.