ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಗೀತೆ 142

ಎಲ್ಲ ರೀತಿಯ ಜನರಿಗೆ ಸಾರಿ

ಎಲ್ಲ ರೀತಿಯ ಜನರಿಗೆ ಸಾರಿ

ಡೌನ್‌ಲೋಡ್‌:

(1 ತಿಮೊಥೆಯ 2:4)

 1. ಅನುಕರಿಸೋಣ ಯೆಹೋವನ

  ಬೇಧವಿಲ್ಲದ ನಮ್ಮ ದೇವರ

  ಎಲ್ಲಾ ಹಿನ್ನೆಲೆಯ ಜನರನ್ನು

  ರಕ್ಷಿಸೋದು ಆತನ ಚಿತ್ತವು. 

  (ಪಲ್ಲವಿ)

  ಜನ ಯಾರೇ ಆಗಲಿ

  ವ್ಯಕ್ತಿ ಹೇಗೆ ಕಾಣಲಿ

  ನಾವಂತೂ ಸಾರುತ್ತೇವೆ ಸುವಾರ್ತೆ.

  ಪ್ರೀತಿ ನಮ್ಮ ಪ್ರೇರಣೆ

  ಸಾರುತ್ತೇವೆ ಎಲ್ಲೆಡೆ

  ದೇವರ ಸ್ನೇಹವ ಪಡೆವಂತೆ.

 2. ಯೆಹೋವ ನೋಡುವ ಹೃದಯವ

  ನೋಡನು ಆತ ಮುಖಭಾವವ.

  ನಾವು ಕೂಡ ಅನುಕರಿಸುವ

  ಯೆಹೋವನ ನಿಷ್ಪಕ್ಷಪಾತವ.

  (ಪಲ್ಲವಿ)

  ಜನ ಯಾರೇ ಆಗಲಿ

  ವ್ಯಕ್ತಿ ಹೇಗೆ ಕಾಣಲಿ

  ನಾವಂತೂ ಸಾರುತ್ತೇವೆ ಸುವಾರ್ತೆ.

  ಪ್ರೀತಿ ನಮ್ಮ ಪ್ರೇರಣೆ

  ಸಾರುತ್ತೇವೆ ಎಲ್ಲೆಡೆ

  ದೇವರ ಸ್ನೇಹವ ಪಡೆವಂತೆ.

 3. ದೇವ ಸ್ವಾಗತಿಸುವ ಎಲ್ಲರ

  ಬಿಟ್ಟು ಬಂದರೆ ಕೆಟ್ಟ ಲೋಕವ.

  ದೇವರ ಈ ಆಹ್ವಾನದ ಬಗ್ಗೆ

  ತಿಳಿಸೋಣ ಎಲ್ಲಾ ಜನರಿಗೆ

  (ಪಲ್ಲವಿ)

  ಜನ ಯಾರೇ ಆಗಲಿ

  ವ್ಯಕ್ತಿ ಹೇಗೆ ಕಾಣಲಿ

  ನಾವಂತೂ ಸಾರುತ್ತೇವೆ ಸುವಾರ್ತೆ.

  ಪ್ರೀತಿ ನಮ್ಮ ಪ್ರೇರಣೆ

  ಸಾರುತ್ತೇವೆ ಎಲ್ಲೆಡೆ

  ದೇವರ ಸ್ನೇಹವ ಪಡೆವಂತೆ.