ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಗೀತೆ 154

ತಾಳಿಕೊಳ್ಳುತ್ತಾ ಇರೋಣ

ತಾಳಿಕೊಳ್ಳುತ್ತಾ ಇರೋಣ

ಡೌನ್‌ಲೋಡ್‌:

(ಮತ್ತಾಯ 24:13)

 1. ಯೇಸು ತಾಳಲು

  ವಾಗ್ದಾನ ಶಕ್ತಿ ನೀಡಿತು.

  ದೇವನ್ಯಾಯದಿ

  ಕಣ್ಣಿಟ್ಟು ತಾಳಿಕೊಂಡನು.

  ಮುಂದಿದ್ದ ಆನಂದ

  ಧ್ಯಾನಿಸಿ ತಾಳಿದ.

  (ಪಲ್ಲವಿ)

  ನಾವೂ ತಾಳಲೇಬೇಕು

  ನಂಬಿಕೆ ತೋರಲು.

  ಬಿಡದಿರಲು ತಾಳ್ಮೆ

  ಯೆಹೋವನ ಮಮತೆ ಪ್ರೇರಣೆ.

 2. ದುಃಖ, ಸಂಕಟ

  ಕಡೇದಿನದ ಲಕ್ಷಣ.

  ದೇವರಾಜ್ಯವ

  ನೋಡುತ್ತಾ ತಾಳಿ ಬಾಳುವ.

  ಸೇರಲು ರಾಜ್ಯವ

  ವಿಶ್ವಾಸ ಅಗತ್ಯ

  (ಪಲ್ಲವಿ)

  ನಾವೂ ತಾಳಲೇಬೇಕು

  ನಂಬಿಕೆ ತೋರಲು.

  ಬಿಡದಿರಲು ತಾಳ್ಮೆ

  ಯೆಹೋವನ ಮಮತೆ ಪ್ರೇರಣೆ.

 3. ಭಯ, ಸಂಶಯ

  ಸುಡದಿರಲಿ ಜೀವನ.

  ನಿಷ್ಠೆಯಿಂದಲೇ

  ಕೊನೆವರೆಗೆ ಸಾರೋಣ.

  ಸಹಿಸಿ ಸೇರೋಣ

  ಯೆಹೋವ ರಾಜ್ಯವ.

  (ಪಲ್ಲವಿ)

  ನಾವೂ ತಾಳಲೇಬೇಕು

  ನಂಬಿಕೆ ತೋರಲು.

  ಬಿಡದಿರಲು ತಾಳ್ಮೆ

  ಯೆಹೋವನ ಮಮತೆ ಪ್ರೇರಣೆ.