ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಗೀತೆ 143

ಕತ್ತಲೆಯಲ್ಲಿ ಬೆಳಕು

ಕತ್ತಲೆಯಲ್ಲಿ ಬೆಳಕು

ಡೌನ್‌ಲೋಡ್‌:

(2 ಕೊರಿಂಥ 4:6)

 1. ಕಷ್ಟದ ಕಾರ್ಮೋಡಗಳು

  ಹಬ್ಬಿವೆ ಎಲ್ಲೆಲ್ಲೂ.

  ಸತ್ಯವು ಕತ್ತಲೆಯನು

  ಸರಿಸಿದೆ ದೂರ.

  (ಪಲ್ಲವಿ)

  ಕಾರ್ಗತ್ತಲೆಯಲ್ಲಿ

  ಹೊಮ್ಮಿದ ಹೊಂಗಿರಣ

  ರಾಜ್ಯದ ಸಂದೇಶ.

  ಸೂರ್ಯೋದಯದಂತೆ

  ಕತ್ತಲ ಬಾಳಿನಲಿ

  ಜ್ಞಾನೋದಯ.

 2. ಏಳಿಸಿ ನಿದ್ರಿಸುವರ

  ಲೋಕಾಂತ್ಯ ಹತ್ತಿರ.

  ನೀಡುತ್ತಾ ನಿರೀಕ್ಷೆಯನು

  ಸಂತೈಸಿ ಅವರ. 

  (ಪಲ್ಲವಿ)

  ಕಾರ್ಗತ್ತಲೆಯಲ್ಲಿ

  ಹೊಮ್ಮಿದ ಹೊಂಗಿರಣ

  ರಾಜ್ಯದ ಸಂದೇಶ.

  ಸೂರ್ಯೋದಯದಂತೆ

  ಕತ್ತಲ ಬಾಳಿನಲಿ

  ಜ್ಞಾನೋದಯ.