ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಗೀತೆ 141

ಶಾಂತಿ ಪ್ರಿಯರ ಹುಡುಕಿ

ಶಾಂತಿ ಪ್ರಿಯರ ಹುಡುಕಿ

ಡೌನ್‌ಲೋಡ್‌:

(ಲೂಕ 10:6)

 1. ‘ಸಾರಿ ಸತ್ಯವ’ ಯೇಸು ಹೇಳಿದ

  ಬಿಸಿಲಲ್ಲೂ ಬಹುದೂರ

  ನಡೆದು ಸತ್ಯ ಸಾರಿದ.

  ಪ್ರೀತಿಸಿ ಯೇಸು ಶಾಂತಿಶೀಲರ

  ಇಡೀ ದಿನ ವಿವಿಧೆಡೆ ಹುಡುಕಾಡಿದ.

  ನಾವು ಸಹ ಕಷ್ಟಾಂತ್ಯದ

  ಸುವಾರ್ತೆಯನ್ನು ಹಂಚುವ

  ಎಲ್ಲಾ ಕಡೆ ಮುಟ್ಟಲಿ

  ಜೀವವಾಕ್ಯ

  (ಪಲ್ಲವಿ)

  ಶಾಂತಿ ಪ್ರಿಯ

  ಜನರಿಗಾಗಿ ಹುಡುಕೋಣ

  ರಾಜ್ಯ ಪ್ರಿಯ

  ಹೃದಯವ ಪತ್ತೇ ಹಚ್ಚೋಣ

  ಮರೆಯದೆ

  ಯಾರೊಬ್ಬರ.

 2. ಕಾಯಲ್ಲ ಕಾಲ ಸಾರುತ್ತಾ ಇರಿ

  ಅನೇಕ ಜೀವಗಳಲ್ಲಿ

  ಒಂದನ್ನಾದರೂ ರಕ್ಷಿಸಿ

  ಪುನರ್ಭೇಟಿಗೆ ಪ್ರೀತಿ ಪ್ರೇರಣೆ.

  ದಿಕ್ಕಿಲ್ಲದ ಬದುಕಿಗೆ ಮಾರ್ಗದರ್ಶನೆ.

  ಯಾರಾದರೂ ಸತ್ಯದಲಿ

  ತೋರಿದರೆ ಅಭಿರುಚಿ,

  ಉಕ್ಕುವ ಆನಂದವೂ

  ನಮ್ಮ ಸ್ಪೂರ್ತಿ.

  (ಪಲ್ಲವಿ)

  ಶಾಂತಿ ಪ್ರಿಯ

  ಜನರಿಗಾಗಿ ಹುಡುಕೋಣ

  ರಾಜ್ಯ ಪ್ರಿಯ

  ಹೃದಯವ ಪತ್ತೇ ಹಚ್ಚೋಣ

  ಮರೆಯದೆ

  ಯಾರೊಬ್ಬರ.