ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಗೀತೆ 136

ನಿನ್ನ ರಾಜ್ಯ ಬರಲಿ!

ನಿನ್ನ ರಾಜ್ಯ ಬರಲಿ!

ಡೌನ್‌ಲೋಡ್‌:

(ಪ್ರಕಟನೆ 11:15; 12:10)

 1. ಯೆಹೋವ ನೀ-ನಿದ್ದಿ ಸದಾ,

  ಎಂದೆಂದೂ ಇರುವಿ.

  ಕೊಟ್ಟೆ ರಾಜ್ಯ ಆಡಳಿತ

  ಪ್ರಿಯ ಕ್ರಿಸ್ತನಿಗೆ.

  ರಾಜ್ಯ ಪ್ರಾರಂಭವಾಗಿದೆ

  ಭೂಮಿಯನ್ನು ಆಳಲಿದೆ.

  (ಪಲ್ಲವಿ)

  ನಮ್ಮ ಸಂರಕ್ಷಿಸೋ

  ಶಕ್ತಿ ನಿನ್ನ ರಾಜ್ಯಕ್ಕಿದೆ.

  ಯೆಹೋವನೇ ನಿನ್ನ

  ರಾಜ್ಯ ಬರಲಿ ಬರಲಿ!

 2. ಪಿಶಾಚನ ಕಾಲ ಸ್ವಲ್ಪ

  ಹೆಚ್ಚುತ್ತಿದೆ ಕಷ್ಟ.

  ಇದು ಕಠಿಣ ಸಮಯ

  ಮುಂದಿದೆ ಆನಂದ.

  ರಾಜ್ಯ ಪ್ರಾರಂಭವಾಗಿದೆ

  ಭೂಮಿಯನ್ನು ಆಳಲಿದೆ.

  (ಪಲ್ಲವಿ)

  ನಮ್ಮ ಸಂರಕ್ಷಿಸೋ

  ಶಕ್ತಿ ನಿನ್ನ ರಾಜ್ಯಕ್ಕಿದೆ.

  ಯೆಹೋವನೇ ನಿನ್ನ

  ರಾಜ್ಯ ಬರಲಿ ಬರಲಿ!

 3. ಸ್ವರ್ಗದ ದೂತರ ಸ್ತುತಿ

  ಆನಂದದ ಧ್ವನಿ.

  ಸೈತಾನನ ಸುಳ್ಳಿನಿಂದ

  ಮುಕ್ತವಾಯ್ತು ಸ್ವರ್ಗ.

  ರಾಜ್ಯ ಪ್ರಾರಂಭವಾಗಿದೆ

  ಭೂಮಿಯನ್ನು ಆಳಲಿದೆ.

  (ಪಲ್ಲವಿ)

  ನಮ್ಮ ಸಂರಕ್ಷಿಸೋ

  ಶಕ್ತಿ ನಿನ್ನ ರಾಜ್ಯಕ್ಕಿದೆ.

  ಯೆಹೋವನೇ ನಿನ್ನ

  ರಾಜ್ಯ ಬರಲಿ ಬರಲಿ!