ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಗೀತೆ 153

ಹೇಗನಿಸುತ್ತದೆ?

ಹೇಗನಿಸುತ್ತದೆ?

ಡೌನ್‌ಲೋಡ್‌:

(ಇಬ್ರಿಯ 13:15)

 1. ಹೇಗನಿಸುತ್ತದೆ?

  ಸಾರುವಾಗ ಸುವಾರ್ತೆ

  ದೀನರ ಹುಡುಕುವಾಗ

  ಕಲಿಸುವಾಗ.

  ಪ್ರಯತ್ನವ ಮಾಡಿ

  ದೇವ ಸಹಾಯ ನೋಡಿ.

  ಯೋಗ್ಯರ ಸೆಳೆಯದೆ

  ಇರನು ಯೆಹೋವ.

  (ಪಲ್ಲವಿ)

  ಉತ್ಸಾಹಕ್ಕೆ ಉಲ್ಲಾಸಕ್ಕೆ

  ಕಾರಣ ರಾಜ್ಯ ಸೇವೆಯೇ.

  ನಾವಿದನೆಂದೂ ಬಿಡೆವು

  ಸಾರುವೆವೆಂದೆಂದು.

 2. ಹೇಗನಿಸುತ್ತದೆ?

  ಮೊಳೆತಾಗ ಸುವಾರ್ತೆ

  ಜನರು ಮನಗಂಡು

  ನಂಬಿದರೆ ವಾಕ್ಯ.

  ಕೇಳಲಿ ಬಿಡಲಿ

  ಕೋಪವನ್ನೇ ತೋರಲಿ

  ಹಿಮ್ಮೆಟ್ಟೆವು ಅದಕ್ಕೆ

  ನಾವಂತೂ ಹೆದರಿ.

  (ಪಲ್ಲವಿ)

  ಉತ್ಸಾಹಕ್ಕೆ ಉಲ್ಲಾಸಕ್ಕೆ

  ಕಾರಣ ರಾಜ್ಯ ಸೇವೆಯೇ.

  ನಾವಿದನೆಂದೂ ಬಿಡೆವು

  ಸಾರುವೆವೆಂದೆಂದು.

 3.   ಹೇಗನಿಸುತ್ತದೆ?

  ಶ್ರಮ ಫಲ ಕೊಟ್ಟಾಗ

  ದೇವರ ಆಶೀರ್ವಾದ

  ಕಣ್ಣಾರೆ ಕಂಡಾಗ.

  ಹೆಮ್ಮೆಯಿಂದ ಸಾರಿ

  ಧೈರ್ಯದಿಂದ ಮಾತಾಡಿ

  ಸೌಜನ್ಯದ ಸ್ವರವು

  ಕೊಡುತೆ ಗೆಲುವು.

  (ಪಲ್ಲವಿ)

  ಉತ್ಸಾಹಕ್ಕೆ ಉಲ್ಲಾಸಕ್ಕೆ

  ಕಾರಣ ರಾಜ್ಯ ಸೇವೆಯೇ.

  ನಾವಿದನೆಂದೂ ಬಿಡೆವು

  ಸಾರುವೆವೆಂದೆಂದು.