ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಗೀತೆ 152

ಯೆಹೋವ ನೀನೇ ಆಶ್ರಯ

ಯೆಹೋವ ನೀನೇ ಆಶ್ರಯ

ಡೌನ್‌ಲೋಡ್‌:

(ಜ್ಞಾನೋಕ್ತಿ 14:26)

 1. ಓ ಯೆಹೋವ, ನಿನ್ನ ವಾಗ್ದಾನ

  ಈ ಬಾಳ ಕಿರಣ,

  ಜಗಕೆ ಇದ ಸಾರೋಣ

  ಎಂದಿದೆ ಈ ಮನ.

  ಭಯ ಆವರಿಸಿದೆ ಎನ್ನ,

  ಚಿಂತೆ ಮೂಲ ಕಾರಣ.

  ಕೇಳಿಯೂ ನಿನ್ನ ವಾಗ್ದಾನ

  ಕುಗ್ಗುತ್ತಿದೆ ಮನ.

  (ಪಲ್ಲವಿ)

  ನಂಬಿದ್ದೇನೆ ನಿನ್ನ

  ನೀನೇ ಆಶ್ರಯ

  ಭಯ ನೀಗಿಸು ಯೆಹೋವ.

  ಕಲಿಸಿ ಸತತ,

  ಸಾಕ್ಷಿ ನೀಡುತ್ತಾ

  ಶಕ್ತಿ ಪಡೆವೆ ನಿನ್ನಿಂದ.

 2. ಕಷ್ಟದ ಬಿಸಿ ತಟ್ಟಿದಾಗ

  ತಂಗಾಳಿ ನೀನಾದೆ,

  ನೋವಿನ ಸುಳೀಲಿದ್ದಾಗ

  ನನ್ನ ಕೈಹಿಡಿದೆ.

  ನಿನ್ನೀ ಪ್ರೀತಿಯ ನೆನೆವಾಗ

  ಹೃದಯ ಅರಳುತ್ತೆ,

  ಸಾರಲೇ ಬೇಕೆಂಬ ಛಲ

  ಮನದಿ ಉಕ್ಕುತ್ತೆ.

  (ಪಲ್ಲವಿ)

  ನಂಬಿದ್ದೇನೆ ನಿನ್ನ

  ನೀನೇ ಆಶ್ರಯ

  ಭಯ ನೀಗಿಸು ಯೆಹೋವ.

  ಕಲಿಸಿ ಸತತ,

  ಸಾಕ್ಷಿ ನೀಡುತ್ತಾ

  ಶಕ್ತಿ ಪಡೆವೆ ನಿನ್ನಿಂದ.