ಗೀತೆ 146
ನನಗೂ ಮಾಡಿದಂತೆ
-
ಅಭಿಷಿಕ್ತರಿಗೆ ಮಹಾ ಸಮೂಹವು
ತೋರುತ್ತದೆ ಪ್ರೀತಿ ಕೊನೆವರೆಗೂ.
ಸ್ನೇಹದ ಈ ನಡೆಯ
ಯೇಸು ಮರೆಯ
ಮಾಡುತ್ತಾನೆ ಅದನ್ನು ಆತ ಮಾನ್ಯ.
(ಪಲ್ಲವಿ)
“ನೀವು ಅವರಿಗೆ ಮಾಡಿದ್ದೆಲ್ಲವೂ
ನೀವು ನನಗೂ ಮಾಡಿ ದಂತಾಯಿತು.
ನಿಮ್ಮ ಒಲವು ಅವರ ಬಲವು
ನೀವವರಿಗೆ ಮಾಡಿದ್ದೆಲ್ಲವೂ
ನೀವು ನನಗೂ ಮಾಡಿದಂತಾಯಿತು.”
-
“ನಾ ಹಸಿದಿದ್ದಾಗ ನಾ ಬಾಯಾರಿದ್ದಾಗ
ಕೈದೆರೆದು ನೀವು ಕೊಟ್ಟಿರೆನಗೆ.”
“ಹೇಳು ಸ್ವಾಮಿ ನಾವೆಂದು
ಕೊಟ್ಟೆವು ನಿಂಗೆ?”
ಎಂದಾಗ ಯೇಸು ಹೇಳುವನು ಹೀಗೆ:
(ಪಲ್ಲವಿ)
“ನೀವು ಅವರಿಗೆ ಮಾಡಿದ್ದೆಲ್ಲವೂ
ನೀವು ನನಗೂ ಮಾಡಿ ದಂತಾಯಿತು.
ನಿಮ್ಮ ಒಲವು ಅವರ ಬಲವು
ನೀವವರಿಗೆ ಮಾಡಿದ್ದೆಲ್ಲವೂ
ನೀವು ನನಗೂ ಮಾಡಿದಂತಾಯಿತು.”
-
ನೀವು ಹೆಗಲಿಗೆ ಹೆಗಲನ್ನು ಕೊಟ್ಟು
ಶ್ರಮಿಸಿದಿರಿ ರಾಜ್ಯವ ಮುಂದಿಟ್ಟು.
ಕೊಡಲು ಬಹುಮಾನ
ಕಾದಿದೆ ಮನ
ಅದು ಭೂಮೀಲಿ ಅನಂತ ಜೀವನ.
(ಪಲ್ಲವಿ)
“ನೀವು ಅವರಿಗೆ ಮಾಡಿದ್ದೆಲ್ಲವೂ
ನೀವು ನನಗೂ ಮಾಡಿ ದಂತಾಯಿತು.
ನಿಮ್ಮ ಒಲವು ಅವರ ಬಲವು
ನೀವವರಿಗೆ ಮಾಡಿದ್ದೆಲ್ಲವೂ
ನೀವು ನನಗೂ ಮಾಡಿದಂತಾಯಿತು.”
(ಜ್ಞಾನೋ. 19:17; ಮತ್ತಾ. 10:40-42; 2 ತಿಮೊ. 1:16,17 ಸಹ ನೋಡಿ.)