ಮಹಾ ಬೋಧಕನಿಂದ ಕಲಿಯೋಣ

ಮಕ್ಕಳ ತರಬೇತಿಗಾಗಿ ಅತ್ಯುತ್ತಮ ಸಲಹೆಸೂತ್ರಗಳು ಬೈಬಲಿನಲ್ಲಿವೆ. ಬೈಬಲಿನಲ್ಲಿ ಸಿಗುವ ಮಾರ್ಗದರ್ಶನೆ ಸರಿಸಾಟಿಯಿಲ್ಲದ್ದು. ಮಕ್ಕಳು ಮಾನವರಿಂದಲ್ಲ ತಮ್ಮ ಸೃಷ್ಟಿಕರ್ತ ದೇವರಿಂದ ಕಲಿಯಬಹುದು.

ನಮ್ಮ ಮಕ್ಕಳಿಗೆ ಏನು ಅವಶ್ಯ

ಮಕ್ಕಳ ಮತ್ತು ಅವರ ಜೊತೆಗೂಡಿ ಓದುವವರ ನಡುವೆ ಮುಕ್ತ ಸಂಭಾಷಣೆಗೆ ದಾರಿ ಮಾಡಿಕೊಡುವಂತೆ ಈ ಪುಸ್ತಕವನ್ನು ತಯಾರಿಸಲಾಗಿದೆ.

ಅಧ್ಯಾಯ 1

ಮಹಾ ಬೋಧಕ ಯೇಸು

ಯೇಸು ಯಾವ ವಿಷಯಗಳ ಬಗ್ಗೆ ಕಲಿಸಿದನು? ಆತನು ಯಾರಿಂದ ಕಲಿತನು?

ಅಧ್ಯಾಯ 2

ಪ್ರೀತಿಯ ದೇವರಿಂದ ಬಂದ ಒಂದು ಪತ್ರ

ಬೇರೆಲ್ಲಾ ಪುಸ್ತಕಗಳಿಗಿಂತ ಅಮೂಲ್ಯವಾದ ಪುಸ್ತಕದಲ್ಲಿ ಆತನ ಪತ್ರವಿದೆ.

ಅಧ್ಯಾಯ 3

ನಮ್ಮೆಲ್ಲರನ್ನು ಸೃಷ್ಟಿಸಿದವರು ಯಾರು?

ಪಕ್ಷಿಗಳನ್ನು ಸೃಷ್ಟಿಮಾಡಿದವನು, ಅವುಗಳಿಗೆ ಹಾಡಲು ಕಲಿಸಿಕೊಟ್ಟವನು ಯಾರು? ಹಸಿರು ಹುಲ್ಲನ್ನು ಸೃಷ್ಟಿಮಾಡಿದ್ದು ಯಾರು? ನಿನ್ನನ್ನು ಯಾರು ಸೃಷ್ಟಿಮಾಡಿದರು?

ಅಧ್ಯಾಯ 4

ದೇವರ ಹೆಸರು

ನಮ್ಮೆಲ್ಲರಿಗೂ ಒಂದೊಂದು ಹೆಸರಿದೆ. ದೇವರ ಹೆಸರು ಏನು ಗೊತ್ತಾ? ಆತನ ಹೆಸರು ಯಾಕೆ ಮಹತ್ವವಾಗಿದೆ?

ಅಧ್ಯಾಯ 5

‘ಇವನು ನನ್ನ ಮಗ’

ಯೇಸುವನ್ನು ಯಾಕೆ ವಿಶೇಷ ವ್ಯಕ್ತಿಯಾಗಿದ್ದಾನೆ?

ಅಧ್ಯಾಯ 6

ಮಹಾ ಬೋಧಕನು ಇತರರ ಸೇವೆಮಾಡಿದನು

ಯಾರಾದರೂ ನಿನಗೆ ಸಹಾಯ ಮಾಡಿದರೆ ಖುಷಿಯಾಗುತ್ತೆ ಅಲ್ವಾ? ನಮ್ಮೆಲ್ಲರಿಗೂ ಖುಷಿಯಾಗುತ್ತೆ. ಮಹಾ ಬೋಧಕನಾದ ಯೇಸುವಿಗೆ ಇದು ಚೆನ್ನಾಗಿ ಗೊತ್ತಿತ್ತು.

ಅಧ್ಯಾಯ 7

ವಿಧೇಯತೆ ತೋರಿಸುವುದು ನಿನ್ನನ್ನು ಸಂರಕ್ಷಿಸುತ್ತದೆ

ಚಿಕ್ಕವರು ದೊಡ್ಡವರಿಂದ ಕಲಿಯಬಹುದು. ದೇವರು ಒಂದು ವಿಷಯ ಮಾಡು ಅಂತ ನಮಗೆ ಹೇಳಿದಾಗ ಅದನ್ನು ನಾವು ಮಾಡಬೇಕು. ಯಾಕೆಂದರೆ ದೇವರು ಹೇಳಿರುವುದರಿಂದ ಅದು ಸರಿನೇ ಇರುತ್ತದೆ.

ಅಧ್ಯಾಯ 8

ದೇವರು ಎಲ್ಲರಿಗಿಂತಲೂ ಉನ್ನತನಾಗಿದ್ದಾನೆ

ಅವರಲ್ಲಿ ಕೆಲವರು ಒಳ್ಳೆಯವರು ಮತ್ತು ಇನ್ನೂ ಕೆಲವರು ಕೆಟ್ಟವರು.

ಅಧ್ಯಾಯ 9

ನಾವು ಪ್ರಲೋಭನೆಗಳಿಗೆ ಬಲಿಯಾಗಬಾರದು

ಯಾರಾದರೂ ಕೆಟ್ಟ ಕೆಲಸ ಮಾಡುವಂತೆ ನಿನ್ನನ್ನು ಒತ್ತಾಯ ಮಾಡಿದಾಗ ನೀನು ಏನು ಮಾಡುತ್ತೀಯಾ?

ಅಧ್ಯಾಯ 10

ದೆವ್ವಗಳಿಗಿಂತ ಯೇಸು ಶಕ್ತಿಶಾಲಿ

ದೆವ್ವಗಳಿಗೆ ನಾವು ಹೆದರುವ ಅವಶ್ಯಕತೆ ಇಲ್ಲ. ಆದರೂ ಅವುಗಳು ನಮ್ಮನ್ನು ಮೋಸಮಾಡದಿರುವಂತೆ ನಾವು ಎಚ್ಚರವಾಗಿರಬೇಕು.

ಅಧ್ಯಾಯ 11

ದೇವದೂತರ ಸಹಾಯ

ಯೆಹೋವನನ್ನು ಪ್ರೀತಿಸುವ ಮತ್ತು ಆತನ ಸೇವೆ ಮಾಡುವ ಜನರಿಗೆ ದೇವದೂತರು ಸಹಾಯ ಮಾಡುತ್ತಾರೆ.

ಅಧ್ಯಾಯ 12

ಪ್ರಾರ್ಥನೆ ಮಾಡುವುದು ಹೇಗೆಂದು ಯೇಸು ಕಲಿಸುತ್ತಾನೆ

ನೀನು ಯಾವಾಗ ಬೇಕಾದ್ರೂ ಪ್ರಾರ್ಥನೆ ಮಾಡಬಹುದು, ದಿನದಲ್ಲಾದರೂ ಮಾಡಬಹುದು ರಾತ್ರಿಯಲ್ಲಾದರೂ ಮಾಡಬಹುದು. ಆತನು ನಿನ್ನ ಪ್ರಾರ್ಥನೆ ಕೇಳುತ್ತಾನೆ.

ಅಧ್ಯಾಯ 13

ಯೇಸುವಿನ ಶಿಷ್ಯರು ಯಾರು?

ಅವರು ಎಂಥ ವ್ಯಕ್ತಿಗಳಾಗಿದ್ದರು?

ಅಧ್ಯಾಯ 14

ನಾವು ಏಕೆ ಕ್ಷಮಿಸಬೇಕು?

ಯಾಕೆ ಕ್ಷಮಿಸಬೇಕು ಎಂದು ಅರ್ಥಮಾಡಿಕೊಳ್ಳಲು ಯೇಸು ನಮಗೆ ಕಥೆಯೊಂದನ್ನು ಹೇಳಿದ್ದಾನೆ.

ಅಧ್ಯಾಯ 15

ದಯೆ ತೋರಿಸುವ ಕುರಿತು ಒಂದು ಪಾಠ

ದಯೆ ತೋರಿಸಿದ ಸಮಾರ್ಯದವನ ಕಥೆಯಿಂದ ಪಾಠ ಕಲಿಯೋಣ.

ಅಧ್ಯಾಯ 16

ಯಾವುದು ಪ್ರಾಮುಖ್ಯ?

ದೇವರ ವಿಷಯದಲ್ಲಿ ನಾವು ಹೇಗೆ ಐಶ್ವರ್ಯವಂತರಾಗಬಹುದು?

ಅಧ್ಯಾಯ 17

ಸಂತೋಷದ ಗುಟ್ಟು

ಪ್ರಾಮುಖ್ಯವಾದ ಗುಟ್ಟಿನ ಬಗ್ಗೆ ಮಹಾ ಬೋಧಕ ತಿಳಿಸಿದ್ದಾನೆ.

ಅಧ್ಯಾಯ 18

ಧನ್ಯವಾದ ಹೇಳಲು ನಾವು ಮರೆಯಬಾರದು

ಹತ್ತು ಕುಷ್ಠರೋಗಿಗಳ ಉದಾಹರಣೆಯಿಂದ ನೀನು ಕಲಿಯಬಹುದು.

ಅಧ್ಯಾಯ 19

ಜಗಳವಾಡುವುದು ಸರಿಯಾ?

ಜಗಳ ಶುರುವಾಗುತ್ತೆ ಅಂತ ಅನಿಸಿದಾಗ ನೀನೇನು ಮಾಡುತ್ತೀಯಾ?

ಅಧ್ಯಾಯ 20

ಮೊದಲಿಗನಾಗಬೇಕು ಎಂದು ಆಸೆಪಡುತ್ತಿಯಾ?

ಇದರ ಬಗ್ಗೆ ಯೇಸುವಿನ ಶಿಷ್ಯರು ವಾದಕ್ಕಿಳಿದಾಗ ಯೇಸು ಏನು ಹೇಳಿದನು?

ಅಧ್ಯಾಯ 21

ಜಂಬ ಕೊಚ್ಚಿಕೊಳ್ಳುವುದು ಸರಿನಾ?

ಯೇಸು ಒಬ್ಬ ಫರಿಸಾಯನ ಮತ್ತು ತೆರಿಗೆ ವಸೂಲಿಗಾರನ ಕಥೆ ಹೇಳುತ್ತಾನೆ.

ಅಧ್ಯಾಯ 22

ಸುಳ್ಳು ಹೇಳುವುದು ತಪ್ಪೇಕೆ?

ಅನನೀಯ ಮತ್ತು ಸಪ್ಫೈರಳಿಗೆ ಯೆಹೋವನು ಏನು ಮಾಡಿದನೆಂದು ನೋಡಿ.

ಅಧ್ಯಾಯ 23

ಜನರೇಕೆ ಕಾಯಿಲೆ ಬೀಳುತ್ತಾರೆ?

ಜನರಿಗೆ ಯಾವುದೇ ಕಾಯಿಲೆ ಇಲ್ಲದ ಸಮಯ ಯಾವತ್ತಾದರೂ ಬರುತ್ತಾ?

ಅಧ್ಯಾಯ 24

ಕಳ್ಳತನ ಮಾಡಬೇಡ

ತಮ್ಮದಲ್ಲದ್ದನ್ನು ತೆಗೆದುಕೊಂಡ ನಾಲ್ಕು ಜನರ ಉದಾಹರಣೆ ನೋಡಿ.

ಅಧ್ಯಾಯ 25

ಕೆಟ್ಟವರು ಒಳ್ಳೆಯವರಾಗಲು ಸಾಧ್ಯನಾ?

ಸೌಲ ಮತ್ತು ವೇಶ್ಯೆಯ ಉದಾಹರಣೆ ಇದಕ್ಕೆ ಉತ್ತರ ಕೊಡುತ್ತದೆ.

ಅಧ್ಯಾಯ 26

ಒಳ್ಳೇದನ್ನು ಮಾಡುವುದು ಸುಲಭವಲ್ಲ

ಕೆಟ್ಟವರು ಹೇಳಿದ್ದನ್ನು ನೀನು ಮಾಡದೇ ಇದ್ದರೆ ಅವರು ನಿನಗೆ ಏನು ಮಾಡುತ್ತಾರೆ?

ಅಧ್ಯಾಯ 27

ಸರ್ವಶಕ್ತ ದೇವರು ಯಾರು?

ಜನರು ಅನೇಕ ದೇವರುಗಳನ್ನು ಆರಾಧಿಸುತ್ತಾರೆ. ನೀವೇನು ಮಾಡಬೇಕು? ಮೂರು ಇಬ್ರಿಯ ಯುವಕರು ಉತ್ತರ ಕೊಡುತ್ತಾರೆ.

ಅಧ್ಯಾಯ 28

ಯಾರ ಮಾತಿಗೆ ವಿಧೇಯರಾಗಬೇಕು?

“ಕೈಸರನದನ್ನು ಕೈಸರನಿಗೆ ಕೊಡಿರಿ, ಆದರೆ ದೇವರದನ್ನು ದೇವರಿಗೆ ಕೊಡಿರಿ.”

ಅಧ್ಯಾಯ 29

ಯಾವ ರೀತಿಯ ಪಾರ್ಟಿ ದೇವರಿಗೆ ಇಷ್ಟ?

ಬೈಬಲ್‌ನಲ್ಲಿ ಕೆಲವು ಪಾರ್ಟಿಗಳ ಬಗ್ಗೆ ತಿಳಿಸಿರುವುದು ನಿನಗೆ ಗೊತ್ತಾ? ಈ ಪಾರ್ಟಿಗಳ ಬಗ್ಗೆ ದೇವರಿಗೆ ಯಾವ ಅನಿಸಿಕೆ ಇತ್ತು ಅಂತ ನಮಗೆ ಗೊತ್ತಾಗುತ್ತದೆ.

ಅಧ್ಯಾಯ 30

ಭಯವನ್ನು ಜಯಿಸಲು ನೆರವು

ಯೆಹೋವನ ಸೇವೆ ಮಾಡುವುದು ಸುಲಭ ಅಂತ ಮಹಾ ಬೋಧಕ ಹೇಳಲಿಲ್ಲ. ಆದರೂ ಧೈರ್ಯವಾಗಿರಲು ಮತ್ತು ಸಹಾಯ ಪಡಕೊಳ್ಳಲು ಸಾಧ್ಯ.

ಅಧ್ಯಾಯ 31

ಯಾರು ನಮಗೆ ಸಾಂತ್ವನ ಕೊಡುತ್ತಾರೆ?

ನಿನಗೆ ಬೇಜಾರಾದಾಗ, ಒಂಟಿ ಅನಿಸಿದಾಗ ಏನು ಮಾಡಬೇಕು?

ಅಧ್ಯಾಯ 32

ದೇವರ ಸಂರಕ್ಷಣೆಯಲ್ಲಿ ಪುಟ್ಟ ಯೇಸು

ಯೇಸು ಮಗುವಾಗಿದ್ದಾಗ ಅವನನ್ನು ಕೊಲ್ಲಲು ಹೊಂಚುಹಾಕಿದವರಿಂದ ಯೆಹೋವನು ಹೇಗೆ ಕಾಪಾಡಿದನು ಎಂದು ನೋಡಿ.

ಅಧ್ಯಾಯ 33

ಯೇಸು ನಮ್ಮನ್ನು ಸಂರಕ್ಷಿಸುವನು

ಅವನು ಭೂಮಿಯಲ್ಲಿದ್ದಾಗ ತನ್ನನ್ನು ಪ್ರೀತಿಸುವವರನ್ನು ತಾನು ಹೇಗೆ ಕಾಪಾಡುವೆನು ಎಂದು ತೋರಿಸಿಕೊಟ್ಟನು.

ಅಧ್ಯಾಯ 34

ಸತ್ತ ಮೇಲೆ ಏನಾಗುತ್ತದೆ?

ಸಾವಿಗಾಗಲಿ ಸತ್ತವರಿಗಾಗಲಿ ಹೆದರಬೇಕಾ?

ಅಧ್ಯಾಯ 35

ಮೃತರು ಬದುಕಸಾಧ್ಯವಿದೆ!

ಸತ್ತವರನ್ನು ಮತ್ತೆ ಜೀವದಿಂದ ಎಬ್ಬಿಸುವ ಶಕ್ತಿಯನ್ನು ದೇವರು ಯೇಸುವಿಗೆ ಕೊಟ್ಟನು, ತೀರಿಹೋದ ಮಕ್ಕಳನ್ನು ಸಹ ಎಬ್ಬಿಸುವ ಶಕ್ತಿಯನ್ನು ಕೊಟ್ಟನು.

ಅಧ್ಯಾಯ 36

ಯಾರಿಗೆ ಪುನರುತ್ಥಾನ ಆಗುವುದು? ಅವರು ಎಲ್ಲಿ ಜೀವಿಸುವರು?

ಈ ಪ್ರಶ್ನೆಗಳ ಬಗ್ಗೆ ಯೇಸು ಏನು ಹೇಳುತ್ತಾನೆ?

ಅಧ್ಯಾಯ 37

ಯೆಹೋವನನ್ನೂ ಯೇಸುವನ್ನೂ ಜ್ಞಾಪಿಸಿಕೊಳ್ಳಬೇಕು

ಯೆಹೋವ ಮತ್ತು ಯೇಸು ನಮಗಾಗಿ ಏನು ಮಾಡಿದ್ದಾರೋ ಅದನ್ನು ಸ್ಮರಿಸುವುದಕ್ಕಾಗಿ ಯೇಸು ಒಂದು ವಿಶೇಷ ವಿಧಾನವನ್ನು ತನ್ನ ಹಿಂಬಾಲಕರಿಗೆ ತೋರಿಸಿಕೊಟ್ಟನು.

ಅಧ್ಯಾಯ 38

ಯೇಸುವನ್ನು ನಾವೇಕೆ ಪ್ರೀತಿಸಬೇಕು?

ನಮಗೆ ನಿತ್ಯಜೀವ ಸಿಗಬೇಕೆಂದು ಅವನು ತನ್ನ ಪರಿಪೂರ್ಣ ಜೀವ ಕೊಟ್ಟನು!

ಅಧ್ಯಾಯ 39

ದೇವರು ಯೇಸುವನ್ನು ಪುನರುತ್ಥಾನಗೊಳಿಸುತ್ತಾನೆ

ಯೇಸುವಿಗೆ ಪುನರುತ್ಥಾನವಾಯಿತು.

ಅಧ್ಯಾಯ 40

ದೇವರ ಹೃದಯವನ್ನು ಸಂತೋಷಪಡಿಸು

“ಮಗನೇ [ಅಥವಾ ಮಗಳೇ], ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು” ಎಂದು ಬೈಬಲಿನ ಒಂದು ಜ್ಞಾನೋಕ್ತಿ ಹೇಳುತ್ತದೆ.

ಅಧ್ಯಾಯ 41

ದೇವರಿಗೆ ಸಂತೋಷ ತರುವ ಚಿಣ್ಣರು

ದೇವರಿಗೆ ಸಂತೋಷ ತರುವಂಥ ಯಾವ ವಿಷಯಗಳನ್ನು ನೀನು ಮಾಡಬಹುದು?

ಅಧ್ಯಾಯ 42

ಕೆಲಸ ಕಲಿ ನಕ್ಕು ನಲಿ

ಕೆಲಸ ಮಾಡುವುದರಿಂದ ಮನಸ್ಸಿಗಷ್ಟೇ ನೆಮ್ಮದಿಯಲ್ಲ ಶಾರೀರಿಕವಾಗಿಯೂ ಅನೇಕ ಪ್ರಯೋಜನವಿದೆ. ಕೆಲಸ ಮಾಡುವುದನ್ನು ಹೇಗೆ ಆನಂದಿಸಬಹುದು ಅನ್ನುವುದನ್ನು ಕಲಿಯಿರಿ.

ಅಧ್ಯಾಯ 43

ನಮ್ಮ ಸಹೋದರ ಸಹೋದರಿಯರು ಯಾರು?

ನಮ್ಮ ಒಡಹುಟ್ಟಿದವರು ಮಾತ್ರ ನಮಗೆ ಸಹೋದರ ಸಹೋದರಿಯರಾ?

ಅಧ್ಯಾಯ 44

ನಾವು ಯಾರೊಂದಿಗೆ ಗೆಳೆತನ ಬೆಳೆಸಬೇಕು?

“ಮೋಸಹೋಗಬೇಡಿರಿ. ದುಸ್ಸಹವಾಸಗಳು ಸದಾಚಾರಗಳನ್ನು ಕೆಡಿಸುತ್ತವೆ.”

ಅಧ್ಯಾಯ 45

ದೇವರ ರಾಜ್ಯ ಅಂದರೇನು? ಅದನ್ನು ಬೆಂಬಲಿಸುವುದು ಹೇಗೆ?

ಭೂಮಿಯ ಮೇಲೆ ಯೇಸುವಿಗೆ ಅಧಿಕಾರ ಸಿಕ್ಕಿದಾಗ ಆತನು ದೊಡ್ಡ ದೊಡ್ಡ ಬದಲಾವಣೆಗಳನ್ನು ತರಲಿದ್ದಾನೆ.

ಅಧ್ಯಾಯ 46

ಜಲಪ್ರಳಯ-ಮತ್ತೆ ಲೋಕವನ್ನು ನಾಶಮಾಡುತ್ತಾ?

ನೀತಿವಂತರು ಸದಾಕಾಲ ಭೂಮಿಯಲ್ಲಿ ಜೀವಿಸುವರು.

ಅಧ್ಯಾಯ 47

ಅರ್ಮಗೆದೋನ್‌ ಬಲು ಹತ್ತಿರವಿದೆ!

ಸೂಚನೆಗಳು ನಮ್ಮ ಸುತ್ತಮುತ್ತ ನಡೆಯುತ್ತಿವೆ.

ಅಧ್ಯಾಯ 48

ದೇವರ ಹೊಸ ಲೋಕದಲ್ಲಿ ಜೀವಿಸಲು ನೀನೇನು ಮಾಡಬೇಕು?

ಅಲ್ಲಿ ಸದಾಕಾಲ ಜೀವಿಸಲು ನೀನೇನು ಮಾಡಬೇಕು?